ಲೈಂಗಿಕ ಕಿರುಕುಳ ಪ್ರಕರಣ: ಕೇವಲ ಎರಡು ದಿನದಲ್ಲೇ ವಿಚಾರಣೆ ಮುಗಿಸಿ ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

ಸೆಪ್ಟೆಂಬರ್ 28ರಂದು ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 4 ರಂದು ವಿಚಾರಣೆ ಪ್ರಾರಂಭವಾಗಿತ್ತು. ಮರುದಿನವೇ ತೀರ್ಪು ಪ್ರಕಟವಾಯಿತು.
ಲೈಂಗಿಕ ಕಿರುಕುಳ ಪ್ರಕರಣ: ಕೇವಲ ಎರಡು ದಿನದಲ್ಲೇ ವಿಚಾರಣೆ ಮುಗಿಸಿ ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನ್ಯಾಯಾಲಯವೊಂದು ಕೇವಲ ಎರಡು ದಿನಗಳ ವಿಚಾರಣೆ ನಡೆಸಿ ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿದ್ದು ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಕಡಿಮೆ ಅವಧಿಯಲ್ಲಿ ಹೊರಬಿದ್ದ ತೀರ್ಪುಗಳಲ್ಲಿ ಒಂದಾಗಿದೆ.

ಆ ಮೂಲಕ ಮುಂಬೈನ ಎಸ್‌ಪ್ಲನೇಡ್‌ನಲ್ಲಿರುವ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಯನ್ನು ಬಂಧಿಸಿದ 15 ದಿನಗಳಲ್ಲಿ ಮತ್ತು ಪ್ರಕರಣ ದಾಖಲಾದ 7 ದಿನಗಳಲ್ಲಿ ಶಿಕ್ಷೆ ವಿಧಿಸಿದೆ. ಆರೋಪಿಗೆ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.

"ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕಾನೂನು ರೂಪುಗೊಳ್ಳುವುದರೊಂದಿಗೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆ ಅಪರಾಧಕ್ಕೆ ಸಹಕರಿಸುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಆಕೆ ನುಡಿದ ಸಾಕ್ಷಿಯು ಗಾಯಗೊಂಡ ಮಾಹಿತಿದಾರ ಅಥವಾ ಸಾಕ್ಷಿಯು ನುಡಿದ ಸಾಕ್ಷ್ಯಕ್ಕೆ ಹೊಂದಿಕೆಯಾಗುತ್ತದೆ "ಎಂದು ನ್ಯಾಯಾಧೀಶ ಯಶಶ್ರೀ ಮರುಲ್ಕರ್ ಹೇಳಿದರು.

Also Read
ಸಂತ್ರಸ್ತೆಯೊಂದಿಗೆ ಮದುವೆಯಾದ ಮಾತ್ರಕ್ಕೆ ಅತ್ಯಾಚಾರ, ಫೋಕ್ಸೋ ಅಡಿಯ ವಿಚಾರಣೆ ರದ್ದು ಮಾಡಲಾಗದು: ಕೇರಳ ಹೈಕೋರ್ಟ್‌

ಕೃತ್ಯ ಸಂತ್ರಸ್ತೆಯ ಅತ್ಯುನ್ನತ ಘನತೆಗೆ ಎಸಗಿದ ಅಪಚಾರವಾಗಿದ್ದು ಆಕೆಯನ್ನು ಹೀನವಾಗಿಸಿ, ಅವಮಾನಿಸುವ ಯತ್ನವಾಗಿದೆ. ಇದು ಅಕೆಯ ಮನಸ್ಸಿನ ಮೇಲೆ ಆಘಾತಕಾರಿ ಪರಿಣಾಮವನ್ನು ಉಳಿಸಲಿದೆ ಎಂದು ನ್ಯಾಯಾಲಯ ಹೇಳಿದೆ.

ಸೆಪ್ಟೆಂಬರ್ 28ರಂದು ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 4 ರಂದು ವಿಚಾರಣೆ ಪ್ರಾರಂಭವಾಗಿತ್ತು. ಮರುದಿನವೇ ತೀರ್ಪು ಪ್ರಕಟವಾಯಿತು.

Related Stories

No stories found.
Kannada Bar & Bench
kannada.barandbench.com