ಸದಸ್ಯರ ಪೋಸ್ಟ್‌ಗಳಿಗೆ ವಾಟ್ಸಾಪ್ ಗುಂಪಿನ ಅಡ್ಮಿನ್ ಹೊಣೆಗಾರರಲ್ಲ: ಪೋಕ್ಸೊ ಪ್ರಕರಣ ರದ್ದುಗೊಳಿಸಿದ ಕೇರಳ ಹೈಕೋರ್ಟ್

"ಗುಂಪಿನ ಸದಸ್ಯರು ಪೋಸ್ಟ್ ಮಾಡಿದ ಯಾವುದೇ ಆಕ್ಷೇಪಾರ್ಹ ವಿಷಯಕ್ಕೆ ಅಡ್ಮಿನ್ ಜವಾಬ್ದಾರರಾಗಿರುವುದಿಲ್ಲ ಎಂಬ ಸಾಮರ್ಥ್ಯದಡಿ ಮಾತ್ರ ವಾಟ್ಸಾಪ್ ಗುಂಪಿನ ಸೃಷ್ಟಿಕರ್ತರು ಅಥವಾ ನಿರ್ವಾಹಕರು ಕಾರ್ಯನಿರ್ವಹಿಸುತ್ತಾರೆ, " ಎಂದು ನ್ಯಾಯಾಲಯ ಹೇಳಿದೆ.
Kerala High Court and WhatsApp

Kerala High Court and WhatsApp

ಸದಸ್ಯರು ಮಾಡುವ ಯಾವುದೇ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ವಾಟ್ಸಾಪ್ ಗ್ರೂಪ್‌ ಸೃಷ್ಟಿಕರ್ತರು ಅಥವಾ ನಿರ್ವಾಹಕರನ್ನು ಹೊಣೆ ಮಾಡಲಾಗದು ಎಂದು ಕೇರಳ ಹೈಕೋರ್ಟ್‌ ಬುಧವಾರ ಹೇಳಿದೆ [ಮ್ಯಾನುಯಲ್ ಮತ್ತು ಕೇರಳಸರ್ಕಾರ ನಡುವಣ ಪ್ರಕರಣ].

ಅಡ್ಮಿನ್‌ ಆದವರು ಸದಸ್ಯರನ್ನು ಗುಂಪಿಗೆ ಸೇರಿಸಬಹುದು ಇಲ್ಲವೇ ತೆಗೆದುಹಾಕುವುದಷ್ಟೇ. ಅವರು ಎಂತಹ ಪೋಸ್ಟ್‌ ಮಾಡುತ್ತಾರೆ ಎಂಬ ಬಗ್ಗೆ ನಿಜಕ್ಕೂ ಅವರಿಗೆ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಇತರೆ ಸದಸ್ಯರ ಪೋಸ್ಟ್‌ಗಳಿಗೆ ಪರೋಕ್ಷವಾಗಿ ಅವರು ಜವಾಬ್ದಾರರಾಗುವುದಿಲ್ಲ ಎಂದು ಬಾಂಬೆ ಮತ್ತು ದೆಹಲಿ ಹೈಕೋರ್ಟ್‌ಗಳು ತೀರ್ಪು ನೀಡಿರುವುದನ್ನು ನ್ಯಾ. ಕೌಸರ್ ಎಡಪ್ಪಗತ್ ತಿಳಿಸಿದರು.

Also Read
ವಾಟ್ಸಾಪ್‌ ಐರೋಪ್ಯ ನಿಯಮಗಳನ್ನು ಅನುಸರಿಸುವುದಾದರೆ ಭಾರತದ ಐಟಿ ನಿಯಮಗಳನ್ನೇಕೆ ಅನುಸರಿಸಬಾರದು? ಅರ್ಜಿದಾರರ ಪ್ರಶ್ನೆ

ಅಲ್ಲದೆ ಗ್ರೂಪ್‌ ಸದಸ್ಯರು ಮಾಡಿದ ಪೋಸ್ಟ್‌ಗೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡುವ ಯಾವುದೇ ಕಾನೂನು ಇಲ್ಲ. ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ವಾಟ್ಸಾಪ್ ಅಡ್ಮಿನ್ ಮಧ್ಯವರ್ತಿ ಎಂದಾಗುವುದಿಲ್ಲ ಎಂದು ನ್ಯಾಯಾಲಯ ವಿವರಿಸಿತು.

ಅಪ್ರಾಪ್ತ ವಯಸ್ಕರು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೊ ಒಂದನ್ನು ಸದಸ್ಯರೊಬ್ಬರು ಗುಂಪಿಗೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಪಿನ ಅಡ್ಮಿನ್‌ ಮೇಲೆ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ಎದುರಿಸುತ್ತಿದ್ದ ಗುಂಪಿನ ಅಡ್ಮಿನ್‌ ಪರವಾಗಿ ಪೀಠ ತೀರ್ಪು ನೀಡಿತು.

Related Stories

No stories found.
Kannada Bar & Bench
kannada.barandbench.com