ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 31-10-2021

>> ವಕೀಲರೊಬ್ವರ ಸಮಯಪ್ರಜ್ಞೆಯಿಂದ ಬಚಾವಾದ ಮರ >> ನ್ಯಾಯಾಲಯದ ಮೆಟ್ಟಿಲೇರಿದ ರಾಮಮಂದಿರ ದೇಣಿಗೆ ಕೊಡದ ಶಿಕ್ಷಕಿಯ ಅಮಾನತು ವಿವಾದ >> ಆರ್ಯನ್‌ ಖಾನ್‌ ಐಷಾರಾಮಿ ಹಡಗು ಮಾದಕವಸ್ತು ಪ್ರಕರಣದಲ್ಲಿ ಆರು ಮಂದಿಗೆ ದೊರೆತಿಲ್ಲ ಜಾಮೀನು
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 31-10-2021

ದೆಹಲಿಯಲ್ಲಿ ಅರಳಿಮರ ಕಡಿಯುವುದನ್ನು ತಪ್ಪಿಸಿದ ಹಿರಿಯ ನ್ಯಾಯವಾದಿಯೊಬ್ಬರ ಸಮಯಪ್ರಜ್ಞೆ

ಹಿರಿಯ ನ್ಯಾಯವಾದಿಯೊಬ್ಬರ ಸಮಯೋಚಿತ ಮಧ್ಯಪ್ರವೇಶದಿಂದಾಗಿ ದೆಹಲಿಯ ಇಂದರ್‌ಪುರಿಯಲ್ಲಿ 60 ವರ್ಷ ಹಳೆಯದಾದ ಅರಳಿ ಮರವನ್ನು ಕಡಿಯುವುದು ಸದ್ಯಕ್ಕೆ ಸ್ಥಗಿತಗೊಂಡಿದೆ. ಹಿರಿಯ ವಕೀಲ ಎನ್ ಹರಿಹರನ್ ಅವರು ಕೈಬರಹದ ಅರ್ಜಿಯೊಂದನ್ನು ಸಿದ್ಧಪಡಿಸಿ ತುರ್ತಾಗಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದರು. ಇದರಿಂದಾಗಿ ನ್ಯಾಯಾಲಯ ಮರ ಕಡಿಯದಂತೆ ಮಧ್ಯಂತರ ಆದೇಶ ನೀಡಿತು.

Illegal tree cutting
Illegal tree cutting

ಇಂದರ್‌ಪುರಿಯಲ್ಲಿರುವ ಹರಿಹರನ್‌ ಅವರ ಮನೆ ಪಕ್ಕದಲ್ಲಿದ್ದ ಅರಳಿ ಮರವನ್ನು ಪಾಲಿಕೆ/ ಅರಣ್ಯ ಇಲಾಖೆಯವರು ಕಡಿದು ಹಾಕುತ್ತಿರುವುದಾಗಿ ಫೋನ್‌ ಕರೆಯೊಂದು ಬಂತು. ತಕ್ಷಣ ಪತ್ರ ರೂಪದ ಅರ್ಜಿ ಸಲ್ಲಿಸಿದ ಅವರು ಮುಖ್ಯ ನ್ಯಾಯಮೂರ್ತಿ ಮತ್ತು ವಿಭಾಗಿಯ ಪೀಠದ ನ್ಯಾ ಎದುರು ಹಾಜರಾಗಲು ಮುಂದಾದರು. ಆದರೆ ಅವರು ಪೀಠದಿಂದ ನಿರ್ಗಮಿಸಿದ್ದರಿಂದ ಮೂರನೇ ಅತಿ ಹಿರಿಯ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿದರು. ಸಂಜೆ 4.30ಕ್ಕೆ ಅರ್ಜಿಯ ಪ್ರಸ್ತಾವನೆಯಾಯಿತು. ತಕ್ಷಣ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ವಿಭಾಗೀಯ ಪೀಠ ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿತು. ಅದಾಗಿ 45 ನಿಮಿಷಗಳಲ್ಲಿ ನ್ಯಾ. ರೇಖಾ ಪಲ್ಲಿ ಅವರ ಪೀಠಕ್ಕೆ ಅರ್ಜಿ ವಿಚಾರಣೆಗೆ ಬಂದಿತು. ಬಳಿಕ ಅರಣ್ಯ ಇಲಾಖೆ ಮತ್ತು ನಗರ ಪಾಲಿಕೆ ವಕೀಲರನ್ನು ವಿಚಾರಣೆಯಲ್ಲಿ ಭಾಗಿಯಾಗುವಂತೆ ತಿಳಿಸಲಾಯಿತು. ಎಲ್ಲಾ ಪಕ್ಷಕಾರರ ವಾದ ಆಲಿಸಿದ ನ್ಯಾ. ಪಲ್ಲಿ ಮುಂದಿನ ಆದೇಶದವರೆಗೆ ಮರ ಕಡಿಯದಂತೆ ನಿರ್ದೇಶಿಸಿದರು.

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡದ ಶಿಕ್ಷಕಿಯ ಅಮಾನತು: ಶಾಲೆಗೆ ದೆಹಲಿ ಹೈಕೋರ್ಟ್‌ ನೋಟಿಸ್‌

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ತಮ್ಮನ್ನು ಅಮಾನತುಗೊಳಿಸಿದೆ ಎಂದು ಆರೋಪಿಸಿ ಮುಖ್ಯೋಪಾಧ್ಯಾಯಿನಿಯೊಬ್ಬರು ಮನವಿ ಸಲ್ಲಿಸಿದ್ದು ಈ ಕುರಿತಂತೆ ದೆಹಲಿ ಹೈಕೋರ್ಟ್ ಸಮರ್ಥ ಶಿಕ್ಷಾ ಸಮಿತಿಯ ಶಾಲಾಡಳಿತ ಮತ್ತು ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯಕ್ಕೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

Delhi High Court
Delhi High Court

ಪ್ರತಿ ವರ್ಷ ಶಿಕ್ಷಕರು ಸಮರ್ಪಣ್ ಹೆಸರಿನ ಖಾತೆಗೆ ₹ 5,000 ದತ್ತಿ ನೀಡುವಂತೆ ಶಾಲಾಡಳಿತ ಸೂಚಿಸುತ್ತಿತ್ತು ಎಂದು ಅರ್ಜಿದಾರರು ತಿಳಿಸಿದ್ದಾರೆ. ಆದರೆ, ಈ ವರ್ಷ ಸಮರ್ಪಣ್‌ ಖಾತೆಗೆ ₹ 15,000 ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ₹ 70,000 ದೇಣಿಗೆ ನೀಡುವಂತೆ ಕೋರಲಾಗಿತ್ತು. ಆದರೆ ಇಷ್ಟು ಹಣ ಪಾವತಿಸುವುದು ನನ್ನ ಆರ್ಥಿಕ ಸಾಮರ್ಥ್ಯ ಮೀರಿದುದಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿದ ನ್ಯಾಯಮೂರ್ತಿ ಕಾಮೇಶ್ವರ್‌ ರಾವ್‌ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 17ಕ್ಕೆ ಮುಂದೂಡಿದ್ದಾರೆ.

ಐಷಾರಾಮಿ ಹಡಗು ಮಾದಕವಸ್ತು ಪ್ರಕರಣದಲ್ಲಿ ಇದುವರೆಗೆ 14 ಆರೋಪಿಗಳಿಗೆ ಜಾಮೀನು; ಬಂಧನದಲ್ಲಿ ಇನ್ನೂ ಆರು ಮಂದಿ

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಪ್ರಮುಖ ಆರೋಪಿಯಾಗಿರುವ ಐಷಾರಾಮಿ ಹಡಗು ಮಾದಕ ವಸ್ತು ಪ್ರಕರಣದ ಒಂಬತ್ತು ಆರೋಪಿಗಳಿಗೆ ಮುಂಬೈ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ. ಆ ಮೂಲಕ ಇದುವರೆಗೆ 14 ಆರೋಪಿಗಳಿಗೆ ಜಾಮೀನು ದೊರೆತಿದ್ದು ಇನ್ನೂ ಆರು ಮಂದಿ ಕಸ್ಟಡಿಯಲ್ಲಿದ್ದಾರೆ.

Illegal tree cutting
Illegal tree cutting

ಆರ್ಯನ್‌ ಖಾನ್‌ ಅರ್ಬಾಜ್‌ ಮರ್ಚೆಂಟ್‌ ಮೂನ್‌ಮೂನ್‌ ಧಮೇಚ, ಗೋಮಿತ್‌ ಛೋಪ್ರಾ, ನೂಪುರ್‌ ಸತಿಜಾ, ಇಶ್ಮೀತ್‌ ಸಿಂಗ್‌, ಗೋಪಾಲ್‌ ಆನಂದ್‌ ಸಮೀರ್‌ ಸೈಗಲ್‌, ಮಾನವ್‌ ಸಿಂಘಾಲ್‌, ಭಾಸ್ಕರ್‌ ಅರೋರಾ, ಅಚಿತ್‌ ಕುಮಾರ್‌ ಶ್ರೇಯಸ್‌ ನಾಯರ್‌, ಮನೀಶ್‌ ರಾಜ್‌ಗರಿಯಾ, ಅವೀನ್‌ ಸಾಹು ಅವರಿಗೆ ಜಾಮೀನು ದೊರೆತಿದೆ. ಮೋಹಕ್‌ ಜಸ್ವಾಲ್‌, ವಿಕ್ರಾಂತ್‌ ಚೊಕರ್‌, ಅಬ್ದುಲ್‌ ಖಾದಿರ್‌, ಶಿವರಾಜ್‌ ರಾಮದಾಸ್‌ ಹರಿಜನ್‌, ಚಿನೇಡು ಇಗ್ವೆ, ಒಕಾರೊ ಉಜೇಮಾ ಅವರು ಇನ್ನೂ ಬಂಧನದಲ್ಲಿದ್ದಾರೆ.

Related Stories

No stories found.
Kannada Bar & Bench
kannada.barandbench.com