ಇಷ್ಟ ಬಂದಾಗ ಬಂದು ಹೋಗುವ ತಾಣ ಇದಲ್ಲ: ವಿಳಂಬ ಧೋರಣೆ ಅನುಸರಿಸುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್

ನ್ಯಾಯಾಲಯ ರವಾನಿಸಿರುವ ಕಠಿಣ ಸಂದೇಶ ಮಧ್ಯಪ್ರದೇಶ ಸರ್ಕಾರಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಸರ್ಕಾರಗಳಿಗೂ ಅನ್ವಯಿಸುತ್ತದೆ.
ಇಷ್ಟ ಬಂದಾಗ ಬಂದು ಹೋಗುವ ತಾಣ ಇದಲ್ಲ: ವಿಳಂಬ ಧೋರಣೆ ಅನುಸರಿಸುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್

ಒಟ್ಟು 663 ದಿನಗಳಷ್ಟು ತಡವಾಗಿ ಮೇಲ್ಮನವಿಯೊಂದನ್ನು ಸಲ್ಲಿಸಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಗಡುವಿನ ಆಧಾರದ ಮೇಲೆ ಪ್ರಕರಣವನ್ನು ವಜಾಗೊಳಿಸಿರುವ ನ್ಯಾಯಾಲಯ ನ್ಯಾಯಾಂಗದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರಕ್ಕೆ ರೂ 25,000 ದಂಡ ವಿಧಿಸಿದೆ.

ಮಧ್ಯಪ್ರದೇಶ ಸರ್ಕಾರ ವರ್ಸಸ್ ಭೇರುಲಾಲ್ ಪ್ರಕರಣ ಇದಾಗಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ನ್ಯಾಯಪೀಠದ ಕಠಿಣ ಆದೇಶ ಹೀಗಿದೆ:

Also Read
ನ್ಯಾಯಾಂಗ ಅಸಮರ್ಪಕತೆ ಆರೋಪ ವಿಚಾರದಲ್ಲಿ ಎಲ್ಲೆ ಮೀರಿದ ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ: 'ಸುಪ್ರೀಂ'ಗೆ ದೂರು

"ನಿಗದಿತ ಗಡುವು ನಿರ್ಲಕ್ಷಿಸಿ ಸರ್ಕಾರಗಳು ಬೇಕೆಂದಾಗ ಬಂದು ಹೋಗುವ ಸ್ಥಳ ಸುಪ್ರೀಂಕೋರ್ಟ್ ಆಗಲು ಸಾಧ್ಯವಿಲ್ಲ. ಆಡಳಿತ ಯಂತ್ರ ಅಷ್ಟು ಅಸಮರ್ಥವಾಗಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ಮೇಲ್ಮನವಿ / ಅರ್ಜಿಗಳನ್ನು ಸಲ್ಲಿಸುವ ಕ್ಷಮತೆ ಇಲ್ಲದಿದ್ದರೆ, ಸರ್ಕಾರಿ ಅಧಿಕಾರಿಗಳ ಅದಕ್ಷತೆಯ ಕಾರಣಕ್ಕೆ ಅರ್ಜಿ ಸಲ್ಲಿಸುವ ಸಮಯ ವಿಸ್ತರಿಸುವಂತೆ ಶಾಸಕಾಂಗವನ್ನು ಕೋರುವುದರಲ್ಲಿ ಪರಿಹಾರ ಇದೆ. ಶಾಸನಗಳು ಇರುವವರೆಗೆ ಶಾಸನ ನಿಗದಿಗೊಳಿಸಿದಂತೆ ಮೇಲ್ಮನವಿ/ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

ಸುಪ್ರೀಂಕೋರ್ಟ್

ನ್ಯಾಯಾಲಯ ರವಾನಿಸಿರುವ ಕಠಿಣ ಸಂದೇಶ ಮಧ್ಯಪ್ರದೇಶ ಸರ್ಕಾರಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಸರ್ಕಾರಿ ವಕೀಲರಿಗೂ ಅನ್ವಯಿಸುತ್ತದೆ. ಪ್ರಸ್ತುತ ಪ್ರಕರಣದಲ್ಲಿ, ಮಧ್ಯಪ್ರದೇಶ ಸರ್ಕಾರ ವಿಳಂಬಕ್ಕೆ ನೀಡಿರುವ ಕಾರಣ "ದಾಖಲೆಗಳ ಅಲಭ್ಯತೆ ಮತ್ತು ದಾಖಲೆಗಳಿಗಾಗಿ ವ್ಯವಸ್ಥೆ ಮಾಡುವ ಪ್ರಕ್ರಿಯೆ" ಎಂಬುದಾಗಿದೆ. ಇದರ ಜೊತೆಗೆ, "ಅಧಿಕಾರಶಾಹಿಯ ಪ್ರಕ್ರಿಯಾ ಕಾರ್ಯಗಳ" ಪರಿಣಾಮವಾಗಿ "ಅಜಾಗರೂಕ ವಿಳಂಬ" ಸಹ ಉಂಟಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

‘ಸರ್ಕಾರ ಮೇಲ್ಮನವಿಗಳನ್ನು ಸಲ್ಲಿಸುವಾಗಿನ ಸೊಕ್ಕಿನ ವರ್ತನೆಯನ್ನು ಎದುರಿಸಲು ದೊಡ್ಡ ಸಂದೇಶ ನೀಡಬೇಕಿದೆ’ ಎಂದು ಪೀಠ ಗುಡುಗಿದೆ.

"ವಿಪರ್ಯಾಸವೆಂದರೆ ಯಾವುದೇ ಕೆಲಸ ಮಾಡದೆ ಕಡತಗಳ ಮೇಲೆ ಕುಳಿತುಬಿಡುವ ಅಧಿಕಾರಿಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡ ಪ್ರಕರಣಗಳಿಲ್ಲ," ಎಂದು ನ್ಯಾಯಾಲಯವು ಬೇಸರಿಸಿದೆ. ಹಿಂದಿನ ಸಂದರ್ಭಗಳಲ್ಲಿ ಇಂತಹ ನಡೆ ಬಗ್ಗೆ ಅಸಮ್ಮತಿ ಸೂಚಿಸಿದ್ದರೂ ಸರ್ಕಾರ ನಡೆದುಕೊಂಡ ರೀತಿಯನ್ನು ಪ್ರಸ್ತಾಪಿಸಿ ನ್ಯಾಯಾಲಯ ಕಿಡಿಕಾರಿದೆ.

Related Stories

No stories found.