ಕರ್ನಾಟಕ ಪ್ರಕರಣಗಳಿಗೆಂದೇ ಪ್ರತ್ಯೇಕ ಪೀಠ ರಚಿಸಬೇಕಾದೀತು: ಸರ್ಕಾರದ ತುರ್ತು ವಿಚಾರಣೆ ಕೋರಿಕೆಗೆ ಸಿಜೆಐ ವ್ಯಂಗ್ಯ

ರಾಜ್ಯದಲ್ಲಿ ಗಣಿಗಾರಿಕೆಯಿಂದ ತೊಂದರೆಗೊಳಗಾದವರಿಗೆ ಪರಿಹಾರ ನೀಡುವ ಕುರಿತ ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರಿದಾಗ ಸಿಜೆಐ ಹೀಗೆ ಟೀಕಿಸಿದರು.
karnataka and supreme court

karnataka and supreme court

ಕರ್ನಾಟಕದಿಂದ ಸುಪ್ರೀಂಕೋರ್ಟ್‌ಗೆ ಹೆಚ್ಚಿನ ಪ್ರಕರಣಗಳು ಬರುತ್ತಿದ್ದು ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚಿಸಬೇಕಾದೀತು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಬುಧವಾರ ವ್ಯಂಗ್ಯದ ಚಾಟಿ ಬೀಸಿದರು.

ರಾಜ್ಯದಲ್ಲಿ ಗಣಿಗಾರಿಕೆಯಿಂದ ತೊಂದರೆಗೊಳಗಾದವರಿಗೆ ಪರಿಹಾರ ನೀಡುವ ಕುರಿತ ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರಿದಾಗ ಸಿಜೆಐ ಹೀಗೆ ಟೀಕಿಸಿದರು. “ನಾವಿದನ್ನು ಪಟ್ಟಿ ಮಾಡುತ್ತೇವೆ. ಆದರೆ, ಕರ್ನಾಟಕದಿಂದ ಬರುವ ಪ್ರಕರಣಗಳಿಗೆಂದೇ ಪ್ರತ್ಯೇಕ ಪೀಠ ರಚಿಸಬೇಕಾದೀತು” ಎಂದು ಪ್ರತಿಕ್ರಿಯಿಸಿದರು.

Also Read
ನ್ಯಾಯಾಲಯ ಭತ್ಯೆ: ಸಿಜೆಐ ಶಿಫಾರಸ್ಸು ತಿರಸ್ಕರಿಸಿದ ಕೇಂದ್ರದ ವಿರುದ್ಧ ಸುಪ್ರೀಂ ಮೊರೆ ಹೋದ ಸಿಬ್ಬಂದಿ [ಚುಟುಕು]

ಗಣಿಗಾರಿಕೆಯ ಪರಿಣಾಮಕ್ಕೀಡಾದ ವಲಯಗಳ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಜಡ್‌- CEPMIZ) ಅಡಿಯಲ್ಲಿ ಪುನರುಜ್ಜೀವನ ಯೋಜನೆಗಳ ಅನುಷ್ಠಾನಕ್ಕೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

ಕೇಂದ್ರ ಸಬಲೀಕರಣ ಸಮಿತಿಯು ₹24,000 ಕೋಟಿ ಮೊತ್ತದ ಸಿಇಪಿಎಂಐಜಡ್‌ಗೆ ಶಿಫಾರಸು ಮಾಡಿದೆ. ಈಗ ಸಂಗ್ರಹವಾಗಿರುವ ಮೊತ್ತ ₹18,722 ಕೋಟಿಯಷ್ಟಾಗಿದ್ದು ಅದು ಈಗ ಮೇಲ್ವಿಚಾರಣಾ ಸಮಿತಿಯಲ್ಲಿ ಲಭ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಗಣಿಗಾರಿಕೆ ಪೀಡಿತ ಜಿಲ್ಲೆಗಳಲ್ಲಿ ವಾಸಿಸುವ ಜನರಿಗಾಗಿ ಹಣ ವಿನಿಯೋಗಿಸಬೇಕಾಗಿರುವುದರಿಂದ ಪ್ರಕರಣವನ್ನು ತೀರಾ ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com