ಬಿಜೆಪಿಯ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಕಿರೀಟ್ ಸೋಮೈಯ ಅವರ ಪತ್ನಿ ಮೇಧಾ ಸೋಮೈಯ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಫಲರಾದ ಶಿವಸೇನಾ ಸಂಸದ ಸಂಜಯ್ ರಾವುತ್ ವಿರುದ್ಧ ಮುಂಬೈ ನ್ಯಾಯಾಲಯ ಸೋಮವಾರ ಜಾಮೀನು ಪಡೆಯಬಹುದಾದ ವಾರಂಟ್ ಹೊರಡಿಸಿದೆ.
ಮೇಧಾ ಸೋಮೈಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದ ನಂತರ ಜುಲೈ 4 ರೊಳಗೆ ರಾವುತ್‌ಗೆ ಹಾಜರಾಗುವಂತೆ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ ಐ ಮೊಕಾಶಿ ಸೂಚಿಸಿದ್ದರು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್ ಹೊರಡಿಸಿ ಜುಲೈ 18ಕ್ಕೆ ಪ್ರಕರಣ ಮುಂದೂಡಿದೆ. ಶೌಚಾಲಯ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಮೇಧಾ ಅವರ ವಿರುದ್ಧ ರಾವುತ್ ಹೇಳಿಕೆ ನೀಡಿದ್ದರು. ಹೇಳಿಕೆ ಆಧಾರರಹಿತ ಎಂದಿದ್ದ ಮೇಧಾ ಅವರು ರಾವುತ್ ವಿರುದ್ಧ ರೂ 100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಹೆಚ್ಚಿನ ವಿವರಗಳಿಗಾಗಿ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ಜಾಲತಾಣದ ಲಿಂಕ್ ಗಮನಿಸಿ.