ನಾನು ಬಂಗಾಳದ ಜನರೊಂದಿಗೆ ನಿಂತೆ: ಮಮತಾ ವಿರುದ್ಧ ಸ್ಪರ್ಧಿಸುತ್ತಿರುವ ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಸಂದರ್ಶನ

ಭಯಾನಕ ಹತ್ಯೆಗಳು ನಡೆದಿದ್ದು ಅವುಗಳನ್ನು ಹಗೆಸಾಧಕ ಮುಖ್ಯಮಂತ್ರಿ (ಮಮತಾ) ನಿರಾಕರಿಸಿದ್ದಾರೆ, ಎಲ್ಲೆಡೆ ಲೂಟಿ, ದಹನ, ಕೊಲೆ, ಅತ್ಯಾಚಾರ ನಡೆದಾಗಲೂ ಏನೂ ಆಗಲೇ ಇಲ್ಲ ಎಂದು ಆಕೆ ಹೇಳುತ್ತಲೇ ಇದ್ದರು” ಎಂಬುದಾಗಿ ಟಿಬ್ರೆವಾಲ್ ತಿಳಿಸಿದ್ದಾರೆ.
ನಾನು ಬಂಗಾಳದ ಜನರೊಂದಿಗೆ ನಿಂತೆ: ಮಮತಾ ವಿರುದ್ಧ ಸ್ಪರ್ಧಿಸುತ್ತಿರುವ ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಸಂದರ್ಶನ

ಪಶ್ಚಿಮ ಬಂಗಾಳದ ಭಬಾನಿಪುರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ನ್ಯಾಯವಾದಿ ಪ್ರಿಯಾಂಕಾ ಟಿಬ್ರೆವಾಲ್ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅವರನ್ನು ಕಣಕ್ಕಿಳಿಸಿದೆ.


2021ರ ಏಪ್ರಿಲ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆ ವೇಳೆ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಬಿಜೆಪಿಯ ಸುವೇಂದು ಅಧಿಕಾರಿ ಅವರೆದುರು ಸೋಲನುಭವಿಸಿದ್ದರು. ಮುಖ್ಯಮಂತ್ರಿಯಾಗಿ ಅವರು ಮುಂದುವರೆಯಲು ಆರು ತಿಂಗಳೊಳಗಾಗಿ ಮತ್ತೆ ವಿಧಾನಸಭೆಗೆ ಮಮತಾ ಆಯ್ಕೆಯಾಗಬೇಕಿದೆ.

ಭಬಾನಿಪುರದಿಂದ ಗೆದ್ದಿದ್ದ ಟಿಎಂಸಿ ಅಭ್ಯರ್ಥಿ, ಸೋಹನ್‌ದೇಬ್‌ ಚಟ್ಟೋಪಾಧ್ಯಾಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದರಿಂದ ಆ ಕ್ಷೇತ್ರಕ್ಕೆ ಉಪಚುನಾವಣೆ ಏರ್ಪಟ್ಟಿದೆ. ಈ ಹಿಂದೆ ಮಮತಾ ಇದೇ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದು ಭಬಾನಿಪುರದಲ್ಲಿ ಅವರ ವಿರುದ್ಧ ಸ್ಪರ್ಧಿಸುವಂತೆ ಬಿಜೆಪಿ ಟಿಬ್ರೆವಾಲ್‌ ಅವರಿಗೆ ಯಾರೂ ನಿರೀಕ್ಷಿಸಿರದ ಕೆಲಸವೊಂದನ್ನು ವಹಿಸಿದೆ.

ಹಿಂದಿ ಭಾಷಿಕರಾದ 41 ವರ್ಷದ ವಕೀಲೆ ಟಿಬ್ರೆವಾಲ್‌ ಅವರು ಪಶ್ಚಿಮಬಂಗಾಳದಲ್ಲಿ ಕಳೆದ ವಿಧಾನಸಭೆ ಚುನಾವಣೆ ನಂತರ ನಡೆದ ಹಿಂಸಾಚಾರ ಘಟನೆಯನ್ನು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಅರ್ಜಿದಾರರು ಕೂಡ. ಘಟನೆಯನ್ನು ಸಿಬಿಐ ಮತ್ತು ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಟಿಬ್ರೆವಾಲ್‌ ಅವರನ್ನು ʼಬಾರ್‌ ಅಂಡ್‌ ಬೆಂಚ್‌ʼನ ದೇವಯಾನ್‌ ರಾಯ್‌ ಅವರು ಸಂದರ್ಶಿಸಿದ್ದು ಅದರ ಆಯ್ದಭಾಗ ಇಲ್ಲಿದೆ.

Q

ನೀವು ಟಿಎಂಸಿ ಸರ್ಕಾರವನ್ನು ನ್ಯಾಯಾಲಯದಲ್ಲಿ ಎದುರಿಸಿದ್ದೀರಿ. ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಹೇಗೆ ಇತ್ಯರ್ಥವಾಗುತ್ತವೆ ಎಂದು ನೀವು ಭಾವಿಸುತ್ತೀರಿ?

A

ಪಶ್ಚಿಮಬಂಗಾಳದಲ್ಲಿ ಏನೂ ನಡೆದಿಲ್ಲ ಮತ್ತು ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು ಅದು ಘಟನೆಯನ್ನು ಸಂಪೂರ್ಣ ನಿರಾಕರಿಸಿದೆ. ಬಂಗಾಳದ ಜನ ಮತ್ತು ಮತದಾರರು ಕೊಲೆಗೀಡಾದರು. ಭಯಾನಕ ಹತ್ಯೆಗಳು ನಡೆದಿದ್ದು ಅವುಗಳನ್ನು ಹಗೆಸಾಧಕ ಮುಖ್ಯಮಂತ್ರಿ ನಿರಾಕರಿಸಿದ್ದಾರೆ, ಸುತ್ತಲೂ ಲೂಟಿ, ದಹನ, ಕೊಲೆ, ಅತ್ಯಾಚಾರ ನಡೆದಾಗಲೂ ಏನೂ ಆಗಲೇ ಇಲ್ಲ ಎಂದು ಆಕೆ ಹೇಳುತ್ತಲೇ ಇದ್ದರು

ಜನರಿಗೆ ನ್ಯಾಯ ದೊರಕಿಸಿಕೊಡಲು ಅವರ ಪರವಾಗಿ ನಿಲ್ಲುವ ಜವಾಬ್ದಾರಿ ತೆಗೆದುಕೊಳ್ಳಬೇಕಿದ್ದ ಆಕೆ ಒಂದೇ ಒಂದು ಮಾತನ್ನೂ ಹೇಳಿಲ್ಲ ಮತ್ತು ನಿರಾಕರಣೆಯಲ್ಲಿ ತೊಡಗಿದ್ದರು. ನಾನುಪಶ್ಚಿಮಬಂಗಾಳದಜನರೊಂದಿಗೆನಿಂತು ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಿದೆ. ನಾನುಅವರೊಂದಿಗೆನಿಲ್ಲುತ್ತೇನೆಎಂದುಬಂಗಾಳದಜನರಿಗೆತಿಳಿದಿದೆ. ನಾನುಆಆತ್ಮವಿಶ್ವಾಸ ಮೂಡಿಸಿದ್ದೇನೆ.

Q

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಂಗಾಳಿ ಉಪ ರಾಷ್ಟ್ರೀಯತೆ ಹೆಚ್ಚಾಗಿ ಪ್ರಸ್ತಾಪಿತವಾಗಿದೆ. ಭಬಾನಿಪುರದಲ್ಲಿ ಇದು ಯಾವ ಪಾತ್ರ ವಹಿಸುತ್ತದೆ ಎಂದು ನೀವು ಭಾವಿಸುವಿರಿ?

A

ವಿಭಜನೆಯ ರಾಜಕೀಯದಲ್ಲಿ ನನಗೆ ನಂಬಿಕೆ ಇಲ್ಲದಿರುವುದರಿಂದ ಆ ರೀತಿ ಏನೂ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಹಿಂದಿಭಾಷಿಕರ (ಹಿಂದಿ ಮಾತನಾಡುವವರು ಅಥವಾ ಬಂಗಾಳೇತರರು) ವಿರುದ್ಧ ಅಥವಾ ಪರವಾಗಿ ಏನನ್ನೂ ಹೇಳಲು ಬಯಸುವುದಿಲ್ಲ. ಜಾತಿ ಮತ ಭೇದವಿಲ್ಲದೆ ನನ್ನ ಪಾಲಿಗೆ ಎಲ್ಲರೂ ಬಂಗಾಳದ ಜನರು.

ತೃಣಮೂಲ ಕಾಂಗ್ರೆಸ್ ವಿಭಜನೆಯ ರಾಜಕಾರಣ ಮಾಡುತ್ತದೆ ಮತ್ತು ಅದಕ್ಕಾಗಿಯೇ ಭಬಾನಿಪುರದಲ್ಲಿ ಕೇವಲ ಶೇ 40ರಷ್ಟು ಮತದಾನವಾಗಿದ್ದು ಅವರು (ಟಿಎಂಸಿ) ಹಿಂದುಭಾಷಿಕರಿಗೆ ಮತ ಹಾಕಲು ಅವಕಾಶ ನೀಡುವುದಿಲ್ಲ.

ನನ್ನಉಪನಾಮದಬಗ್ಗೆಹೇಳುವುದಾದರೆ, ನಾನುಬಂಗಾಳದಲ್ಲಿಹುಟ್ಟಿರುವುದರಿಂದಎಲ್ಲರೀತಿಯಿಂದಲೂನಾನುಬಂಗಾಳಿಮತ್ತುನನ್ನತಂದೆಕೂಡ. ಹಿಂದೀಭಾಷಿಕಳಾಗಿದ್ದರೂ, ಲೂಟಿಮತ್ತುಅತ್ಯಾಚಾರಕ್ಕೊಳಗಾದಬಂಗಾಳಿಗಳೊಂದಿಗೆನಿಂತಿದ್ದೇನೆ. ಬಡವರಮತ್ತುದಮನಿತರವಿರುದ್ಧ ನಡೆದವಿಧ್ವಂಸಕತೆಗೆಎದುರಾಗಿನಿಂತಿದ್ದೇನೆ.

Q

ಟಿಎಂಸಿ ವಿಜೇತ ಅಭ್ಯರ್ಥಿ ಸೋಹನ್‌ದೇಬ್‌ ಚಟ್ಟೋಪಾಧ್ಯಾಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮುಖ್ಯಮಂತ್ರಿ ಭಬಾನಿಪುರದಿಂದ ಕಣಕ್ಕಿಳಿಯಬಹುದಾಗಿದೆ. ಸಂವಿಧಾನದ 164ನೇ ವಿಧಿಯಡಿ ಇದು ನ್ಯಾಯಯುತ ಸ್ಪರ್ಧೆ ಎಂದು ನೀವು ಭಾವಿಸುವಿರಾ?

A

ಇದು ಸೋಹನ್‌ದೇಬ್ ಮತ್ತು ತೃಣಮೂಲ ಕಾಂಗ್ರೆಸ್‌ಗೆ ಮತ ಹಾಕಿದ ಬಂಗಾಳ ಹಾಗೂ ಭಬಾನಿಪುರದ ಮತದಾರರಿಗೆ ತೋರುವ ಅಗೌರವವಲ್ಲದೆ ಬೇರೇನೂ ಅಲ್ಲ. ಇದರರ್ಥ ಜನಾದೇಶಕ್ಕೆ ಗೌರವ ಕೊಡಲಿಲ್ಲ. ಏಕೆಂದರೆ ಮಮತಾ ಬ್ಯಾನರ್ಜಿ ಅವರಿಗೆ ಕುರ್ಚಿ ಉಳಿಸಿಕೊಳ್ಳಲು ಸ್ಪರ್ಧೆ ಅನಿವಾರ್ಯವಾಗಿದ್ದರಿಂದ ಅವರನ್ನು (ಸೋಹನ್‌ದೇಬ್‌) ಸೀಟು ಖಾಲಿ ಮಾಡುವಂತೆ ತಿಳಿಸಲಾಯಿತು.

ರಾಜೀನಾಮೆ ನೀಡುವಂತೆ ಹಾಲಿ ಶಾಸಕರಿಗೆ ಅವರು ಒತ್ತಾಯಿಸಿದರು. ಇದು ಪ್ರಜಾಪ್ರಭುತ್ವದ ಬಗೆಗಿನ ಸಂಪೂರ್ಣ ಅಗೌರವವಾಗಿದೆ.

Q

ನೀವು ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರಿಂದ ಚುನಾವಣೋತ್ತರ ಹಿಂಸಾಚಾರದ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತರುವಲ್ಲಿ ಯಾವುದೇ ರೀತಿಯ ಹಿತಾಸಕ್ತಿ ಸಂಘರ್ಷ ಇದೆ ಎಂದು ನೀವು ಭಾವಿಸುತ್ತೀರಾ (ಟಿಬ್ರೆವಾಲ್ ಅವರು ಕಳೆದ ಏಪ್ರಿಲ್‌ನಲ್ಲಿ ನಡೆದ ಚುನಾವಣೆ ವೇಳೆ ಎಂಟಲಿ ಕ್ಷೇತ್ರದಿಂದ ಸ್ಪರ್ಧಿಸಿ ಟಿಎಂಸಿ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು)?

A

ನನ್ನ ಮೇಲೂ ದಾಳಿ ಮಾಡಲಾಗಿದೆ ಎಂದು ನಾನು ಹೈಕೋರ್ಟ್‌ನಲ್ಲಿ ಹೇಳಿದ್ದೆ. ಜನರು ಹೇಗೆ ವಸತಿ ಹೀನರಾದರು ಎಂಬುದನ್ನು ನಾನು ಎತ್ತಿ ತೋರಿಸಿದೆ. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಪ್ರತಿ ಜಿಲ್ಲೆಗೆ ನಾನು ಭೇಟಿ ನೀಡಿದ್ದೇನೆ. ಆಗ ನನಗೆ (ಮತ್ತೊಮ್ಮೆ). ಟಿಕೆಟ್ ದೊರೆಯುತ್ತದೆ ಎಂದು ತಿಳಿದಿರಲಿಲ್ಲ ಈ ಉಮೇದುವಾರಿಕೆ ನಿಮ್ಮಂತೆಯೇ ನನಗೂ ಆಶ್ಚರ್ಯ ಉಂಟು ಮಾಡಿದೆ.

Q

ಕೆಲ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳ ಬಗ್ಗೆ ಟಿಎಂಸಿಗೆ ಇರುವ ಆತಂಕಗಳನ್ನು ನೀವು ಹೇಗೆ ಗ್ರಹಿಸುತ್ತೀರಿ?

A

ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ನಾನು ಕಾನೂನು ಪಾಲಿಸುವ ಪ್ರಜೆ. ನಾನು ಜನರ ಪರವಾಗಿ ಮಾತನಾಡುತ್ತೇನೆ. ನ್ಯಾಯಾಂಗವನ್ನು ನಂಬದಿದ್ದರೆ, ನನಗೆ ಕಾನೂನನ್ನು ಪ್ರಾಕ್ಟೀಸ್‌ ಮಾಡುವ ಯಾವುದೇ ಕಾರಣ ಇರುವುದಿಲ್ಲ.

Q

ಕಾನೂನು ಅಥವಾ ರಾಜಕೀಯ?

A

ರಾಜಕೀಯದಲ್ಲಿ ಕಾನೂನಿಗೆ ಗೌರವ ಇರಬೇಕು. ರಾಜಕೀಯ ಎಂಬುದು ಜನರಿಗೆ ನಾನು ಮಾಡಲು ಬಯಸುವ ಸಮಾಜ ಸೇವೆಯಾಗಿದ್ದು ಅದು ನನ್ನ ಪ್ರವೃತ್ತಿ ಮತ್ತು ಕಾನೂನು ನನ್ನ ವೃತ್ತಿಯಾಗಿದೆ.

Related Stories

No stories found.
Kannada Bar & Bench
kannada.barandbench.com