ನಮ್ಮ ಬಗ್ಗೆ:

 

ಪಲ್ಲವಿ ಸಲುಜಾ

ಸಂಪಾದಕರು

ಪಲ್ಲವಿ ಅವರು ಬಾರ್‌ & ಬೆಂಚ್‌ನ ಸಂಪಾದಕರಾಗಿ 2011ರಲ್ಲಿ ಸೇರಿಕೊಂಡರು. ಭಾರತೀಯ ಕಾನೂನು ಮಾರುಕಟ್ಟೆಯ ಕುರಿತಾಗಿ ಅವರು ಅಂದಿನಿಂದಲೂ ಬರೆಯುತ್ತಿದ್ದಾರೆ. ಕಾನೂನು ಸಂಸ್ಥೆಗಳು ಮತ್ತು ಒಳ ವಿದ್ಯಮಾನಗಳ ಬಗೆಗೆ, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನಲ್ಲಿನ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ಕುರಿತಾಗಿ ಒಳನೋಟಗಳಿಂದ ಕೂಡಿದ ಸಮಗ್ರ ಲೇಖನಗಳನ್ನು ಅವರು ಬರೆದಿದ್ದಾರೆ. ಐ ಎಲ್ ‌ಎಸ್‌ ಕಾನೂನು ಕಾಲೇಜಿನಿಂದ ಎಲ್‌ ಎಲ್‌ ಬಿ (ಆನರ್ಸ್‌) ಪದವಿಯನ್ನು ಪಡೆದಿರುವ ಅವರು, ದೆಹಲಿ ವಿಶ್ವವಿದ್ಯಾಲಯದಿಂದ ಎಲ್ ‌ಎಲ್ ‌ಎಂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2016ರಲ್ಲಿ ಪಟ್ಟಿ ಮಾಡಲಾದ, ಮುಂಬರುವ ದಿನಗಳಲ್ಲಿ ಕಾನೂನು ವಾಣಿಜ್ಯ ಕ್ಷೇತ್ರದಲ್ಲಿ ಗಮನಿಸಬೇಕಾದ ಏಷಿಯಾದ 30 ಭರವಸೆಯ ಹೆಸರುಗಳಲ್ಲಿ ಪಲ್ಲವಿ ಅವರನ್ನು ಗುರುತಿಸಲಾಗಿದೆ.

ಇಮೇಲ್‌:  pallavi@barandbench.com

ಟ್ವಿಟರ್‌‌: @pallavibnb

 

ಆದಿತ್ಯ ಎ ಕೆ

ಸಹ ಸಂಪಾದಕ

ಆದಿತ್ಯ ಅವರು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪದವೀಧರರಾಗಿದ್ದು, 2014ರಲ್ಲಿ ಬಾರ್‌ & ಬೆಂಚ್‌ ನ ಜೊತೆಗೂಡಿದರು. ಹೈಕೋರ್ಟ್‌ ವ್ಯಾಜ್ಯಗಳು, ಕಾನೂನು ಶಿಕ್ಷಣ ಹಾಗೂ ಕಾನೂನು ಮತ್ತು ನೀತಿನಿರೂಪಣೆಯ ವಿಷಯಗಳ ಕುರಿತು ಅವರು ಮಾಹಿತಿಯುಕ್ತವಾಗಿ ಬರೆಯುತ್ತಾರೆ.
ಇಮೇಲ್‌: aditya@barandbench.com
ಟ್ವಿಟರ್‌‌: @adityaak90

 

 

ಮೀರಾ ಇಮಾನ್ಯುಯೆಲ್‌

ಪ್ರತಿನಿಧಿ - ಚೆನ್ನೈ ಡೆಸ್ಕ್‌

ಮೀರಾ ಅವರು ಬಾರ್‌ & ಬೆಂಚ್‌ ಅನ್ನು 2017ರಲ್ಲಿ ಜೊತೆಗೂಡಿದರು. ಮದ್ರಾಸ್‌ ಹೈಕೋರ್ಟ್ ನಲ್ಲಿನ ಪ್ರಕರಣಗಳ ಕುರಿತಾದ ಸುದ್ದಿ, ಲೇಖನಗಳನ್ನು ಅವರು ವಿಷದವಾಗಿ ಬರೆಯುತ್ತಾರೆ. ಕೊಚ್ಚಿಯ ನ್ಯಾಷನಲ್‌ ಯುನಿವರ್ಸಿಟಿ ಆಫ್‌ ಅಡ್ವಾನ್ಸ್ಡ್ ಲೀಗಲ್‌ ಸ್ಟಡೀಸ್‌ ನಿಂದ ಅವರು ಪದವಿ ಪಡೆದಿದ್ದಾರೆ.

ಟ್ವಿಟರ್: @meera_emmanuel

 

 

ಶ್ರುತಿ ಮಹಾಜನ್

ಪ್ರತಿನಿಧಿ - ದೆಹಲಿ ಡೆಸ್ಕ್‌

ಶ್ರುತಿ ಅವರು ಪುಣೆಯ ಐ ಎಲ್ ‌ಎಸ್ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಅಲ್ಲದೆ, ಚೆನ್ನೈನ ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂನಿಂದ ಬ್ರಾಡ್‌ಕಾಸ್ಟ್‌ ಜರ್ನಲಿಸಂ ಕುರಿತ ಡಿಪ್ಲೊಮಾ ಪದವಿ ಪಡೆದಿದ್ದಾರೆ. ರಾಜಕೀಯ ಹಾಗೂ ಸಾಮಾನ್ಯ ಸುದ್ದಿಗಳನ್ನು ಒಂದು ವರ್ಷ ಕಾಲ ವರದಿ ಮಾಡಿದ ಅನುಭವವುಳ್ಳ ಅವರು ಬಾರ್‌ & ಬೆಂಚ್‌ ಅನ್ನು ಏಪ್ರಿಲ್‌ 2018ರಲ್ಲಿ ಸೇರಿದರು. ಸುಪ್ರೀಂ ಕೋರ್ಟ್ ನ‌ ಸುದ್ದಿಗಳನ್ನು ಅವರು ವರದಿ ಮಾಡುತ್ತಾರೆ.

ಟ್ವಿಟರ್‌: @shrutimahajan21

 

ದೇಬಯಾನ್‌ ರಾಯ್‌

ವಿಶೇಷ ಪ್ರತಿನಿಧಿ

ಪುಣೆ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ದೇಬಯಾನ್ ಅವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2016ರಿಂದ ಟಿವಿ ಹಾಗೂ ಅಂತರ್ಜಾಲ ಮಾಧ್ಯಮಗಳಲ್ಲಿ ಕೋರ್ಟ್‌ ವರದಿಗಾರಿಕೆಯನ್ನು ಮಾಡಿದ್ದಾರೆ. ಮಾಧ್ಯಮ ವೃತ್ತಿಗೂ ಮುನ್ನ ಅವರು ದೆಹಲಿಯ ಕಾನೂನು ಸಂಸ್ಥೆಯೊಂದರಲ್ಲಿ ಬೌದ್ಧಿಕ ಆಸ್ತಿ ಕುರಿತ ಅಟಾರ್ನಿಯಾಗಿ ಸೇವೆ ಸಲ್ಲಿಸಿದ್ದರು. ದೇಬಯಾನ್‌ ಅವರು ಬಾರ್‌ & ಬೆಂಚ್‌ ನಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಉನ್ನತ ನ್ಯಾಯಾಂಗದ ಕುರಿತು ವರದಿ ಮಾಡುತ್ತಾರೆ.

ಟ್ವಿಟರ್: @DebayanDictum

 

 

ಅದಿತಿ ಸಿಂಗ್

ಪ್ರತಿನಿಧಿ - ದೆಹಲಿ ಡೆಸ್ಕ್‌

ಅದಿತಿ ಅವರು ರಾಂಚಿಯ ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಸ್ಟಡಿ ಅಂಡ್‌ ರಿಸರ್ಚ್ ಇನ್‌ ಲಾ‌ ನಿಂದ ಎಲ್ ಎಲ್‌ ಬಿ (ಆನರ್ಸ್) ಪದವಿ ಪಡೆದಿದ್ದು, ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಎಲ್‌ ಎಲ್‌ ಎಂ ಪದವಿ ಪಡೆದಿದ್ದಾರೆ. ಬಾರ್‌ & ಬೆಂಚ್‌ ಅನ್ನು ಆಗಸ್ಟ್‌ 2018ರಲ್ಲಿ ಸೇರಿದ ಅವರು ಅದಕ್ಕೂ ಮುನ್ನ ದೆಹಲಿಯ ವಾಣಿಜ್ಯ ಪತ್ರಿಕೆಯೊಂದರಲ್ಲಿ ಕಾನೂನು ಪತ್ರಕರ್ತೆಯಾಗಿ ಕೆಲಸ ಮಾಡಿದ್ದರು. ಪ್ರಸ್ತುತ ದೆಹಲಿ ಹೈಕೋರ್ಟಿನ ಸುದ್ದಿಗಳನ್ನು ಅವರು ವರದಿ ಮಾಡುತ್ತಾರೆ.

ಟ್ವಿಟರ್‌: @aditi2118

 

 

ಐಶ್ವರ್ಯ ಅಯ್ಯರ್‌

ಪ್ರತಿನಿಧಿ - ಡೆಸ್ಕ್

ಐಶ್ವರ್ಯ ಅವರು ರಾಂಚಿಯ ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಸ್ಟಡಿ ಅಂಡ್‌ ರಿಸರ್ಚ್ ಇನ್‌ ಲಾ‌ ನಿಂದ 2018ರಲ್ಲಿ ಎಲ್‌ ಎಲ್‌ ಬಿ (ಆನರ್ಸ್) ಪದವಿಯನ್ನು ಪಡೆದಿದ್ದಾರೆ. ಈ ಮುಂಚೆ, ಕಾನೂನು ಸಂಬಂಧಿ ಪ್ರಕಟಣಾ ಸಂಸ್ಥೆಯೊಂದರ ಸಂಪಾದಕೀಯ ಬಳಗದಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

 

ರವಿ ಕಾಂತ್‌

ಜಾಹೀರಾತು ಮತ್ತು ಚಂದಾದಾರಿಕೆ

ಮಹಾರಾಷ್ಟ್ರದ ಐ ಎಸ್‌ ಬಿ ಎಂ ನಿಂದ ಪದವಿ ಪಡೆದಿರುವ ರವಿಯವರು ಬಾರ್‌ & ಬೆಂಚ್‌ ಅನ್ನು 2015ರಲ್ಲಿ ಸೇರ್ಪಡೆಯಾದರು. ಇದಕ್ಕೂ ಮುನ್ನ ಅನೇಕ ನವೋದ್ಯಮಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವಿರುವ ಅವರು ಪ್ರಸ್ತುತ ಬಾರ್‌ & ಬೆಂಚ್‌ ನ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. 

 

ಇಮೇಲ್‌: ravi@barandbench.com

 

Kannada Bar & Bench
kannada.barandbench.com