KSBC 
ಸುದ್ದಿಗಳು

ಸನ್ನದು ಅಮಾನತು ಮಾಡಿಸಿದ 1,531 ವಕೀಲರು; 68,553 ವಕೀಲರಿಂದ ಸಿಒಪಿಗೆ ಅರ್ಜಿ ಸಲ್ಲಿಕೆ

ವೃತ್ತಿಯಲ್ಲಿರುವವರು 15-07-2025ರ ಒಳಗೆ ಸನ್ನದು ಅಮಾನತುಗೊಳಿಸಿಕೊಳ್ಳದಿದ್ದರೆ ವಕೀಲರ ಕಾಯಿದೆ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಕೆಎಸ್‌ಬಿಸಿ ತಿಳಿಸಿದೆ.

Bar & Bench

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಕರೆಯ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 1,531 ವಕೀಲರು ತಮ್ಮ ಸನ್ನದು ಅಮಾನತು ಮಾಡಿಸಿದ್ದಾರೆ. ಅಂತೆಯೇ, 68,553 ವಕೀಲರು ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌ಗೆ (ಸಿಒಪಿ) ಅರ್ಜಿ ಸಲ್ಲಿಸಿದ್ದಾರೆ. ಸಿಒಪಿಗೆ ಅರ್ಜಿ ಸಲ್ಲಿಸಿರುವವರು ksbc.org.inನಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು ಎಂದು ಕೆಎಸ್‌ಬಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

1,29,368 ವಕೀಲರ ಪೈಕಿ 59, 784 ಮಂದಿ ಯಾವುದೇ ಸ್ಪಂದನೆ ವ್ಯಕ್ತಪಡಿಸಿಲ್ಲ. ನ್ಯಾಯಮೂರ್ತಿಗಳು, ಸಚಿವರು, ವಿವಿಧ ಸಾಂವಿಧಾನಿಕ ಹುದ್ದೆಗಳು, ಅಭಿಯೋಜಕರು, ಸಹಾಯಕ ಅಭಿಯೋಜಕರು, ಲಾಡ್ಜ್‌, ಪೆಟ್ರೋಲ್‌ ಪಂಪ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ರೆಸಾರ್ಟ್‌, ವಿವಿಧ ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆ, ಉಪನ್ಯಾಸಕ ವೃತ್ತಿಯಲ್ಲಿರುವವರು 15-07-2025ರ ಒಳಗೆ ಸನ್ನದು ಅಮಾನತುಗೊಳಿಸಿಕೊಳ್ಳದಿದ್ದರೆ ವಕೀಲರ ಕಾಯಿದೆ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಕೆಎಸ್‌ಬಿಸಿ ತಿಳಿಸಿದೆ.

ಸಿಒಪಿ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದೀಪಕ್‌ ಗುಪ್ತಾ ಅವರ ನೇತೃತ್ವದಲ್ಲಿ ಐವರು ಸದಸ್ಯರ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಮೂರು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದೆ ಎಂಬ ವಿಚಾರವನ್ನು ಸಂಬಂಧಿತ ಎಲ್ಲರ ಗಮನಕ್ಕೆ ತರಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

KSBC Licence.pdf
Preview