Parliament Watch 
ಸುದ್ದಿಗಳು

ಕಳೆದ ಮೂರು ವರ್ಷಗಳಲ್ಲಿ 3,110 ಪಿಎಂಎಲ್ಎ, 12,233 ಫೆಮಾ ಪ್ರಕರಣ ದಾಖಲು: ಸಂಸತ್‌ಗೆ ಮಾಹಿತಿ

ಕಳೆದ ಐದು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಒಟ್ಟು 3,946 ಶೋಧ ಕಾರ್ಯಾಚರಣೆ ನಡೆಸಿದ್ದು, ₹6,662.52 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

Bar & Bench

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ 3,110 ಪ್ರಕರಣ, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯಡಿ (ಫೆಮಾ) 12,233 ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿದೆ.

ರಾಜಸ್ಥಾನದ  ಅಲ್‌ವರ್ ಲೋಕಸಭಾ ಕ್ಷೇತ್ರದ ಸಂಸದ ಬಾಲಕ ನಾಥ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಹಣಕಾಸು ಸಚಿವಾಲಯ ಮಾಹಿತಿ ಬಹಿರಂಗಪಡಿಸಿದೆ.

ಹಣಕಾಸು ವರ್ಷವಾರು ವಿವರ ಈ ರೀತಿ ಇದೆ.

FEMA, PMLA cases

ವಡೋದರಾ ಸಂಸದ ರಂಜನ್‌ಬೆನ್ ಧನಂಜಯ್ ಭಟ್ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸಚಿವಾಲಯ ನೀಡಿದ ಮತ್ತೊಂದು ಉತ್ತರದ ಪ್ರಕಾರ ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ಪ್ರಸಕ್ತ ಸಾಲಿನದೂ ಸೇರಿದಂತೆ ಒಟ್ಟು 43,516 ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.

ಈ ಪ್ರಕರಣಗಳಲ್ಲಿ ₹ 2,68,537 ಕೋಟಿ ಮೊತ್ತದ ವಂಚನೆ ನಡೆದಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆದರೆ, ಇದೇ ಅವಧಿಯಲ್ಲಿ ₹ 76,333 ಕೋಟಿ ಹಣವನ್ನು ಮಾತ್ರ ಯಶಸ್ವಿಯಾಗಿ ವಸೂಲಿ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.

ಇದಲ್ಲದೆ, ಈ ನಾಲ್ಕು ಹಣಕಾಸು ವರ್ಷಗಳಲ್ಲಿ ಜಿಎಸ್‌ಟಿ ವಂಚನೆಯಲ್ಲಿ ತೊಡಗಿರುವ 1,020 ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಹಣಕಾಸು ವರ್ಷವಾರು ವಿವರಣೆ ಈ ಕೆಳಗಿನಂತಿದೆ:

Trends in overall GST evasion

ಇದಲ್ಲದೆ, ಕಳೆದ ಐದು ಹಣಕಾಸು ವರ್ಷಗಳಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಒಟ್ಟು 3,946 ಶೋಧ ನಡೆಸಿದ್ದು, ಪರಿಣಾಮ ₹ 6,662.52 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವಾಲಯ ಬಹಿರಂಗಪಡಿಸಿದೆ. ಇದೇ ಅವಧಿಯಲ್ಲಿ ಇಲಾಖೆಯು 30,828 ಸಮೀಕ್ಷೆ ನಡೆಸಿದ್ದು ಅವುಗಳಲ್ಲಿ 28,121 ಸಮೀಕ್ಷೆಗಳನ್ನು 2018 ರಿಂದ 2020ರ ನಡುವೆ ನಡೆಸಲಾಗಿದೆ.

IT Department search and seizure

ಇಲಾಖೆ ಈ ಅವಧಿಯಲ್ಲಿ 5,493 ಪ್ರಾಸಿಕ್ಯೂಷನ್‌ಗಳನ್ನು ಸಲ್ಲಿಸಿದ್ದು, ಅದೇ ಸಮಯದಲ್ಲಿ 5,298 ಪ್ರಕರಣಗಳನ್ನು ಕ್ರೋಢೀಕರಿಸಿ 250 ವ್ಯಕ್ತಿಗಳನ್ನು ತಪ್ಪಿತಸ್ಥರು ಎಂದು ಪರಿಗಣಿಸಿದೆ.

IT Department prosecutions

ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ (ಪ್ರಸ್ತುತ ವರ್ಷವೂ ಸೇರಿದಂತೆ), ಕಸ್ಟಮ್ಸ್ ಇಲಾಖೆ ₹ 45,965.64 ಕೋಟಿಗಳನ್ನು ಒಳಗೊಂಡ 42,754 ಸಂಪೂರ್ಣ ಕಳ್ಳಸಾಗಣೆ ಪ್ರಕರಣಗಳನ್ನು ಪತ್ತೆಹಚ್ಚಿದೆ. ಹಣಕಾಸು ವರ್ಷವಾರು ವಿವರಣೆ ಈ ರೀತಿ ಇದೆ:

Customs Department smuggling cases

ಇಲಾಖೆಯು ₹ 82,989.15 ಕೋಟಿ ಮೊತ್ತದ 11,565 ವಾಣಿಜ್ಯ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿದೆ. ಈ ಪ್ರಕರಣಗಳು ಒಟ್ಟು ₹21,225.46 ಕೋಟಿ ಸುಂಕ ಒಳಗೊಂಡಿವೆ ಎನ್ನುವ ಮಾಹಿತಿ ಒದಗಿಸಲಾಗಿದೆ.

Customs Department commercial fraud cases