Anil John Sequeira, Civil Judge
Anil John Sequeira, Civil Judge 
ಸುದ್ದಿಗಳು

25 ವರ್ಷದ ಅನಿಲ್‌ ಜಾನ್‌ ಸೀಕ್ವೈರಾ ಸೇರಿ 33 ಮಂದಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ

Siddesh M S

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೇಂಟ್‌ ಫಿಲೊಮಿನಾ ಮತ್ತು ಎಸ್‌ಡಿಎಂ ಕಾಲೇಜಿನ ಮಾಜಿ ವಿದ್ಯಾರ್ಥಿ, 25 ವರ್ಷದ ಅನಿಲ್‌ ಜಾನ್‌ ಸೀಕ್ವೈರಾ ಸೇರಿದಂತೆ 33 ಅಭ್ಯರ್ಥಿಗಳು ಸಿವಿಲ್‌ ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಪ್ರಕಟಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

25ನೇ ವರ್ಷಕ್ಕೆ ಸಿವಿಲ್‌ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಅನಿಲ್‌ ಅವರು ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರು ಎನ್ನಲಾಗಿದೆ.

ಕರ್ನಾಟಕ ನ್ಯಾಯಾಂಗ ಸೇವೆಗಳ (ನೇಮಕಾತಿ) ನಿಯಮಗಳು 2004 ಮತ್ತು ತಿದ್ದುಪಡಿ ನಿಯಮಗಳು 2011, 2015 ಮತ್ತು 2016ರ ಅನ್ವಯ 2023ರ ಮಾರ್ಚ್‌ 9ರಂದು ಸಿವಿಲ್‌ ನ್ಯಾಯಾಧೀಶರನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು. 2023ರ ನವೆಂಬರ್‌ನಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ 30.01.2024 ರಿಂದ 01.02.2024ರ ವರೆಗೆ ನಡೆದ ವೈವಾದಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್‌ ಮೇಲೆ 33 ಮಂದಿ ಅಭ್ಯರ್ಥಿಗಳು ಸಿವಿಲ್‌ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂದು ಸಿವಿಲ್‌ ನ್ಯಾಯಾಧೀಶರ ನೇಮಕಾತಿ ಸಮಿತಿಯ ಕಾರ್ಯದರ್ಶಿಯೂ ಆದ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‌ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಆಯ್ಕೆಯಾದ 33 ಅಭ್ಯರ್ಥಿಗಳ ವಿವರ ಇಂತಿದೆ: ಹರ್ಷಿತಾ, ಜಹೀರ್‌ ಅತನೂರ್‌, ನಮ್ರತಾ ಎಸ್‌ ಹೊಸಮಠ್‌, ಭುವನೇಶ್ವರಿ ಡಿ, ವರ್ಣಿಕಾ ಆರ್‌, ಪುಷ್ಪಾ ಡಿ, ಪೂಜಾ ಎಸ್‌ ಕುಮಾರ್‌, ಸುನಿಲ್‌ ಎಚ್‌ ಸಿ, ಕೃಷ್ಣಪ್ಪ ಪಮ್ಮಾರ್‌, ಗೀತಾ ಡಿ, ಪುನೀತ್‌ ಬಿ ಆರ್‌, ಆರ್‌ ರಂಜಿತ್‌ ಕುಮಾರ್‌, ಸುರಕ್ಷಾ ಕೆ ಕೆ, ಶರ್ಮಿಳಾ ಇ ಜೆ, ಶ್ರುತಿ ತೇಲಿ, ಪ್ರಹಾನ್‌ ಸಿಂಗ್‌ ಎಚ್‌ ಪಿ, ಮೇಘಾ ಸೋಮಣ್ಣವರ್‌, ಮಧುಶ್ರೀ ಆರ್‌ ಎಂ, ವಿಕಾಸ್‌ ದಳವಾಯಿ, ರಂಜಿತಾ ಎಸ್‌, ಶ್ರೇಯಾ ಎಚ್‌ ಜೆ, ಧನಂಜಯ ಹೆಗ್ಡೆ, ತುಷಾರ್‌ ಸಂಜಯ್‌ ಸದಲಗೆ, ಐಶ್ವರ್ಯಾ ಗುಡದಿನ್ನಿ, ಶ್ರೀದೇವಿ, ರಮೇಶ್‌ ಕೆ, ವಿಜಯಕುಮಾರ್‌ ಎನ್‌, ಅನಿಲ್‌ ಜಾನ್‌ ಸೀಕ್ವೈರಾ, ದಾನಪ್ಪ, ಕೃತಿಕಾ ಪಿ. ಪವಾರ್‌, ಮಹಾಂತೇಶ್‌ ಮಠದ್‌, ಭಾಗ್ಯಶ್ರೀ ಮಾದರ್‌, ಸುಮಾ ಟಿ.

Final Selection List Civil Judges.pdf
Preview