ramesh sogemane
ಸುದ್ದಿಗಳು

ಕ್ರಿಕೆಟ್‌ ವೀಕ್ಷಣೆ ವೇಳೆ ಪಾಕಿಸ್ತಾನ ಪರ ಘೋಷಣೆ: ಮೂವರಿಗೆ ಜಾಮೀನು ನೀಡಿದ ಅಲಾಹಾಬಾದ್‌ ಹೈಕೋರ್ಟ್ [ಚುಟುಕು]

Bar & Bench

ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಜಯಗಳಿಸಿದ್ದ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದ ಕಾಶ್ಮೀರದ ಮೂವರು ವಿದ್ಯಾರ್ಥಿಗಳಿಗೆ ಅಲಾಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿರುವುದಾಗಿ ವರದಿಯಾಗಿದೆ.

“ಐಪಿಸಿ ಸೆಕ್ಷನ್‌ 124 ಎ ಅಡಿ ದೇಶದ್ರೋಹದ ಅಪರಾಧ ಸಾಬೀತುಪಡಿಸಲು, ಭಾರತದಲ್ಲಿ ಕಾನೂನಿನಿಂದ ಸ್ಥಾಪಿತವಾದ ಸರ್ಕಾರದ ವಿರುದ್ಧ ದ್ವೇಷ ಅಥವಾ ನಿಂದನೆಯ ಕೃತ್ಯ ಎಸಗಿರಬೇಕು. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರು ಭಾರತ ಸರ್ಕಾರದ ವಿರುದ್ಧವಾಗಲೀ ಅಥವಾ ರಾಜ್ಯ ಸರ್ಕಾರದ ವಿರುದ್ಧವಾಗಲೀ ಏನನ್ನೂ ಮಾಡಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಆಗ್ರಾದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಅರ್ಷೀದ್ ಯೂಸುಫ್, ಇನಾಯತ್ ಅಲ್ತಾಫ್ ಶೇಖ್ ಮತ್ತು ಶೋಕತ್ ಅಹ್ಮದ್ ಗನೈ ಎಂಬ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶ ಪೊಲೀಸರು ಅಕ್ಟೋಬರ್ 27 ರಂದು ಬಂಧಿಸಿದ್ದರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.