Allahabad HC and UP 
ಸುದ್ದಿಗಳು

ಅಖಾಡಕ್ಕಿಳಿದ ಅಲಾಹಾಬಾದ್ ಹೈಕೋರ್ಟ್: ಉತ್ತರಪ್ರದೇಶದ 5 ನಗರಗಳಲ್ಲಿ ಏಪ್ರಿಲ್ 26ರವರೆಗೆ ಲಾಕ್‌ಡೌನ್‌ ಘೋಷಿಸಲು ಆದೇಶ

"ಮುಖ್ಯಮಂತ್ರಿ ಕೂಡ ಲಖನೌದಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಜನರ ಓಡಾಟ ನಿರ್ಬಂಧಿಸಲು ಜನಪ್ರಿಯ ಸರ್ಕಾರಕ್ಕೆ ತನ್ನದೇ ಆದ ಒತ್ತಡವಿದ್ದರೆ ತಾನು ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಉತ್ತರಪ್ರದೇಶದಲ್ಲಿ ಕೋವಿಡ್‌ ಹೆಚ್ಚಳ ಕುರಿತಂತೆ ಕಠಿಣ ನಿಲುವು ತಳೆದಿರುವ ಅಲಾಹಾಬಾದ್‌ ಹೈಕೋರ್ಟ್‌ ರಾಜ್ಯದ ಐದು ನಗರಗಳಲ್ಲಿ ಏಪ್ರಿಲ್ 26 ರವರೆಗೆ ಲಾಕ್‌ಡೌನ್‌ ಘೋಷಿಸುವಂತೆ ಸೂಚಿಸಿದೆ. ಪ್ರಯಾಗ್‌ರಾಜ್‌, ಲಖನೌ, ವಾರಾಣಸಿ, ಕಾನ್ಪುರ, ಗೋರಖ್‌ಪುರಗಳಲ್ಲಿ ಲಾಕ್‌ಡೌನ್‌ ಜೊತೆಗೆ ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ಅದು ತಿಳಿಸಿದೆ.

"ಸ್ಪಂದನೆಯ ಕೊರತೆಯಿಂದಾಗಿ ಸರ್ಕಾರ ತುರ್ತುಕ್ರಮಗಳನ್ನು ಕೈಗೊಳ್ಳದಿದ್ದರೆ ವೈದ್ಯಕೀಯ ವ್ಯವಸ್ಥೆ ಕುಸಿಯಬಹುದು" ಎಂದು ನ್ಯಾಯಮೂರ್ತಿಗಳಾದ ಅಜಿತ್ ಕುಮಾರ್ ಮತ್ತು ಸಿದ್ಧಾರ್ಥ ವರ್ಮಾ ಅವರಿದ್ದ ಪೀಠ ಹೇಳಿದೆ. ರಾಜ್ಯದ ಮುಖ್ಯಮಂತ್ರಿ ಕೂಡ ಪ್ರತ್ಯೇಕವಾಸದಲ್ಲಿದ್ದಾರೆ. ಇದೇ ವೇಳೆ ಗಣ್ಯರು ಮಾತ್ರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ವಿಐಪಿಗಳ ಶಿಫಾರಸಿನ ಮೇರೆಗೆ ರೋಗಿಗಳಿಗೆ ಐಸಿಯು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂಬುದು ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯಿಂದ ತಿಳಿದುಬರುತ್ತಿದೆ. ಜೀವ ಉಳಿಸುವ ಔಷಧಿ ರೆಮ್‌ಡೆಸಿವಿರ್‌ ಅನ್ನು ವಿಐಪಿ ಶಿಫಾರಸಿನ ಮೇರೆಗೆ ಮಾತ್ರ ಒದಗಿಸಲಾಗುತ್ತಿದೆ…” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರ ಓಡಾಟ ನಿರ್ಬಂಧಿಸಲು ಜನಪ್ರಿಯ ಸರ್ಕಾರಕ್ಕೆ ತನ್ನದೇ ಆದಒತ್ತಡವಿದ್ದರೆ ತಾನು ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್. ಸಾರ್ವಜನಿಕ ಆರೋಗ್ಯ ಈ ಕ್ಷಣದ ಮೊದಲ ಆದ್ಯತೆಯಾಗಬೇಕು. ಯಾವುದೇ ಬಗೆಯ ಅಲಕ್ಷ್ಯ ಜನರಿಗೆ ಹಾನಿ ಉಂಟು ಮಾಡುತ್ತದೆ.

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರ ಓಡಾಟ ನಿರ್ಬಂಧಿಸಲು ಜನಪ್ರಿಯ ಸರ್ಕಾರಕ್ಕೆ ತನ್ನದೇ ಆದ ಒತ್ತಡವಿದ್ದರೆ ತಾನು ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ. ಸಾರ್ವಜನಿಕ ಆರೋಗ್ಯ ಈ ಕ್ಷಣದ ಮೊದಲ ಆದ್ಯತೆಯಾಗಬೇಕು. ಯಾವುದೇ ಬಗೆಯ ಅಲಕ್ಷ್ಯ ಜನರಿಗೆ ಹಾನಿ ಉಂಟು ಮಾಡುತ್ತದೆ ಎಂದು ಪೀಠ ಎಚ್ಚರಿಸಿದೆ.

ಲಸಿಕೆ ಕಾರ್ಯಕ್ರಮದ ಅನುಷ್ಠಾನಕ್ಕೆ ದೃಢ ನಿರ್ಧಾರ ಕೈಗೊಳ್ಳಬೇಕು. ಅಗತ್ಯವಿದ್ದರೆ ಎರಡು ವಾರಗಳ ಕಾಲ ರಾಜ್ಯಾದ್ಯಂತ ಲಾಕ್‌ಡೌನ್‌ ವಿಧಿಸುವ ಬಗ್ಗೆಯೂ ಆಲೋಚಿಸುವಂತೆ ಸರ್ಕಾರಕ್ಕೆ ಅದು ಸೂಚಿಸಿದೆ.