Justice Abhay Okay at 'Reflections' event 
ಸುದ್ದಿಗಳು

ಜಿಲ್ಲಾ ನ್ಯಾಯಾಲಯಗಳನ್ನು ಅಧೀನ ಕೋರ್ಟ್ ಎಂದು ಕರೆಯದಂತೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ: ನ್ಯಾ. ಓಕಾ ಸಲಹೆ

"ಜಿಲ್ಲಾ ನ್ಯಾಯಾಲಯಗಳನ್ನು ಅಧೀನ ಎಂದು ಇನ್ನೂ ಹೇಳುವ ಸಂವಿಧಾನದ ಭಾಗ ತಿದ್ದುಪಡಿ ಮಾಡಲು ಇದು ಸಕಾಲ" ಎಂದು ನ್ಯಾ. ಓಕಾ ಹೇಳಿದರು.

Bar & Bench

ದೇಶದ ಜಿಲ್ಲಾ ನ್ಯಾಯಾಲಯಗಳನ್ನು ಅಧೀನ ಕೋರ್ಟ್‌ಗಳು ಎಂದು ಕರೆಯುವುದನ್ನು ತಡೆಯುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅಭಿಪ್ರಾಯಪಟ್ಟರು.

ಭಾರತೀಯ ಸಂವಿಧಾನ ಜಾರಿಗೆ ಬಂದ  75 ನೇ ವರ್ಷಾಚರಣೆ ಅಂಗವಾಗಿ ಸೋನಿಪತ್‌ನ ಒ ಪಿ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಆಯೋಜಿಸಿದ್ದ 'ರಿಫ್ಲೆಕ್ಷನ್ಸ್' ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಓಕಾ ಮಾತನಾಡಿದರು.

ಜಿಲ್ಲಾ ನ್ಯಾಯಾಲಯಗಳನ್ನು ಅಧೀನ ಎಂದು ಇನ್ನೂ ಹೇಳುವ ಸಂವಿಧಾನದ ಭಾಗ ತಿದ್ದುಪಡಿ ಮಾಡಲು ಇದು ಸಕಾಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ನ್ಯಾ. ಓಕಾ ಅವರ ಭಾಷಣದ ಪ್ರಮುಖಾಂಶಗಳು

  • ಜಿಲ್ಲಾ ನ್ಯಾಯಾಲಯಗಳು ಜನರೊಂದಿಗೆ ನೇರ ಸಂಪರ್ಕ ಇರುವ ಜನರ ನ್ಯಾಯಾಲಯಗಳಾಗಿವೆ. ಅವುಗಳನ್ನು ಸಾಂವಿಧಾನಿಕ ನ್ಯಾಯಾಲಯಗಳಂತೆಯೇ ಪರಿಗಣಿಸಬೇಕು.

  • ನ್ಯಾಯಾಂಗದ ಪ್ರಾಮಾಣಿಕತೆಯ ಮೌಲ್ಯಮಾಪನ ಕೇವಲ ಸಾಧನೆಗಳ ಬಗ್ಗೆ ಇರಬಾರದು.

  •  ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುವ ಸಂವಿಧಾನದ 21ನೇ ವಿಧಿಯನ್ನು ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ನೆಲೆಯಲ್ಲೂ ಅರ್ಥೈಸುವುದು ಮುಖ್ಯ.

  • ಇಂದು ಅನೇಕರು ಜೈಲಿನಲ್ಲಿ ಕೊಳೆಯುತ್ತಲೇ ಇದ್ದಾರೆ. ಇವರಿಗೆ ಹೆಚ್ಚು ಸಹಾಯ ಬೇಕು. ನಾನು ಯುವಜನರನ್ನು ವ್ಯಾಜ್ಯ ಕ್ಷೇತ್ರದ ಭಾಗವಾಗಬೇಕು ಅವರು ನ್ಯಾಯಾಂಗಕ್ಕೆ ಹೆಚ್ಚು ಸೇರಬೇಕು ಎಂದು ಕೇಳಿಕೊಳ್ಳುತ್ತೇನೆ.

  • ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದರೆ ಮಾತ್ರ ಸಂವಿಧಾನ ರಕ್ಷಿಸುವ ಪ್ರತಿಜ್ಞೆ ಸಾಕಾರಗೊಳ್ಳುವುದು ಸಾಧ್ಯ.

  • ಬಾಕಿ ಉಳಿದಿರುವ ಪ್ರಕರಣಗಳನ್ನು ಎದುರಿಸುವುದು ಸವಾಲಾಗಿದ್ದು ಗುಣಮಟ್ಟದ ನ್ಯಾಯ ಒದಗಿಸುವುದಕ್ಕಾಗಿ ನ್ಯಾಯಾಂಗಕ್ಕೆ ಸೂಕ್ತ ತರಬೇತಿಯ ಅಗತ್ಯವಿದೆ.

  • ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (ಎನ್‌ಜೆಡಿಜಿ) ರೀತಿಯ ತಾಂತ್ರಿಕ ಪರಿಹಾರಗಳು ಪ್ರಕರಣದ ಬಾಕಿಯನ್ನು ಪತ್ತೆಹಚ್ಚಲು ಸಹಾಯ ಮಾಡಲಿವೆ.

  •  ನ್ಯಾಯಾಂಗ ವ್ಯವಸ್ಥೆ ಸುಧಾರಿಸಲು ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವ ಮತ್ತಿತರ ಸುಧಾರಣೆಗಳ ಬೆಂಬಲ ಬೇಕಿದೆ.