Nyaaya
Nyaaya 
ಸುದ್ದಿಗಳು

ಕರ್ನಾಟಕದ ವಕೀಲರಿಗೊಂದು ಸದವಕಾಶ: ʼನ್ಯಾಯʼ ಸಂಸ್ಥೆಯಿಂದ ಸಂವಿಧಾನ್‌ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

Bar & Bench

ಸಾಕಷ್ಟು ನಾಗರಿಕರಿಗೆ ತಮ್ಮ ಸಾಂವಿಧಾನಿಕ ಹಕ್ಕುಗಳು ಯಾವುವು ಅವುಗಳನ್ನು ಹೇಗೆ ಬಳಸಬೇಕು ಎಂಬ ಅರಿವು ಇರುವುದಿಲ್ಲ. ಇದರಿಂದ ಹಕ್ಕುಗಳು ಅಸ್ತಿತ್ವದಲ್ಲಿದ್ದರೂ ಅವುಗಳನ್ನು ಪಡೆಯದೆ ತೊಂದರೆಗೊಳಗಾಗುವವರೇ ಹೆಚ್ಚು. ಅಲ್ಲದೆ ಹಕ್ಕುಗಳು ಕೂಡ ಕಾಗದದ ಮೇಲಷ್ಟೇ ಉಳಿದುಬಿಡುತ್ತವೆ.

ಇಂತಹ ತೊಂದರೆ ನೀಗಿಸಲು, ಜೊತೆಗೆ ಸಾಂವಿಧಾನಿಕ ಹಕ್ಕುಗಳು ಮತ್ತು ಜನರ ನಡುವೆ ಸೇತುವೆಯಾಗುವ ಉದ್ದೇಶದಿಂದ ಸರಳ ಮತ್ತು ಕಾರ್ಯ ಸಾಧ್ಯವಾದ ಮಾಹಿತಿಯ ಮೂಲಕ ಕಾನೂನು ಅರಿವು ಮೂಡಿಸುವ ʼನ್ಯಾಯʼ ಸಂಸ್ಥೆಯು ʼಸಂವಿಧಾನ್‌ ಫೆಲೋಶಿಪ್‌ʼ ಆರಂಭಿಸುತ್ತಿದೆ.

ಇದೊಂದು ಮಾಸಿಕ ಪ್ರೋತ್ಸಾಹಧನವಿರುವ ಫೆಲೋಶಿಪ್‌ ಆಗಿದೆ. ಜನ ನ್ಯಾಯ ಪಡೆಯುವಲ್ಲಿ ಎದುರಾಗುವ ತೊಡಕು, ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕದ ಆರು ತಳಮಟ್ಟದ ವಕೀಲರಿಗೆ ಬೆಂಬಲವಾಗಿ ಅದು ನಿಲ್ಲಲಿದೆ. ನಿಮ್ಮ ವೃತ್ತಿ ಮುಂದುವರೆಸುತ್ತಲೇ ಜನರಿಗೆ ನೀವು ಸಹಾಯ ಮಾಡಲು ಬಯಸುವಿರಾದರೆ ಇದೊಂದು ಅದ್ಭುತ ಅವಕಾಶ ಎನ್ನುತ್ತದೆ ʼನ್ಯಾಯʼ ಸಂಸ್ಥೆ.

ಆಯ್ಕೆಯಾಗುವ ವಕೀಲರು (ಫೆಲೋಗಳು) ಲಿಟಿಗೇಷನ್ ಮತ್ತು ಕಾನೂನು ಅರಿವು ಕೆಲಸದಲ್ಲಿ ಆಸಕ್ತಿ ಪ್ರದರ್ಶಿಸಿದ ಜಿಲ್ಲಾ ಮಟ್ಟದ ವಕೀಲರಾಗಿರುತ್ತಾರೆ. ಅವರು ಫಲಾನುಭವಿಗಳಿಗೆ ಕಾರ್ಯಗತಗೊಳಿಸಬಹುದಾದ ಕಾನೂನು ಮಾಹಿತಿಯನ್ನು ರೂಪಿಸಲು ಮತ್ತು ಪ್ರಸಾರ ಮಾಡಲು ನ್ಯಾಯ ತಂಡ ಮತ್ತು ನ್ಯಾಯದ ಪಾಲುದಾರ ಸಮುದಾಯ-ಆಧಾರಿತ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಾರೆ. ಇದು ವಿವಿಧ ಭಾರತೀಯ ಕಾನೂನುಗಳು ಮತ್ತು ಸರ್ಕಾರದ ಯೋಜನೆಗಳ ಅಡಿಯಲ್ಲಿ ಖಾತರಿಪಡಿಸುವ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸುತ್ತದೆ.

ಈ ಫೆಲೋಶಿಪ್ ಪ್ರಾಥಮಿಕವಾಗಿ ಕ್ಷೇತ್ರಾಧಾರಿತವಾಗಿರುತ್ತದೆ. ಆಯ್ಕೆಯಾದ ವಕೀಲರು ಕರ್ನಾಟಕದಲ್ಲಿ ನೆಲೆಸಿರಬೇಕು ಅಥವಾ ಅಲ್ಲಿಗೆ ಸ್ಥಳಾಂತರವಾಗಲು ಸಿದ್ಧರಾಗಿರಬೇಕು. ಫೆಲೋಶಿಪ್‌ನ ಅವಧಿ 12 ತಿಂಗಳುಗಳಾಗಿರುತ್ತದೆ. ಫೆಲೋಶಿಪ್‌ಗೆ ವಾರಕ್ಕೆ ಕನಿಷ್ಠ 20 ಗಂಟೆಗಳ ಕೆಲಸದ ಅಗತ್ಯವಿರುತ್ತದೆ. ಇದಕ್ಕಾಗಿ ವಕೀಲರು ಅರ್ಜಿ ಸಲ್ಲಿಸಬೇಕಿದ್ದು ಹಿರಿಯ ನ್ಯಾಯವಾದಿಗಳಿಂದ ನಾಮ ನಿರ್ದೇಶನಗೊಂಡಿರಬೇಕಾಗುತ್ತದೆ.

Samvidhan Fellowship

ಪ್ರಯೋಜನಗಳು

  • ಮಾಸಿಕ ಸ್ಟೈಫಂಡ್ ಪ್ರೋತ್ಸಾಹಧನ, ಮತ್ತು ಫೆಲೋಶಿಪ್ ಜೊತೆಗೆ ಅಭ್ಯಾಸವನ್ನು ಮುಂದುವರೆಸುವ ಆಯ್ಕೆ

  • ಓರಿಯಂಟೇಷನ್ ಸಮಯದಲ್ಲಿ ಆಯ್ಕೆಯಾದ ವಕೀಲರು (ಫೆಲೋಗಳು) ಬರಹ, ಮಾಧ್ಯಮ ತರಬೇತಿ ಮತ್ತು ನ್ಯಾಯ ತಂಡ ಅಗತ್ಯವೆಂದು ಗುರುತಿಸುವ ಇತರ ಕೌಶಲ್ಯ ತರಬೇತಿಯನ್ನು ಸಹ ಪಡೆಯುತ್ತಾರೆ.

  • ಆಯ್ಕೆಯಾದ ವಕೀಲರು (ಫೆಲೋಗಳು) ತಮ್ಮ ಕೆಲಸದಲ್ಲಿ ಸಹಾಯ ಮಾಡಲು ನ್ಯಾಯಾ ಮತ್ತು ವಿಧಿ ಅವರ ಕ್ಯಾಟಲಾಗ್ ಮತ್ತು ವಿವಿಧ ಜರ್ನಲ್‌ಗಳು ಮತ್ತು ಇ ಸಬ್‌ಸ್ಕ್ರಿಪ್ಷನ್‌ಗಳನ್ನು ಬಳಸಬಹುದು.

  • ಆಯ್ಕೆಯಾದ ವಕೀಲರು (ಫೆಲೋಗಳು) ನ್ಯಾಯಾ ಅವರ ನೆಟ್‌ವರ್ಕ್‌ನ ವಕೀಲರು, ತಳಮಟ್ಟದ ಸಂಸ್ಥೆಗಳು, ಸಿಎಸ್‌ಒಗಳು ಮತ್ತು ಮಾಧ್ಯಮದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಎಲ್ಲರೂ ತಳಮಟ್ಟದಲ್ಲಿರುವವರಿಗೆ ಕಾನೂನು ತಲುಪಿಸುವ ಸಾಮಾನ್ಯ ಧ್ಯೇಯದಿಂದ ಸ್ಫೂರ್ತಿ ಪಡೆದಿರುತ್ತಾರೆ.

ನಿಯಮಗಳು

  • ಕನ್ನಡದಲ್ಲಿ ಸರಾಗವಾಗಿ ಮಾತನಾಡುವ, ತಳಮಟ್ಟದಲ್ಲಿ ಕೆಲಸ ಮಾಡುವ, ಅತ್ಯಂತ ನುರಿತ ವಕೀಲರಾಗಿರಬೇಕು

  • ಲಿಟಿಗೇಷನ್ ಅನುಭವ ಉಳ್ಳವರಾಗಿರಬೇಕು.

  • ಕಾರ್ಮಿಕ ಹಕ್ಕು, ಮಹಿಳಾ ಹಕ್ಕು, ಮಕ್ಕಳ ಹಕ್ಕು, ಅಂಗವಿಕಲರ ಹಕ್ಕು, ಅಥವಾ ಹಿಂದುಳಿದ ಸಮುದಾಯ ಹಕ್ಕುಗಳಲ್ಲಿ ವಿಷಯ ಪರಿಣತಿ ಹೊಂದಿರಬೇಕು.

  • ಸಾಮಾಜಿಕ ಯೋಜನೆ ಮತ್ತು ಹಕ್ಕುಗಳ ಬಗ್ಗೆ ತಿಳುವಳಿಕೆ ಪಡೆದಿರಬೇಕು.

  • ಕುಂದುಕೊರತೆ ಪರಿಹಾರ ಕ್ಷೇತ್ರದಲ್ಲಿ ಕೆಲಸ ಮಾಡಿರಬೇಕು ಮತ್ತು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಂಡಿರಬೇಕು

  • ಕಾನೂನು ಅರಿವು ಕಾರ್ಯದಲ್ಲಿ ಆಸಕ್ತಿ ಇರಬೇಕು.

  • ಗುರುತಿಸಲಾದ ಸಮಸ್ಯೆಗಳ ಆಧಾರದಲ್ಲಿ ಸಮುದಾಯ ಕೌಶಲ್ಯ ರೂಪಿಸಲು ಸಿದ್ಧರಿರಬೇಕು.

  • ತಳಮಟ್ಟದ ಸಂಸ್ಥೆ ಅಥವಾ ಹಿರಿಯ ವಕೀಲರಿಂದ ನಾಮಿನೇಟ್ ಆಗಿರಬೇಕು.

ಪ್ರಮುಖ ವಿವರಗಳು

ಫೆಲೋಶಿಪ್‌ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ನ್ಯಾಯ ಸಂಸ್ಥೆಯ ಜಾಲತಾಣ https://kannada.nyaaya.org/access-to-justice-network/samvidhaan-fellowship/ ಕ್ಕೆ ಭೇಟಿ ನೀಡಿ. ಅರ್ಜಿಯನ್ನು ರೋಲಿಂಗ್‌ ಆಧರದಲ್ಲಿ ಪರಿಶೀಲಿಸುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ಸಂಸ್ಥೆ ತಿಳಿಸಿದೆ. ಕಾಲಮಿತಿ ಮೀರಿದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಯಾವುದೇ ಅನುಮಾನಗಳಿದ್ದರೆ contact@nyaaya.in ವನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಆಗಸ್ಟ್ 15, 2022, ರಾತ್ರಿ 11:59 ಗಂಟೆ.

ಸ್ವತಃ ಅರ್ಜಿ ಸಲ್ಲಿಸುವವರು ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ.

ನಾಮ ನಿರ್ದೇಶನ ಮಾಡಲು ಬಯಸುವವರು ಅರ್ಜಿಗಳಿಗಾಗಿ ಈ ಲಿಂಕ್‌ ಗಮನಿಸಿ.