<div class="paragraphs"><p>CBI and rouse avenue courts</p></div>

CBI and rouse avenue courts

 
ಸುದ್ದಿಗಳು

ದೇಶ್‌ಮುಖ್‌ ತನಿಖೆ ಮಾಹಿತಿ ಸೋರಿಕೆ: ಸಬ್ ಇನ್‌ಸ್ಪೆಕ್ಟರ್‌ ತಿವಾರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ [ಚುಟುಕು]

Bar & Bench

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ಪ್ರಕರಣದ ತನಿಖೆಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಅಮಾನತುಗೊಂಡಿರುವ ಸಿಬಿಐ ಸಬ್‌ ಇನ್‌ಸ್ಪೆಕ್ಟರ್‌ ಅಭಿಷೇಕ್‌ ತಿವಾರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿ ಸಿಬಿಐ ಅಧಿಕಾರಿಯಾಗಿದ್ದು ಸಮಾಜದೊಂದಿಗೆ ಅವರಿಗೆ ಆಳವಾದ ನಂಟಿದೆ. ಅಲ್ಲದೆ ಪ್ರಸ್ತುತ ಪ್ರಕರಣದ ಆರೋಪಗಳು ದೊಡ್ಡ ಪ್ರಮಾಣ ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ್ದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಾಹಿತಿ ಸೋರಿಕೆ ಹಿನ್ನಲೆಯಲ್ಲಿ ತಿವಾರಿ ಅವರ ಜೊತೆಗೆ ಮುಂಬೈ ಮೂಲದ ವಕೀಲ ಆನಂದ್‌ ದಾಗಾ ಮತ್ತು ಅನಿಲ್‌ ದೇಶ್‌ಮುಖ್ ಅವರ ಬೆಂಬಲಿಗ ವಿ ಜಿ ತುಮಾನೆ ಅವರನ್ನು ಕಳೆದ ವರ್ಷ ಸಿಬಿಐ ಬಂಧಿಸಿತ್ತು. ಈ ಇಬ್ಬರಿಗೂ ಈಗಾಗಲೇ ಜಾಮೀನು ದೊರೆತಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.