KSLU 
ಸುದ್ದಿಗಳು

ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಿಶ್ವವಿದ್ಯಾಲಯದ ಕಚೇರಿ ಅಥವಾ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ http://kslu.karnataka.gov.in/ ನಲ್ಲಿ ಅರ್ಜಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Bar & Bench

ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಾನೂನು ಶಾಲೆ ಹಾಗೂ ಅದಕ್ಕೆ ಒಳಪಡುವ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಐದು ವರ್ಷದ ಬಿ.ಎ, ಎಲ್‌ಎಲ್‌ಬಿ, ಐದು ವರ್ಷದ ಬಿಬಿಎ, ಎಲ್‌ಎಲ್‌ಬಿ ಮತ್ತು ಬಿ.ಕಾಂ, ಎಲ್‌ಎಲ್‌ಬಿ, ಬಿ.ಎ ಎಲ್‌ಎಲ್‌ಬಿ (ಆನರ್ಸ್‌) ಮತ್ತು ಬಿಬಿಎ, ಎಲ್‌ಎಲ್‌ಬಿ (ಆನರ್ಸ್‌) ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವವಿದ್ಯಾಲಯದ ಕಚೇರಿ ಅಥವಾ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ http://kslu.karnataka.gov.in/ ನಲ್ಲಿ ಅರ್ಜಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ: ಸಾಮಾನ್ಯ ವರ್ಗದವರು ಎರಡು ವರ್ಷದ ಪಿಯುಸಿ ಅಥವಾ ತತ್ಸಮಾನದಲ್ಲಿ ಒಟ್ಟು 45ರಷ್ಟು ಅಂಕ ಪಡೆದಿರಬೇಕು. ಹಿಂದುಳಿದ ವರ್ಗದವರು ಶೇ 42 ಅಂಕ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಶೇ 40ರಷ್ಟು ಅಂಕ ಪಡೆದಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 20 ವರ್ಷ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಗರಿಷ್ಠ 22 ವರ್ಷ ವಯಸ್ಸು ಮೀರಿರಬಾರದು.

2023ರ ಸೆಪ್ಟೆಂಬರ್‌ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ದಂಡ ಸಹಿತ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 26 ಕೊನೆಯ ದಿನ, ವಿಶೇಷ ದಂಡ ಸಹಿತ ಅರ್ಜಿ ಸಲ್ಲಿಸಲು ಅಕ್ಟೋಬರ್‌ 2 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 9620374839, 0836-2956072 ಸಂಪರ್ಕಿಸಬಹುದು.