Justice Hima Kohli
Justice Hima Kohli 
ಸುದ್ದಿಗಳು

ಕೃತಕ ಬುದ್ಧಿಮತ್ತೆ ನ್ಯಾಯಿಕ ವರ್ಗಕ್ಕೆ ಪರ್ಯಾಯವಲ್ಲ, ಕೆಲ ಪ್ರಕರಣಗಳ ವಿಚಾರಣೆಗೆ ಅದನ್ನು ಬಳಸಬಹುದು: ನ್ಯಾ. ಕೊಹ್ಲಿ

Bar & Bench

ತರಬೇತಿ ಪಡೆದ ನ್ಯಾಯಿಕ ಸಮುದಾಯಕ್ಕೆ ಆರ್ಟಿಫಿಷಿಯಲ್‌ ಇಂಟೆಲಜೆನ್ಸ್‌- ಎಐ (ಕೃತಕ ಬುದ್ಧಿಮತ್ತೆ) ಬದಲಿಯಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹಿಮಾ ಕೊಹ್ಲಿ ಶನಿವಾರ ಅಭಿಪ್ರಾಯಪಟ್ಟರು.

ನವದೆಹಲಿಯಲ್ಲಿ ಶನಿವಾರ ನಡೆದ ಐಸಿಐಸಿಐ ಬ್ಯಾಂಕ್‌ ಕಾನೂನು ತಂಡದ ಜ್ಞಾನ ಪ್ರಸಾರ ವೇದಿಕೆ ʼಐ ಅಮಿಕಸ್‌ʼನ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ನ್ಯಾಯಮೂರ್ತಿ ಕೊಹ್ಲಿ ಮುಖ್ಯ ಭಾಷಣ ಮಾಡಿದರು.

ನ್ಯಾ. ಕೊಹ್ಲಿ ಅವರ ಮಾತಿನ ಪ್ರಮುಖಾಂಶಗಳು

  • ಕೃತಕ ಬುದ್ಧಿಮತ್ತೆಯನ್ನು ನ್ಯಾಯಾಧೀಶರ ಬುದ್ಧಿವಂತಿಕೆ ಮತ್ತು ಅನುಭವಕ್ಕೆ ಬದಲಿಯಾಗಿ ಬಳಸಲು ಸಾಧ್ಯವಿಲ್ಲ. ಪ್ರಕರಣವನ್ನು ನಡೆಸಲು ವಕೀಲರಿಗೆ ಅಗತ್ಯವಿರುವ ಮಾನವೀಯ ಅಂಶಗಳಿಗೆ ಅದು ಪರ್ಯಾಯವಾಗದು.

  • ಇದು ಬುದ್ಧಿವಂತಿಕೆ ಮತ್ತು ನೈಜತೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರ ಜೀವನಾನುಭವಕ್ಕೆ ಬದಲಿಯಾಗದು.

  • ಆದಾಗ್ಯೂ, ಸಂಚಾರ ಉಲ್ಲಂಘನೆ, ಕ್ರೆಡಿಟ್ ಕಾರ್ಡ್ ಮರುಪಡೆಯುವಿಕೆ ಮತ್ತು ಚೆಕ್ ಬೌನ್ಸ್ ರೀತಿಯ ಪ್ರಕರಣಗಳ ವಿಚಾರಣೆಗೆ ಇದನ್ನು ಬಳಸಬಹುದು.

  • ಇಂತಹ ಪ್ರಕರಣಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಪ್ರಕರಣಗಳ ಬಾಕಿ ಉಳಿವಿಯುವಿಕೆಯನ್ನು ಕಡಿಮೆ ಮಾಡಲು ಹಾಗೂ ಪ್ರಕರಣ ವಿಲೇವಾರಿ ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

  • ಜಿಲ್ಲಾ ನ್ಯಾಯಾಂಗದ ಗಮನಾರ್ಹ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • ಇಷ್ಟಾದರೂ ನ್ಯಾಯಸಮ್ಮತತೆ, ಪೂರ್ವಗ್ರಹ ಹಾಗೂ  ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಯ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಪ್ರಶ್ನೆಗಳಿವೆ.

  •  ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕಬುದ್ಧಿಮತ್ತೆ ಬಳಕೆ ಮಾಡುವುದರಿಂದ ದಾವೆದಾರರ ಸೂಕ್ಷ್ಮ ಮಾಹಿತಿ ಸೇರಿದಂತೆ ಹೆಚ್ಚಿನ ಪ್ರಮಾಣದ ವೈಯಕ್ತಿಕ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

  • ಸಮ್ಮತಿಯಿಲ್ಲದೆ ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಹಂಚಿಕೊಳ್ಳುವ ಅಪಾಯವಿದೆ, ಇದು ಗೌಪ್ಯತೆ ಮತ್ತು ನಾಗರಿಕ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದು.

  • ಹೀಗಾಗಿ ಮಾನವ ಮೇಲ್ವಿಚಾರಣೆಯೊಂದಿಗಷ್ಟೇ ಕೃತಕ ಬುದ್ಧಿಮತ್ತೆಯನ್ನು ಅನುಷ್ಠಾನಕ್ಕೆ ತರಬೇಕಿದೆ.