Aruna Shyam with Advocate General 
ಸುದ್ದಿಗಳು

ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಕ: ಬೆಂಗಳೂರಿಗೆ ಅರುಣ ಶ್ಯಾಮ, ಗುಲ್ಬರ್ಗಾ ಪೀಠಕ್ಕೆ ವೈ ಎಚ್ ವಿಜಯಕುಮಾರ್

ಅರುಣ ಶ್ಯಾಮ ಮತ್ತು ವೈ ಎಚ್ ವಿಜಯಕುಮಾರ್ ಅವರನ್ನು ಕ್ರಮವಾಗಿ ಬೆಂಗಳೂರು ಮತ್ತು ಗುಲ್ಬರ್ಗಾ ಪೀಠಕ್ಕೆ ನೇಮಕ ಮಾಡಲಾಗಿದೆ.

Bar & Bench

ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪೀಠಕ್ಕೆ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಆಗಿ ವಕೀಲ ಅರುಣ ಶ್ಯಾಮ ಅವರನ್ನು ನೇಮಕ ಮಾಡಲಾಗಿದೆ.

ಅರುಣ ಶ್ಯಾಮ ಅವರು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರಿಂದ ಸೆಪ್ಟೆಂಬರ್ 9 ರಂದು ಅಧಿಕಾರ ಸ್ವೀಕರಿಸಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿ.ಎ. ಎಲ್.ಎಲ್.ಬಿ ಮತ್ತು ಎಲ್.ಎಲ್.ಎಂ ಮುಗಿಸಿದ ನಂತರ ಅವರು 2004 ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಸ್ವಲ್ಪ ಸಮಯದ ಬಳಿಕ ಹಿರಿಯ ವಕೀಲ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರ ನೇತೃತ್ವದಲ್ಲಿ ಕಾನೂನು ಸೇವೆ ಸಲ್ಲಿಸಿದರು.

ಪ್ರಸ್ತುತ, ಅರುಣ ಶ್ಯಾಮ ಅವರು ಲೋಕ ಅದಾಲತ್ ನ್ಯಾಯಪೀಠದ ಸಮಾಲೋಚಕರಾಗಿ ಮತ್ತು ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ಯಾಮ ಅವರು ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಕೂಡ. ಪ್ರಸ್ತುತ, ಅವರು ಬೆಂಗಳೂರಿನ ಅಲೈಯನ್ಸ್ ಸ್ಕೂಲ್ ಆಫ್ ಲಾದಲ್ಲಿ ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿದ್ದಾರೆ.

ಆರ್ ನಟರಾಜ್ ಅವರಿಗೆ ಪದೋನ್ನತಿ ನೀಡಿದ ನಂತರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ಖಾಲಿ ಇತ್ತು. ನ್ಯಾಯಮೂರ್ತಿ ಆರ್ ನಟರಾಜ್ ಅವರು 2019 ರ ನವೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ಬಡ್ತಿ ಪಡೆದರು.

ವೈ ಎಚ್ ವಿಜಯಕುಮಾರ್ ಅವರನ್ನು ಹೈಕೋರ್ಟ್‌ನ ಗುಲ್ಬರ್ಗ ಪೀಠದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಗಿದೆ.

ಮುಂದಿನ ಆದೇಶದವರೆಗೆ ಧ್ಯಾನ್ ಚಿನ್ನಪ್ಪ ಅವರು ಧಾರವಾಡ ಪೀಠದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಮುಂದುವರೆಯಲಿದ್ದಾರೆ ಎಂದು ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಧಿಸೂಚನೆಯನ್ನು ಇಲ್ಲಿ ಓದಿ: