ಸುದ್ದಿಗಳು

[ಲೈವ್ ಅಪ್‌ಡೇಟ್ಸ್‌] ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ವಿಚಾರಣೆಯ ಕ್ಷಣಕ್ಷಣದ ಮಾಹಿತಿ

ಲಖನೌನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ತೀರ್ಪು ಪ್ರಕಟಿಸಲಿದ್ದಾರೆ.

Bar & Bench

ಲಖನೌನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ತೀರ್ಪು ಪ್ರಕಟಿಸಲಿದ್ದಾರೆ.

Special Judge S K Yadav

ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತಾದ ತೀರ್ಪನ್ನು ಇಂದು (ಬುಧವಾರ) ಲಖನೌ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. ಆಡಳಿತಾರೂಢ ಬಿಜೆಪಿಯ ಹಿರಿಯ ನೇತಾರರಾದ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್ ಮತ್ತು ಉಮಾ ಭಾರತಿ ಒಳಗೊಂಡಂತೆ 32 ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ವಿಶೇಷ ನ್ಯಾಯಾಧೀಶ ಎಸ್‌ ಕೆ ಯಾದವ್ ಅವರು ಭದ್ರತೆ ಕಲ್ಪಿಸುವಂತೆ ಕೋರಿದ್ದರು. 2019ರಲ್ಲಿ ಸುಪ್ರೀಂ ಕೋರ್ಟ್ “ನ್ಯಾಯಾಧೀಶರ ಮೇಲಿರುವ ಜವಾಬ್ದಾರಿ ಮಹತ್ತರವಾಗಿದ್ದು, ಅವರು ರಕ್ಷಣೆ ಕೋರಿರುವುದು ಸರಿಯಾಗಿದೆ” ಎಂದು ಹೇಳಿತ್ತು.

ಬಾಬರಿ ಮಸೀದಿ ಧ್ವಂಸ ಪ್ರಕರಣ: ಪ್ರಕರಣದ ಪ್ರಮುಖ ಆರೋಪಿಗಳ ಸ್ಥಾನದಲ್ಲಿರುವ ಬಿಜೆಪಿಯ ಹಿರಿಯ ನಾಯಕರಾದ ಎಲ್‌ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್‌ ಸಿಂಗ್‌ ಹಾಗೂ ಉಮಾಭಾರತಿ ಅವರ ಅನುಪಸ್ಥಿತಿ. ಅಡ್ವಾಣಿ, ಜೋಷಿ ಅವರು ವಯೋಸಹಜ ಹಾಗೂ ಕೋವಿಡ್‌ ಸನ್ನಿವೇಶದ ಕಾರಣದಿಂದಾಗಿ ಅನುಪಸ್ಥಿತಿ. ಉಮಾ ಅನುಪಸ್ಥಿತಿಗೆ ಕೋವಿಡ್ ಪಾಸಿಟಿವ್ ಕಾರಣ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌ ಕೆ ಯಾದವ್‌ ಅವರು ಉಪಸ್ಥಿತರಾಗಿದ್ದಾರೆ. ಬಿಜೆಪಿ ಪ್ರಮುಖ ನಾಯಕರನ್ನು ಹೊರತುಪಡಿಸಿ ಪ್ರಕರಣದ ಉಳಿದ 27 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರು.

ನ್ಯಾಯಾಲಯದ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್. ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಹೊರತಾದ ಯಾರಿಗೂ ನ್ಯಾಯಾಲಯದಲ್ಲಿ ಪ್ರವೇಶವಿಲ್ಲ.

ಎರಡು ಎಫ್‌ಐಆರ್‌ಗಳ ಕುರಿತು ನ್ಯಾಯಾಲಯವು ಇಂದು ನಿರ್ಧರಿಸಲಿದೆ - 197/1992 & 198/1992 ಎಫ್‌ಐಆರ್‌ 197 ಧ್ವಂಸ ಪ್ರಕರಣದಲ್ಲಿ ಭಾಗಿಯಾದ ಹೆಸರು ಉಲ್ಲೇಖಿಸಿರದ ಕರಸೇವಕರ ಕುರಿತಾದದ್ದು. ಎಫ್‌ಐಆರ್‌ 198 ಮಸೀದಿ ಧ್ವಂಸಗೊಳಿಸಲು ಪ್ರಚೋದನೆ ನೀಡಿದ ಎಂಟು ಬಿಜೆಪಿ ನಾಯಕರ ವಿರುದ್ಧ ದಾಖಲಿಸಲಾಗಿರುವುದು.

8 ಪ್ರಮುಖ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು: 1. ಎಲ್‌ ಕೆ ಅಡ್ವಾಣಿ 2. ಎಂ ಎಂ ಜೋಷಿ 3. ಉಮಾಭಾರತಿ 4. ಕಲ್ಯಾಣ್‌ ಸಿಂಗ್ 5. ವಿನಯ್‌ ಕಟಿಯಾರ್ 6. ಸಾಕ್ಷಿ ಮಹಾರಾಜ್ 7. ಲಲ್ಲು ಸಿಂಗ್ 8. ಬಿ ಬಿ ಶರಣ್‌ ಸಿಂಗ್.

ಬಾಬರಿ ಮಸೀದಿ ಧ್ವಂಸ ಪ್ರಕರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ. ತೀರ್ಪನ್ನು ಓದುತ್ತಿರುವ ನ್ಯಾ. ಎಸ್‌ ಕೆ ಯಾದವ್‌. ಪ್ರಕರಣವು ಪೂರ್ವನಿಯೋಜಿತವಲ್ಲ. ಎಲ್ಲರನ್ನೂ ಖುಲಾಸೆಗೊಳಿಸಲಾಗಿದೆ.

ಬ್ರೇಕಿಂಗ್: ಬಾಬರಿ ಮಸೀದಿ ಧ್ವಂಸ ಪ್ರಕರಣ ಆರೋಪಿತ ಎಲ್ಲ 32 ಮಂದಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ.

ಬಾಬರಿ ಮಸೀದಿ ಧ್ವಂಸ ಪ್ರಕರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ. ತೀರ್ಪನ್ನು ಓದುತ್ತಿರುವ ನ್ಯಾ. ಎಸ್‌ ಕೆ ಯಾದವ್‌. ಪ್ರಕರಣವು ಪೂರ್ವನಿಯೋಜಿತವಲ್ಲ. ಎಲ್ಲರನ್ನೂ ಖುಲಾಸೆಗೊಳಿಸಲಾಗಿದೆ.

ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪ ಹೊತ್ತಿದ್ದ ಬಿಜೆಪಿ ಹಾಗೂ ಸಂಘಪರಿವಾರದ ಎಲ್ಲ 32 ನಾಯಕರನ್ನೂ ಖುಲಾಸೆಗೊಳಿಸಿದ ಲಖನೌ ವಿಶೇಷ ಸಿಬಿಐ ನ್ಯಾಯಾಲಯ.