Cheque Bouncing

 
ಸುದ್ದಿಗಳು

ಖಾತೆ ಫ್ರೀಜ್ ಆಗಿದೆ ಎಂದು ಚೆಕ್ ಮರಳಿಸಿದರೆ ಖಾತೆ ಅಸ್ತಿತ್ವವನ್ನು ಬ್ಯಾಂಕ್ ನಿರಾಕರಿಸುವಂತಿಲ್ಲ: ಸುಪ್ರೀಂ [ಚುಟುಕು]

Bar & Bench

ಬ್ಯಾಂಕ್‌ ಖಾತೆ ಫ್ರೀಜ್‌ (ಸ್ಥಗಿತ) ಆಗಿದೆ ಎಂಬ ಹೇಳಿಕೆಯೊಂದಿಗೆ ಚೆಕ್‌ ಮರಳಿಸಿದರೆ ಖಾತೆಯ ಅಸ್ತಿತ್ವವನ್ನು ಬ್ಯಾಂಕ್‌ಗಳು ಹೊಂದಿವೆ ಎಂದು ಭಾವಿಸಬಹುದು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಹೇಳಿದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆ- 1881ರ ಸೆಕ್ಷನ್ 138ರಡಿ ಮೇಲ್ಮನವಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಿದ್ದ ರಾಜಸ್ಥಾನ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠ ತಿರಸ್ಕರಿಸಿತು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬ್ಯಾಂಕೊಂದರ ನಿರ್ವಾಹಕರು ಪ್ರಸ್ತಾಪಿಸಲ್ಪಟ್ಟಿರುವ ಖಾತೆಯು ಫ್ರೀಜ್‌ ಆಗಿದೆ (ಸ್ಥಗಿತಗೊಂಡಿದೆ) ಎಂದು ಆ ಖಾತೆಯಿಂದ ನೀಡಲಾಗಿದ್ದ ಚೆಕ್‌ ಅನ್ನು ಮರಳಿಸಿದ್ದರು, ಮತ್ತೊಂದೆಡೆ ಅಂತಹ ಯಾವುದೇ ಖಾತೆಯನ್ನು ತಮ್ಮ ಬ್ಯಾಂಕಿನಲ್ಲಿ ಆರಂಭಿಸಲಾಗಿಲ್ಲ, ನಿರ್ವಹಣೆಯನ್ನೂ ಮಾಡಲಾಗಿಲ್ಲ ಎಂದು ಹೇಳಿದ್ದರು. ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೆಕ್‌ ಮರಳಿಸಿದ್ದರೆ ಅದರ ಅರ್ಥ ಖಾತೆಯನ್ನು ಅಲ್ಲಿ ಆರಂಭಿಸಿ, ನಿರ್ವಹಣೆ ಮಾಡಲಾಗಿತ್ತು ಎನ್ನುವುದಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.