GVK
GVK 
ಸುದ್ದಿಗಳು

ಭಾರತೀಯ ವಕೀಲರಿಗಾಗಿ ಕಲ್ಲಿದ್ದಲು ಕಂಪೆನಿ ಒತ್ತಾಯ: ವಿಚಾರಣೆ ವಿಳಂಬಕ್ಕೆ ಯತ್ನ ಎಂದು ಬ್ರಿಟನ್ ಹೈಕೋರ್ಟ್ ಕೆಂಗಣ್ಣು

Bar & Bench

ಕಲ್ಲಿದ್ದಲು ಗಣಿ ಕಂಪೆನಿ ಜಿವಿಕೆ ಕೋಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ಸಿಂಗಪುರ) ವಿರುದ್ಧ ಐದು ಭಾರತೀಯ ಬ್ಯಾಂಕ್‌ಗಳು ಸಲ್ಲಿಸಿದ ಮೊಕದ್ದಮೆಗೆ ಸಂಬಂಧಿಸಿದಂತೆ ಜಿವಿಕೆಗೆ ವಕೀಲ ಪ್ರಾತಿನಿಧ್ಯ ಪಡೆಯಲು ಅವಕಾಶ ನೀಡದೆ ಮೊಕದ್ದಮೆ ಮುಂದುವರೆಸಲು ಬ್ರಿಟನ್‌ನ ಹೈಕೋರ್ಟ್‌ ವ್ಯಾಪ್ತಿಯ ವಾಣಿಜ್ಯ ನ್ಯಾಯಾಲಯ ಈಚೆಗೆ ನಿರ್ಧರಿಸಿದೆ [ಬ್ಯಾಂಕ್ ಆಫ್ ಬರೋಡಾ ಮತ್ತಿತರರು ಹಾಗೂ ಜಿವಿಕೆ ಇನ್ನಿತರರ ನಡುವಣ ಪ್ರಕರಣ].

ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ನಿರ್ಮಿಸಲು ಭಾರತೀಯ ಬ್ಯಾಂಕುಗಳಿಂದ ನೂರು ಕೋಟಿ ಡಾಲರ್‌ಗೂ ಹೆಚ್ಚು ಸಾಲ ಪಡೆಯಲಾಗಿದ್ದು ಅದನ್ನು ತೀರಿಸಿಲ್ಲ ಎಂದು ಗಣಿ ಕಂಪೆನಿ ಜಿವಿಕೆ ವಿರುದ್ಧ ಬ್ರಿಟನ್‌ ಹೈಕೋರ್ಟ್‌ನಲ್ಲಿ ಬ್ಯಾಂಕ್‌ ಆಫ್‌ ಬರೋಡ ಸೇರಿದಂತೆ ಐದು ಬ್ಯಾಂಕ್‌ಗಳು  ಮೊಕದ್ದಮೆ ಹೂಡಿದ್ದವು.

ಬ್ರಿಟನ್‌ನಲ್ಲಿ ಪ್ರಾಕ್ಟೀಸ್‌ ಮಾಡಲು ಪರವಾನಗಿ ಪಡೆದಿರುವ ವಕೀಲರನ್ನು ಪ್ರಕರಣದಲ್ಲಿ ಜಿವಿಕೆ ತೊಡಗಿಸಿಕೊಳ್ಳುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಭಾರತೀಯ ವಕೀಲರನ್ನು ತೊಡಗಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಅಗತ್ಯವಿದ್ದು ಜಿವಿಕೆ ವಿಚಾರಣೆ ವಿಳಂಬಗೊಳಿಸಲು ಅಥವಾ ತಡೆಯಲು ಯತ್ನಿಸುತ್ತಿದೆ ಎಂಬುದಾಗಿ ನ್ಯಾಯಾಲಯ ನುಡಿದಿದೆ.

"ಪ್ರತಿವಾದಿಗಳು (ಜಿವಿಕೆ) ಉದ್ದೇಶಪೂರ್ವಕವಾಗಿ ಇಂದು ವಿಚಾರಣೆಗೆ ಗೈರುಹಾಜರಾಗಿದ್ದು ಅವರು ಪತ್ರ ವ್ಯವಹಾರದ ಮೂಲಕ ನ್ಯಾಯಾಲಯದ ಮತ್ತು ಹಕ್ಕುದಾರರ ಸಮಯಗಳೆರಡನ್ನೂ ವ್ಯರ್ಥ ಮಾಡಲು ಹೊರಟಿದ್ದಾರೆ. ಪ್ರತಿವಾದಿಗಳ ಅನುಪಸ್ಥಿತಿಯಲ್ಲಿ ವಿಚಾರಣೆ ಮುಂದುವರಿಸುವುದು ಸೂಕ್ತ" ಎಂದು ಹೈಕೋರ್ಟ್‌ ಹೇಳಿದೆ.

ಭಾರತೀಯ ವಕೀಲ ಕಾರ್ತಿಕ್ ನಾಯರ್ ಅವರು ಖುದ್ದು ಹಾಜರಾಗಲು ಜಿವಿಕೆ ನ್ಯಾಯಾಲಯದ ಅನುಮತಿ ಕೋರಿತ್ತಾದರೂ ಅಸಮಾನ್ಯ ಸಂದರ್ಭಗಳಲ್ಲಿ ಮಾತ್ರ ಸಾಧ್ಯ ಎಂದು ನ್ಯಾಯಾಲಯದ ನಿಯಮಾವಳಿಗಳು ಹೇಳುತ್ತವೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Bank_of_Baroda_and_others_v__GVK_and_others.pdf
Preview