Chief Justic of India DY Chandrachud
Chief Justic of India DY Chandrachud 
ಸುದ್ದಿಗಳು

ಸಮಾಜದ ಅಸಮಾನತೆ ತೊಡೆದುಹಾಕಲು ಸಾಂವಿಧಾನಿಕ ಮೌಲ್ಯಗಳಿಂದ ಮಾರ್ಗದರ್ಶನ ಪಡೆಯುವಂತೆ ಸಿಜೆಐ ಚಂದ್ರಚೂಡ್ ಕರೆ

Bar & Bench

ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆ ಹೋಗಲಾಡಿಸಲು ಸಾಂವಿಧಾನಿಕ ಮನೋಭಾವ ಬೆಳೆಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕರೆ ನೀಡಿದರು.

ನಾಗಪುರದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ವಕೀಲರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಪ್ಪತ್ತು ವರ್ಷಗಳ ಹಿಂದೆ ಸಂವಿಧಾನ ರಚನೆಯಾದಾಗ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆ ಈಗಲೂ ಇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಹೆಚ್ಚು ನ್ಯಾಯಯುತವಾದ ಮತ್ತು ಪ್ರಜಾಪ್ರಭುತ್ವ ಸಮಾಜದ ಕಡೆಗೆ ಸಂವಿಧಾನ ದಾಪುಗಾಲಿಟ್ಟಿದೆ. ಆದರೆ ನಾವು ವಿಶ್ರಾಂತಿ ಪಡೆಯುವ ಮುನ್ನ ಹೆಚ್ಚು ಕೆಲಸ ಮಾಡಬೇಕಿದೆ.

  • ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ಸಮಾಜವನ್ನು ಛಿದ್ರಗೊಳಿಸಿದ ಆಳವಾದ ಅಸಮಾನತೆ ಇಂದಿಗೂ ಮುಂದುವರೆದಿದೆ. ಈ ಅಸಮಾನತೆಯನ್ನು ಹೋಗಲಾಡಿಸುವ ದೃಢ ಮತ್ತು ಉತ್ತಮ ಮಾರ್ಗ ಎಂದರೆ ನಮ್ಮ ಸಮಾಜದಲ್ಲಿ ಸಾಂವಿಧಾನಿಕತೆಯ ಮನೋಭಾವ ಬೆಳೆಸುವುದಾಗಿದೆ.

  •  ಯುವ ವಕೀಲರು ತಮ್ಮ ವೃತ್ತಿಪರ ಜೀವನದಲ್ಲಿ ವಿಫಲರಾಗದೆ ಸಾಗಬೇಕಾದರೆ ಅವರು ಸಾಂವಿಧಾನಿಕ ಮೌಲ್ಯಗಳು ಮಾರ್ಗದರ್ಶನ ಮಾಡಿದಂತೆ ನಡೆಯಬೇಕು.

  • ಸಹ ಪ್ರಜೆಗಳು ಕೇವಲ ಕಾಗದದ ಮೇಲಷ್ಟೇ ಅಲ್ಲದೆ ನಿಜವಾದ ಅರ್ಥದಲ್ಲಿ ಸತ್ವಯುತ ಪ್ರಜೆಗಳಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಸಿಗುವ ವಾತಾವರಣ ನಿರ್ಮಿಸಿ.