P Varavara Rao
P Varavara Rao  
ಸುದ್ದಿಗಳು

ಭೀಮಾ ಕೋರೆಗಾಂವ್: ವರವರ ರಾವ್‌ಗೆ ಶಾಶ್ವತ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಕಾರ, ತಾತ್ಕಾಲಿಕ ಜಾಮೀನು ಅವಧಿ ವಿಸ್ತರಣೆ

Bar & Bench

2018ರ ಭೀಮಾ ಕೋರೆಗಾಂವ್ ಹಿಂಸಾಚಾರದ ಆರೋಪಿಯಾಗಿರುವ ತೆಲುಗು ಕವಿ ವರವರ ರಾವ್ ಅವರು ಶಾಶ್ವತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಜಾಮೀನಿನ ಅವಧಿಯಲ್ಲಿ ತೆಲಂಗಾಣದಲ್ಲಿ ಉಳಿಯಲು ಅವಕಾಶ ಕೋರಿದ್ದ ರಾವ್‌ ಅವರ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಬಿ ಶುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಪೀಠ ನಿರಾಕರಿಸಿತು.

"ಶಾಶ್ವತ ಜಾಮೀನು ಕೋರಿ ಪ್ರಸ್ತುತ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಾಗಿದೆ. ತೆಲಂಗಾಣಕ್ಕೆ ತೆರಳಲು ಜಾಮೀನು ಮಾರ್ಪಾಡು ಕೋರಿ ಸಲ್ಲಿಸಲಾದ ಮನವಿಯನ್ನು ವಜಾಗೊಳಿಸಲಾಗಿದೆ" ಎಂದು ಪೀಠ ಹೇಳಿದೆ.

ಆದರೆ ಅವರಿಗೆ ನೀಡಲಾಗಿದ್ದ ತಾತ್ಕಾಲಿಕ ಜಾಮೀನನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಿ ಪೀಠ ಆದೇಶ ಹೊರಡಿಸಿತು. ಈ ಹಿಂದೆ ವಿಭಾಗೀಯ ಪೀಠ ರಾವ್‌ ಅವರಿಗೆ ಆರು ತಿಂಗಳ ಅವಧಿಗೆ ತಾತ್ಕಾಲಿಕ ವೈದ್ಯಕೀಯ ಜಾಮೀನು ನೀಡಿತ್ತು.