Kids, Books
Kids, Books 
ಸುದ್ದಿಗಳು

ಐದು ಮಕ್ಕಳಿಗೆ ಮೂರು ತಿಂಗಳು ಉಚಿತ ಶಿಕ್ಷಣ ನೀಡುವ ಷರತ್ತು: ಮಧ್ಯ ಕಳ್ಳಸಾಗಣೆ ಆರೋಪಿಗೆ ಬಿಹಾರ ನ್ಯಾಯಾಲಯದಿಂದ ಜಾಮೀನು

Bar & Bench

ಮೂರು ತಿಂಗಳ ಕಾಲ ಐದು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕು ಎಂಬ ಷರತ್ತು ವಿಧಿಸಿರುವ ಬಿಹಾರದ ಮಧುಬಾನಿ ಜಿಲ್ಲೆಯ ನ್ಯಾಯಾಲಯವು ಬಿಹಾರ ಮದ್ಯ ನಿಷೇಧ ಮತ್ತು ಅಬಕಾರಿ ಕಾಯಿದೆ 2016ರ ಅಡಿ ಆರೋಪಿ ನಿತೀಶ್‌ ಕುಮಾರ್‌ಗೆ ಜಾಮೀನು ಮಂಜೂರು ಮಾಡಿದೆ ಎಂದು ಆಂಗ್ಲ ಪತ್ರಿಕೆ ʼದಿ ಹಿಂದೂʼ ವರದಿ ಮಾಡಿದೆ.

ಬಿಹಾರದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಕುಮಾರ್ ಅವರಿಗೆ ಸೂಚಿಸಿದ್ದಾರೆ.

ಮೂರು ತಿಂಗಳ ಬಳಿಕ ಆರೋಪಿಗೆ ನ್ಯಾಯಾಲಯ ವಿಧಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಮಕ್ಕಳ ಕುಟುಂಬ ಸದಸ್ಯರು ಸರ್ಟಿಫಿಕೇಟ್‌ಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

ಬಿಹಾರ ಮದ್ಯ ನಿಷೇಧ ಮತ್ತು ಅಬಕಾರಿ ಕಾಯಿದೆ ಅಡಿ ಕುಮಾರ್‌ ಅವರ ವಿರುದ್ಧ ಕಳೆದ ವರ್ಷದ ನವೆಂಬರ್‌ 16ರಂದು ಮಾಧೇಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಪಚಚಿ ಗ್ರಾಮದ ಸಮೀಪ ಸ್ಕಾರ್ಪಿಯೊ ಎಸ್‌ಯುವಿ ವಾಹನ ಮತ್ತು ಬೈಕ್‌ನಲ್ಲಿ ಕಾನೂನುಬಾಹಿರವಾಗಿ ಮದ್ಯ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ವಿಷಯ ಕಾವಲುಗಾರ ಜಲ್ಧಾರಿ ಪಾಸ್ವಾನ್‌ ಅವರಿಗೆ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅವರು ಅದನ್ನು ತಡೆಯುವ ಪ್ರಯತ್ನ ಮಾಡಿದ್ದರು. ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸದಿಂತೆ ಪಾಸ್ವಾನ್‌ ಅವರು ದೂರು ದಾಖಲಿಸಿದ ಬಳಿಕ ಕುಮಾರ್‌ ಅವರನ್ನು ಬಂಧಿಸಲಾಗಿತ್ತು.