A1
A1
ಸುದ್ದಿಗಳು

ಕಿಕ್ಕಿರಿದ ಮುಂಬೈ ಸ್ಥಳೀಯ ರೈಲು ಏರುವುದು ಅಪರಾಧ ಕೃತ್ಯವಲ್ಲ, ಪರಿಹಾರ ನಿರಾಕರಿಸಬಾರದು: ಬಾಂಬೆ ಹೈಕೋರ್ಟ್ [ಚುಟುಕು]

Bar & Bench

ಮುಂಬೈನ ಕಿಕ್ಕಿರಿದ ಲೋಕಲ್‌ ರೈಲುಗಳನ್ನೇರುವುದು 1989ರ ರೈಲ್ವೆ ಕಾಯಿದೆಯ ಸೆಕ್ಷನ್ 124ಎ ಅಡಿ ಅಪರಾಧ ಕೃತ್ಯವಾಗದು ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಚಲಿಸುವ ರೈಲಿನಿಂದ ಬಿದ್ದು ಗಾಯಗೊಂಡಿದ್ದ ತನಗೆ ಪರಿಹಾರ ನಿರಾಕರಿಸಿದ್ದ ರೈಲ್ವೆ ಪರಿಹಾರ ನ್ಯಾಯಮಂಡಳಿಯ ನಿರ್ಧಾರ ಪ್ರಶ್ನಿಸಿ 75 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕಿಕ್ಕಿರಿದ ರೈಲನ್ನೇರುವಾಗ ಇತರೆ ಪ್ರಯಾಣಿಕರು ತಳ್ಳಿದ ಕಾರಣಕ್ಕೆ ಬಿದ್ದು ಗಾಯಗೊಂಡ ವ್ಯಕ್ತಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪೀಠ ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ಅವರಿಗೆ ₹ 3.10 ಲಕ್ಷ ಮೊತ್ತವನ್ನು ಪಾವತಿಸುವಂತೆ ಪಶ್ಚಿಮ ರೈಲ್ವೆಗೆ ನ್ಯಾ. ಭಾರತಿ ಡಾಂಗ್ರೆ ಸೂಚಿಸಿದರು

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.