ಹೈಕೋರ್ಟ್‌ಗೆ ಸಲ್ಲಿಕೆಯಾಗುತ್ತಿರುವ ಕ್ಷುಲ್ಲಕ 'ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಕುರಿತಂತೆ ಬಾಂಬೆ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್‌ದಾರ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.
ಬಾಂಬೆ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್‌ದಾರ್ ಅವರು ಬುಧವಾರ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗುತ್ತಿರುವ ಕ್ಷುಲ್ಲಕ 'ಸಾರ್ವಜನಿಕ ಹಿತಾಸಕ್ತಿ ದಾವೆ' (ಪಿಐಎಲ್) ಅರ್ಜಿಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕ್ಷುಲ್ಲಕ ಅರ್ಜಿಗಳು ನ್ಯಾಯಾಲಯದ ಅಮೂಲ್ಯ ಸಮಯವನ್ನು ಕಬಳಿಸುತ್ತವೆ ಎಂದು ಪಿಐಎಲ್ ವಿಲೇವಾರಿ ಮಾಡುವಾಗ ನ್ಯಾಯಮೂರ್ತಿಗಳು ತಿಳಿಸಿದರು.
“ಇಂತಹ ವ್ಯಾಜ್ಯಗಳ ಬಗ್ಗೆ ಕಡಿಮೆ ಮಾತನಾಡುವುದು ಒಳ್ಳೆಯದು… ಕ್ಷುಲ್ಲಕ ಅರ್ಜಿಗಳು. ಸಮಾಜದಲ್ಲಿ ಬದಲಾವಣೆ ತರುವಂತಹ ನೈಜ ಕಾರಣಗಳನ್ನು ಮಂಡಿಸಿ. ಇಂತಹ ವ್ಯಾಜ್ಯಗಳಿಂದಾಗಿ ಬೇರೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಪಿಐಎಲ್ ಪ್ರಕರಣ ವ್ಯವಹರಿಸುವಾಗ ನ್ಯಾಯಾಲಯ ಮೌಖಿಕವಾಗಿ ತಿಳಿಸಿತು.
ರಾಜ್ಯ ಸರ್ಕಾರ ನೀಡಿದ್ದ ಟೆಂಡರ್ ಪ್ರಶ್ನಿಸಿ ಪತ್ರಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಂಬೆ ಹೈಕೋರ್ಟ್ (ಸಾರ್ವಜನಿಕ ಹಿತಾಸಕ್ತಿ ದಾವೆ) ನಿಯಮಾವಳಿ 2010ರ ಅಡಿ ಬೇಕಾದ ವಿವರಗಳನ್ನು ಏಕೆ ಬಹಿರಂಗಪಡಿಸಿಲ್ಲ, ನಿರ್ದಿಷ್ಟ ಟೆಂಡರ್ ಬಗ್ಗೆ ಅವರಿಗೆ ಏಕೆ ಕಾಳಜಿ? ಈ ಮಾಹಿತಿಯನ್ನು ಅವರು ಎಲ್ಲಿಂದ ಏಕೆ ಪಡೆದರು? ಎಂದು ನ್ಯಾಯಾಲಯ ಪ್ರಶ್ನಿಸಿತು.
The judge also insisted on the submission of the details of various petitioners to verify if they had approached the court with bonafide interest and for public
ಅಲ್ಲದೆ ಪಿಐಎಲ್‌ಗಳನ್ನು ಸಲ್ಲಿಸಿರುವ ಇತರ ಅರ್ಜಿದಾರರ ಕುರಿತ ವಿವರಗಳನ್ನು ನೀಡುವಂತೆ ನ್ಯಾಯಮೂರ್ತಿಗಳು ಕೋರಿದರು. ಈ ವಿವರಗಳ ಮೂಲಕ ಅರ್ಜಿದಾರರು ನೈಜ ಕಾಳಜಿಯಿಂದ ನ್ಯಾಯಾಲಯವನ್ನು ಎಡತಾಕಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಬೇಕು ಎಂದು ಅದು ಅಭಿಪ್ರಾಯಪಟ್ಟಿತು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಾಮ್‌ದಾರ್ ಅವರು ಪ್ರತಿ ಬುಧವಾರದಂದು ಬಾಂಬೆ ಹೈಕೋರ್ಟ್‌ನ ಪ್ರಧಾನ ಪೀಠಕ್ಕೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಗಳ ವಿಚಾರಣೆ ನಡೆಸುತ್ತಾರೆ. ಮುಖ್ಯ ನ್ಯಾಯಮೂರ್ತಿ ಆರ್ ಡಿ ಧನುಕಾ ಅವರು ಮೇ 31 ರಂದುನಿವೃತ್ತರಾದ ಬಳಿಕ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಜಾಮ್‌ದಾರ್ ನೇತೃತ್ವದ ಪೀಠವು ಇದುವರೆಗೆ ಪಿಐಎಲ್‌ಗಳಿಗೆ ಸಂಬಂಧಿಸಿದಂತೆ 13 ಆದೇಶಗಳನ್ನು ಹೊರಡಿಸಿದೆ.