Raj Thackeray  Facebook
ಸುದ್ದಿಗಳು

ರಾಜ್ ಠಾಕ್ರೆ ಯಾತ್ರೆ ಪ್ರಶ್ನಿಸಿದ್ದ ಪಿಐಎಲ್ ರಾಜಕೀಯ ಪ್ರೇರಿತ: ₹ 1 ಲಕ್ಷ ದಂಡ ವಿಧಿಸಿದ ಬಾಂಬೆ ಹೈಕೋರ್ಟ್ [ಚುಟುಕು]

ಮೇ 1 ರಂದು ಮಹಾರಾಷ್ಟ್ರ ದಿನದ ಅಂಗವಾಗಿ ನಡೆದ ರಾಜ್ ಠಾಕ್ರೆ ಅವರ ಯಾತ್ರೆಗೆ ಔರಂಗಾಬಾದ್ ನಗರ ಪೊಲೀಸ್ ಆಯುಕ್ತರು 16 ಕಠಿಣ ಷರತ್ತು ವಿಧಿಸಿದ್ದರು ಎಂಬುದನ್ನು ಪೀಠ ಗಮನಿಸಿತು.

Bar & Bench

ಕಳೆದ ಭಾನುವಾರ ಮಹಾರಾಷ್ಟ್ರ ದಿನದ ಅಂಗವಾಗಿ ಔರಂಗಾಬಾದ್‌ನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಹಮ್ಮಿಕೊಂಡಿದ್ದ ರಾಜಕೀಯ ಯಾತ್ರೆಗೆ ತಡೆ ನೀಡುವಂತೆ ಕೋರಿದ್ದ ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್‌ ₹ 1 ಲಕ್ಷ ದಂಡ ವಿಧಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸೋದರ ಸಂಬಂಧಿ ರಾಜ್‌ ಠಾಕ್ರೆ ಅವರು ನಡೆಸಿದ ರಾಜಕೀಯ ಯಾತ್ರೆಗೆ ತಡೆ ನೀಡುವಂತೆ ಕೋರಿ ಜಯಕಿಶನ್‌ ಕಾಂಬ್ಳೆ ಅವರು ಸಲ್ಲಿಸಿದ್ದ ಅರ್ಜಿ ರಾಜಕೀಯ ಪ್ರೇರಿತವಾದುದು. ಇದು ಪ್ರಾಮಾಣಿಕ ಅರ್ಜಿಯಂತೆ ಕಂಡು ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಆರ್‌ ಡಿ ಧನುಕಾ ಮತ್ತು ಎಸ್‌ ಜಿ ಮೆಹರೆ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.