ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆಗೈದು ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಸಜೆಯಲ್ಲಿರುವ ಇಬ್ಬರು ಅಪರಾಧಿಗಳಿಗೆ ಮುಕ್ತ ವಿಶ್ವವಿದ್ಯಾನಿಲಯ ಮೂಲಕ ಶಿಕ್ಷಣ ಮುಂದುವರೆಸಲು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಅನುಮತಿ ನೀಡಿದೆ [ನಿತಿನ್ ಗೋಪಿನಾಥ್ ಭೈಲುಮೆ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಬಂಧನದಲ್ಲಿರುವಾಗ ಶೈಕ್ಷಣಿಕ ಕೋರ್ಸ್‌ಗಳನ್ನು ಮುಂದುವರಿಸಲು ಅಪರಾಧಿಗಳ ಮನವಿಗೆ ಸಮ್ಮತಿಸುವಂತೆ ನ್ಯಾಯಮೂರ್ತಿಗಳಾದ ಪಿ ಬಿ ವರಾಳೆ ಮತ್ತು ಎಸ್ ಎಂ ಮೋದಕ್ ಅವರು ಜೈಲು ಅಧಿಕಾರಿಗಳಿಗೆ ಸೂಚಿಸಿದರು. "ಅರ್ಜಿದಾರರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಕೋರ್ಸ್ ಮುಂದುವರಿಸಲು ತಮ್ಮ ಇಚ್ಛೆ ವ್ಯಕ್ತಪಡಿಸಿರುವುದರಿಂದ, ಅಂತಹ ಬಯಕೆ ಸ್ವಾಗತಾರ್ಹ ಕ್ರಮ ಎಂದು ಪರಿಗಣಿಸಲಾಗಿದೆ ಮತ್ತು ಜೈಲು ಅಧಿಕಾರಿಗಳು ಅರ್ಜಿದಾರರ ಅಪೇಕ್ಷೆಗೆ ಮಾನವೀಯ ನೆಲೆಯಲ್ಲಿ ಅಗತ್ಯವಿರುವ ಎಲ್ಲಾ ಸಹಾಯ ನೀಡಬೇಕೆಂದು ನಾವು ಸೂಚಿಸುತ್ತೇವೆ" ಎಂದು ನ್ಯಾಯಾಲಯ ಹೇಳಿದೆ.
ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಕೋಪರ್ಡಿಯಲ್ಲಿ 2016ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಗಳಾದ ಜಿತೇಂದ್ರ ಶಿಂಧೆ ಮತ್ತು ನಿತಿನ್ ಭೈಲುಮೆ ಅವರಿಗೆ 2017ರಲ್ಲಿ ಮರಣದಂಡನೆ ವಿಧಿಸಲಾಗಿತ್ತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.