ಸುದ್ದಿಗಳು

ಇಂಗ್ಲಿಷ್ ಶಿಕ್ಷಕರಿಗೆ ಗಣಿತ ಪಾಠ ಮಾಡುವಂತೆ ಒತ್ತಾಯಿಸಿ ವೇತನಕ್ಕೆ ತಡೆ: ಅಧಿಕಾರಿಗಳ ವಿರುದ್ಧ ಬಾಂಬೆ ಹೈಕೋರ್ಟ್ ಕಿಡಿ

Bar & Bench

ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಬಗ್ಗೆ ʼಅನೀತಿಯುತʼ ಧೋರಣೆ ತಳೆದಿದ್ದಕ್ಕಾಗಿ ಮತ್ತು ಇಂಗ್ಲಿಷ್‌ ಶಿಕ್ಷಕರನ್ನು ಗಣಿತ ಪಾಠ ಮಾಡುವಂತೆ ಒತ್ತಾಯಿಸಿ ಅವರ ವೇತನ ತಡೆ ಹಿಡಿದದ್ದಕ್ಕಾಗಿ ಬಾಂಬೆ ಹೈಕೋರ್ಟ್‌ ಔರಂಗಾಬಾದ್‌ ಪೀಠ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

ಇಂಗ್ಲಿಷ್‌ ಶಿಕ್ಷಕರೊಬ್ಬರನ್ನು ಬುಡಕಟ್ಟು ಪ್ರದೇಶದ ಜಿಲ್ಲಾ ಪರಿಷತ್‌ ಶಾಲೆಯೊಂದಕ್ಕೆ ವರ್ಗಾಯಿಸಿ ಅಲ್ಲಿ ಗಣಿತ ತರಗತಿ ತೆಗೆದುಕೊಳ್ಳುವಂತೆ ಒತ್ತಾಯಿಸಿ ಅವರ ವೇತನ ನಿರಾಕರಿಸಿದ ಬಗ್ಗೆ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಎಸ್‌ ಜಿ ಡಿಗೆ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಬಾಬು ಶಿಂಧೆ ಎಂಬ ಶಿಕ್ಷಕರು ತಮಗೆ ಇಂಗ್ಲಿಷ್‌ ವಿಷಯದಲ್ಲಿ ಮಾತ್ರ ಪರಿಣತಿ ಇದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಹಾಗಾದರೆ ನೀವು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವಂತಿಲ್ಲ ಎಂದು ಅಧಿಕಾರಿಗಳು ತಾಕೀತು ಮಾಡಿದ್ದರು. ಪರಿಣಾಮ ಅವರಿಗೆ ವೇತನ ದೊರೆಯದಂತಾಗಿತ್ತು.

"ಬುಡಕಟ್ಟು ಪ್ರದೇಶದ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಬಾರದು. ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಬುಡಕಟ್ಟು ಪ್ರದೇಶದ ವಿದ್ಯಾರ್ಥಿಗಳು ಕೀಳು ಎಂಬ ಅನೀತಿಯುತ ವಿಧಾನವನ್ನು ಸಹಿಸಲಾಗದು" ಎಂದು ಆದೇಶದಲ್ಲಿ ತಿಳಿಸಲಾಗಿದ್ದು ಬಾಕಿ ಇರುವ ವೇತನವನ್ನು ಶಿಕ್ಷಕರಿಗೆ ಪಾವತಿಸುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Babu_Amrutrao_Shinde_vs_State_of_Maharashtra (1).pdf
Preview