Nawab Malik and Bombay High Court

 
ಸುದ್ದಿಗಳು

ಇ ಡಿ ಪ್ರಕರಣದ ವಿರುದ್ಧ ನವಾಬ್ ಮಲಿಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ಬಾಂಬೆ ಹೈಕೋರ್ಟ್‌ನಲ್ಲಿ [ಚುಟುಕು]

Bar & Bench

ಜಾರಿ ನಿರ್ದೇಶನಾಲಯ (ಇ ಡಿ) ತಮ್ಮ ವಿರುದ್ಧ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿ ಮತ್ತು ತಮ್ಮನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ಬುಧವಾರ ನಡೆಯಲಿದೆ. ನ್ಯಾಯಮೂರ್ತಿ ಎಸ್‌ ಬಿ ಶುಕ್ರೆ ನೇತೃತ್ವದ ಪೀಠ ಅರ್ಜಿ ಆಲಿಸಲಿದೆ.

ಮಲಿಕ್‌ ಅವರನ್ನು ಇ ಡಿ ಬಂಧಿಸಿರುವ ನಡೆಯು ಅಕ್ರಮವಾಗಿದೆ. ಅಲ್ಲದೆ, ವಿಶೇಷ ನ್ಯಾಯಾಧೀಶರು ಮಲಿಕ್‌ ಅವರನ್ನು ಇ ಡಿ ವಶಕ್ಕೆ ಒಪ್ಪಿಸಿರುವುದು ಅವರ ನ್ಯಾಯಿಕ ವ್ಯಾಪ್ತಿಯ ಆಚೆಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.