ಸುದ್ದಿಗಳು

ಮಾದಕವಸ್ತು ಪ್ರಕರಣ: ಶಾರೂಖ್ ಖಾನ್ ಪುತ್ರ ಆರ್ಯನ್‌ ಸಹಿತ ಮೂವರಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್

ಜಾಮೀನು ನೀಡಲು ಕಾರಣವಾದ ಅಂಶಗಳು ಹಾಗೂ ಜಾಮೀನು ಷರತ್ತುಗಳ ಕುರಿತಾದ ವಿಸ್ತೃತ ಅದೇಶವನ್ನು ನಾಳೆ ಪ್ರಕಟಿಸಲಾಗುವುದು ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿಗಳು ತಿಳಿಸಿದರು.

Bar & Bench

ವಿಲಾಸಿ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಹಾಗೂ ಮತ್ತಿಬ್ಬರು ಸಹ ಆರೋಪಿಗಳಿಗೆ ಗುರುವಾರ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ನಿತಿನ್‌ ಸಾಂಬ್ರೆ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದ್ದು ಪ್ರಕರಣದಲ್ಲಿ ಸಹ ಅರೋಪಿಗಳಾಗಿದ್ದ ಅರ್ಬಾಜ್‌ ಮರ್ಚೆಂಟ್‌ ಹಾಗೂ ಮೂನ್‌ಮೂನ್‌ ಧಮೇಚ ಅವರಿಗೂ ಜಾಮೀನು ದೊರೆತಿದೆ.

ಮಾದಕವಸ್ತು ನಿಯಂತ್ರಣ ದಳದ ಪರವಾಗಿ ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ವಾದ ಮಂಡನೆಯ ನಂತರ ಎಲ್ಲಾ ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಆದೇಶ ಪ್ರಕಟಿಸಿದರು. ಜಾಮೀನು ನೀಡಲು ಕಾರಣವಾದ ಅಂಶಗಳು ಹಾಗೂ ಷರತ್ತುಗಳೊನ್ನೊಳಗೊಂಡ ವಿಸ್ತೃತ ಆದೇಶವನ್ನು ನಾಳೆ ಪ್ರಕಟಿಸಲಾಗುವುದು ಎಂದು ಈ ವೇಳೆ ನ್ಯಾಯಮೂರ್ತಿಗಳು ತಿಳಿಸಿದರು.

ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ಆರ್ಯನ್‌ ಪರ ವಾದ ಮಂಡಿಸಿದರು. ಎನ್‌ಸಿಬಿ ಪರವಾಗಿ ಇಂದು ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರು ಆರ್ಯನ್‌ ಮತ್ತಿತರ ಬಗೆಗಿನ ಪ್ರಕರಣ ಇರುವುದು ʼಮಾದಕ ವಸ್ತು ಸೇವನೆಗಾಗಿ ಅಲ್ಲ. ಅದನ್ನು ಅವರು ಸೇವಿಸಲು ಬಳಸುವ ಸಲುವಾಗಿ ಪ್ರಜ್ಞಾಪೂರ್ವಕವಾಗಿ ಹೊಂದಿದ್ದರು ಎನ್ನುವುದಾಗಿದೆ ಎಂದರು.

ಪ್ರತ್ಯುತ್ತರ ವಾದ ಮಂಡಿಸಿದ ಆರ್ಯನ್‌ ಪರ ವಕೀಲ, ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ “ಯಾರೂ ಒಪ್ಪಂದ ಬದ್ಧವಾದ ಚರ್ಚೆ ನಡೆಸದೇ ಇರುವುದರಿಂದ ಸಂಚು ನಡೆದಿರಲಿಲ್ಲ. ತಾವು ಭೇಟಿಯಾಗಿ ಮಾದಕವಸ್ತು ಸೇವಿಸುವ ಬಗ್ಗೆ ಅಥವಾ ಧೂಮಪಾನದ ಕುರಿತು ಚರ್ಚೆ ನಡೆಸಿಲಿಲ್ಲ" ಎಂದು ವಾದಿಸಿದರು.

ನ್ಯಾಯಾಲಯದಲ್ಲಿ ಇಂದು ನಡೆದ ವಾದ ವಿವಾದಗಳ ಪೂರ್ಣ ವಿವರವನ್ನು ಈ ಕೆಳಗಿನ ಲಿಂಕ್‌ನಲ್ಲಿ ಗಮನಿಸಿಬಹುದು: