ಸುದ್ದಿಗಳು

ಎನ್‌ಜಿಟಿ ಕಾಯಿದೆಯ ಸೆಕ್ಷನ್ 3ನ್ನು ಎತ್ತಿಹಿಡಿದ ಸುಪ್ರೀಂ: ಭೋಪಾಲ್, ಜಬಲ್‌ಪುರಕ್ಕೆ ಇಲ್ಲ ಹೊಸ ಪೀಠ [ಚುಟುಕು]

Bar & Bench

ನ್ಯಾಯಮಂಡಳಿಗಳ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕಾಯಿದೆಯ ಸೆಕ್ಷನ್‌ 3ನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ [ಮಧ್ಯಪ್ರದೇಶ ಹೈಕೋರ್ಟ್‌ ವಕೀಲರ ಸಂಘ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಭೋಪಾಲ್ ಮತ್ತು ಜಬಲ್‌ಪುರದಲ್ಲಿ ಎನ್‌ಜಿಟಿ ಹೊಸ ಪೀಠ ಸ್ಥಾಪಿಸುವಂತೆ ಕೇಳಿರುವ ಮನವಿ ಅನಪೇಕ್ಷಿತವಾದುದು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಎನ್‌ಜಿಟಿ ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಮೇಲ್ಮನವಿ ಸಲ್ಲಿಸಿದರೆ ಅದರಿಂದ ಹೈಕೋರ್ಟ್‌ಗಳ ಅಧಿಕಾರ ದುರ್ಬಲವಾಗದು ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗಾಗಿ ಬಾರ್‌ ಅಂಡ್‌ ಬೆಂಚ್‌ ಇಂಗ್ಲಿಷ್‌ ಜಾಲತಾಣದ ʼಲಿಂಕ್‌ʼ ಗಮನಿಸಿ.