<div class="paragraphs"><p>Bulli Bai</p></div>

Bulli Bai

 
ಸುದ್ದಿಗಳು

[ಬುಲ್ಲಿ ಬಾಯ್‌ ಪ್ರಕರಣ] ಆರೋಪಿಗಳಾದ ಶ್ವೇತಾ ಸಿಂಗ್‌, ಮಯಾಂಕ್‌ ರಾವತ್‌ ಜ.10ರವರೆಗೆ ಪೊಲೀಸ್‌ ಕಸ್ಟಡಿಗೆ

Bar & Bench

ಬುಲ್ಲಿಬಾಯ್‌ ಅಪ್ಲಿಕೇಶನ್‌ ಪ್ರಕರಣದ ಆರೋಪಿಗಳಾದ ಉತ್ತರಾಖಂಡ ಮೂಲದ ಶ್ವೇತಾ ಸಿಂಗ್‌ ಮತ್ತು ಮಯಾಂಕ್‌ ರಾವತ್‌ ಅವರನ್ನು ಜನವರಿ 10ರವರೆಗೆ ಮುಂಬೈ ನ್ಯಾಯಾಲಯವು ಶುಕ್ರವಾರ ಪೊಲೀಸ್‌ ರಿಮ್ಯಾಂಡ್‌ಗೆ ನೀಡಿದೆ.

ಜನವರಿ 5ರಂದು ಉತ್ತರಾಖಂಡ ಪೊಲೀಸರು ಈ ಇಬ್ಬರನ್ನು ವಶಕ್ಕೆ ಪಡೆದಿದ್ದು, ಜನವರಿ 7ರಂದು ಅವರನ್ನು ಬಾಂದ್ರಾದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

18 ವರ್ಷದ ಶ್ವೇತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದು, ಅತ್ಯಂತ ಆಘಾತಕಾರಿ ಪೋಸ್ಟ್‌ ಮಾಡುತ್ತಿದ್ದರು. ಟ್ವಿಟರ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅಪ್ಲಿಕೇಶನ್‌ನಲ್ಲಿ ಮಾಹಿತಿ ಪೋಸ್ಟ್‌ ಮಾಡಲಾಗುತ್ತಿತ್ತು. ಇದು ತನಿಖೆಯ ಭಾಗವಾಗಿದೆ.

ವಿಜ್ಞಾನ ಪದವೀಧರನಾದ 21 ವರ್ಷದ ರಾವತ್‌ ತನ್ನ ಮೊಬೈಲ್‌ ಮೂಲಕ ಹಂಚಿಕೆ ಮಾಡುತ್ತಿದ್ದ ಪೋಸ್ಟ್‌ಗಳ ಮೇಲೆ ಸೈಬರ್‌ ಪೊಲೀಸರು ನಿಗಾ ಇಟ್ಟಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಉಗ್ರವಾದಿ ಶಕ್ತಿಗಳೊಂದಿಗೆ ಆತನ ಸಂಭಾವ್ಯ ಸಂಪರ್ಕವನ್ನು ಪರಿಶೀಲಿಸಲು ಪೊಲೀಸರು ಬಯಸಿದ್ದರು.

21 ವರ್ಷದ ವಿಶಾಲ್‌ ಕುಮಾರ್‌ ಎಂಬಾತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದರು. ಈತನಿಂದ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಿದ್ದರು. ಜನವರಿ 4ರಿಂದ ಆರೋಪಿಯು ಪೊಲೀಸ್‌ ಬಂಧನದಲ್ಲಿದ್ದಾರೆ.