Sexual Harassment
Sexual Harassment  
ಸುದ್ದಿಗಳು

ಮಹಿಳೆಯನ್ನು ʼಐಟಂʼ ಎನ್ನುವುದು ಆಕೆಯ ಘನತೆಗೆ ಧಕ್ಕೆ: ಆರೋಪಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

Bar & Bench

ಅಪ್ರಾಪ್ತ ಬಾಲಕಿಯನ್ನು ‘ಐಟಂʼಎಂದು ಕರೆದು ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನನ್ನು ಮುಂಬೈನ ನ್ಯಾಯಾಲಯವೊಂದು ಇತ್ತೀಚೆಗೆ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ [ಸರ್ಕಾರ ಮತ್ತು ಅಬ್ರಾರ್ ನೂರ್ ಮೊಹಮ್ಮದ್ ಖಾನ್ ನಡುವಣ ಪ್ರಕರಣ].

ಈ ಪದ ಮಹಿಳೆಯರನ್ನು ಲೈಂಗಿಕ ಭೋಗವಸ್ತುವಾಗಿ ಚಿತ್ರಿಸುತ್ತದೆ ಮತ್ತು ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ಘನತೆಗೆ ಧಕ್ಕೆ ತಂದ ಅಪರಾಧಕ್ಕೆ ಕಾರಣವಾಗುತ್ತದೆ ಎಂದು ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್‌ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್‌ ಜೆ ಅನ್ಸಾರಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಉದ್ಯಮಿಯನ್ನು ಐಪಿಸಿ ಸೆಕ್ಷನ್ 354 ಮತ್ತು ಪೋಕ್ಸೊ ಕಾಯಿದೆಯಡಿ ಅಪರಾಧಿ ಎಂದು ಘೋಷಿಸಿದ ನ್ಯಾಯಾಧೀಶರು ಆತನಿಗೆ 1.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.  ಮಹಿಳೆಯರನ್ನು ರಕ್ಷಿಸುವುದಕ್ಕಾಗಿ ಇಂತಹ ಅಪರಾಧ ಮತ್ತು ಅಸಂಬದ್ಧ ನಡೆಯನ್ನು ಕಠಿಣ ರೀತಿಯಲ್ಲಿ ಎದುರಿಬೇಕಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

ಆರೋಪಿ  ಐಟಂ ಎಂಬ ಪದ ಬಳಸಿ ಆಕೆಯನ್ನು ಸಂಬೋಧಿಸಿದ್ದು ಇದು ಹುಡುಗಿಯರನ್ನು ಅವಹೇಳನಕಾರಿ ಶೈಲಿಯಲ್ಲಿ ಕರೆಯಲು ಸಾಮಾನ್ಯವಾಗಿ ಬಳಸುವ ಪದವಾಗಿದೆ. ಏಕೆಂದರೆ ಇದು ಅವರನ್ನು ಲೈಂಗಿಕ ಭೋಗವಸ್ತುವಾಗಿ ಚಿತ್ರಿಸುತ್ತದೆ. ಪ್ರಕರಣದಲ್ಲಿ ಆರೋಪಿಯ ಉದ್ದೇಶವು ಸಂತ್ರಸ್ತೆಯ ಘನತೆಗೆ ಧಕ್ಕೆ ತರುವಂತಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಇಂತಹ ವರ್ತನೆಯನ್ನು ಕಠಿಣ ಕ್ರಮದೊಂದಿಗೆ ಎದುರಿಸಬೇಕಿದ್ದು ಇಂತಹವರ ನಡವಳಿಕೆಯಿಂದ ಮಹಿಳೆಯರನ್ನು ರಕ್ಷಿಸುವುದಕ್ಕಾಗಿ ಈ ರೀತಿಯ ರೋಡ್‌ ರೋಮಿಯೋಗಳಿಗೆ ಪಾಠ ಕಲಿಸಬೇಕಿದೆ” ಎಂದು ನ್ಯಾಯಾಧೀಶರು ತಮ್ಮ 28 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.