Cows 
ಸುದ್ದಿಗಳು

ಹಸುಗಳಿಲ್ಲದ ಜಗತ್ತನ್ನು ಊಹಿಸಲೂ ಅಸಾಧ್ಯ, ಗೋಹತ್ಯೆ ತಡೆದರೆ ಸಕಲ ಸಮಸ್ಯೆಗಳ ಪರಿಹಾರ: ಗುಜರಾತ್ ನ್ಯಾಯಾಲಯ

ಅಕ್ರಮವಾಗಿ ಜಾನುವಾರು ಸಾಗಿಸಿದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸುವ ವೇಳೆ ನ್ಯಾಯಾಧೀಶ ಸಮೀರ್ ವ್ಯಾಸ್ ಅವರು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸದ ಹೊರತು, "ಸಾತ್ವಿಕ ಹವಾಮಾನ ವೈಪರೀತ್ಯ ಪರಿಣಾಮಕಾರಿಯಾಗದು" ಎಂದರು.

Bar & Bench

ಮಹಾರಾಷ್ಟ್ರದಿಂದ ಗುಜರಾತ್‌ಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಯುವಕನೊಬ್ಬನಿಗೆ ಗುಜರಾತ್‌ನ ತಾಪಿಯ ನ್ಯಾಯಾಲಯ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಗೋಹತ್ಯೆ ತಡೆದರೆ ಭೂಮಿಯ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂದಿದೆ.

ನವೆಂಬರ್‌ನಲ್ಲಿ ನೀಡಿದ ಆದೇಶದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಸಮೀರ್‌ ವಿನೋದ್‌ಚಂದ್ರ ವ್ಯಾಸ್‌ ಅವರು ಗೋವಿನ ಪ್ರಾಮುಖ್ಯತೆಯನ್ನು ದಾಖಲಿಸಿದ್ದಾರೆ.

 "ಗೋವು ಕೇವಲ ಪ್ರಾಣಿಯಲ್ಲ ಅದು ತಾಯಿ, ಅದಕ್ಕಾಗಿಯೇ ಅದಕ್ಕೆ ತಾಯಿ ಎಂದು ಹೆಸರಿಸಲಾಗಿದೆ. ಗೋವಿನಷ್ಟು ಆಭಾರಿ ಯಾರೂ ಇಲ್ಲ. ಗೋವು 68 ಕೋಟಿ ಪವಿತ್ರ ಸ್ಥಳಗಳು ಮತ್ತು 33 ಕೋಟಿ ದೇವರುಗಳ ಆವಾಸಸ್ಥಾನವಾಗಿರುವ ಜೀವಂತ ಗ್ರಹವಾಗಿದೆ.  ವಿಶ್ವದಲ್ಲಿ ಗೋವು ನೀಡುವ ನೆರವು ವರ್ಣಿಸಲಸದಳ. ಹಸುವಿನ ರಕ್ತ ಭೂಮಿಗೆ ತಾಗದ ದಿನ ಭೂಮಿಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಭೂಮಿಯಲ್ಲಿ ಸುಖಶಾಂತಿ ನೆಲಸುತ್ತದೆ:” ಎಂದು ಆದೇಶದಲ್ಲಿ ಹೇಳಿದ್ದಾರೆ.

ಅಕ್ರಮವಾಗಿ ಜಾನುವಾರು ಸಾಗಿಸಿದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸುವ ವೇಳೆ ನ್ಯಾಯಾಧೀಶರು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸದ ​​ಹೊರತು, "ಸಾತ್ವಿಕ ಹವಾಮಾನ ವೈಪರೀತ್ಯ ಪರಿಣಾಮಕಾರಿಯಾಗದು" ಎಂದರು.

ಸರಿಯಾಗಿ ತಿನ್ನಲು ಕುಡಿಯಲಯ ವ್ಯವಸ್ಥೆ ಮಾಡದೆ ಟ್ರಕ್‌ನಲ್ಲಿ 16 ಕ್ಕೂ ಹೆಚ್ಚು ಹಸು- ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ಮೊಹಮ್ಮದ್ ಅಮೀನ್ ಎಂಬಾತನಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದರು.