Tyres

 
ಸುದ್ದಿಗಳು

ಹತೋಟಿಕೂಟ: ಐದು ಟಯರ್ ಕಂಪೆನಿಗಳಿಗೆ ಸ್ಪರ್ಧಾ ಆಯೋಗದಿಂದ ರೂ.1,788 ಕೋಟಿ ದಂಡ

ಐದು ಟಯರ್‌ ತಯಾರಿಕಾ ಉತ್ಪಾದಕ ಸಂಸ್ಥೆಗಳು ಹಾಗೂ ಒಕ್ಕೂಟವು 'ಕ್ರಾಸ್‌ ಪ್ಲೈ' ವಿಧದ ಟಯರ್‌ಗಳ ಉತ್ಪಾದನೆಯನ್ನು ಮಿತಗೊಳಿಸುವ ಹಾಗೂ ನಿಯಂತ್ರಣಕ್ಕೊಳಪಡಿಸುವ ಮೂಲಕ ಮಾರುಕಟ್ಟೆಯಲ್ಲಿ ದರವನ್ನು ಹೆಚ್ಚಿಸಿದ್ದ ಪ್ರಕರಣ ಇದಾಗಿದೆ.

Bar & Bench

ಹತೋಟಿಕೂಟದ (ಕಾರ್ಟಲೈಸೇಷನ್‌) ಮೂಲಕ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಮುಂದಾದ ಐದು ಟಯರ್ ಕಂಪೆನಿಗಳಿಗೆ ಹಾಗೂ ಆಟೊಮೊಟಿವ್ ಟಯರ್‌ ಉತ್ಪಾದಕರ ಒಕ್ಕೂಟಕ್ಕೆ (ಎಟಿಎಂಎ) ರೂ.1,788 ಕೋಟಿ ದಂಡವನ್ನು ಭಾರತೀಯ ಸ್ಪರ್ಧಾ ಆಯೋಗ ವಿಧಿಸಿದೆ.

ಐದು ಟಯರ್‌ ತಯಾರಿಕಾ ಉತ್ಪಾದಕ ಸಂಸ್ಥೆಗಳು ಹಾಗೂ ಒಕ್ಕೂಟವು 'ಕ್ರಾಸ್‌ ಪ್ಲೈ' ವಿಧದ ಟಯರ್‌ಗಳ ಉತ್ಪಾದನೆಯನ್ನು ಮಿತಗೊಳಿಸುವ ಹಾಗೂ ನಿಯಂತ್ರಣಕ್ಕೊಳಪಡಿಸುವ ಮೂಲಕ ಮಾರುಕಟ್ಟೆಯಲ್ಲಿ ದರವನ್ನು ಹೆಚ್ಚಿಸಿದ್ದ ಪ್ರಕರಣ ಇದಾಗಿದೆ. ಇದು ಸ್ಪರ್ಧಾ ಕಾಯಿದೆ 2002ರ ನಿಯಮಗಳಿಗೆ ವಿರುದ್ಧವಾಗಿದೆ.

ದಂಡ ವಿಧಿಸಲ್ಪಟ್ಟ ಕಂಪೆನಿಗಳ ವಿವರ ಹೀಗಿದೆ:

ಅಪೊಲೊ ಟಯರ್ಸ್‌ - ರೂ. 422.53 ಕೋಟಿ

ಎಂಆರ್‌ಎಫ್‌ ಲಿಮಿಟೆಡ್‌ - ರೂ. 622.09 ಕೋಟಿ

ಸಿಯೆಟ್‌ ಲಿಮಿಟೆಡ್‌ - ರೂ. 252.16 ಕೋಟಿ

ಜೆಕೆ ಟಯರ್‌ - ರೂ. 309.95 ಕೋಟಿ

ಬಿರ್ಲಾ ಟಯರ್ಸ್ - ರೂ. 178.33 ಕೋಟಿ

ಇದಲ್ಲದೆ ಒಕ್ಕೂಟಕ್ಕೂ ಸಹ ರೂ. 8.4 ಲಕ್ಷ ದಂಡವನ್ನು ವಿಧಿಸಲಾಗಿದೆ.

ಹೆಚ್ಚಿನ ವಿವರಗಳಿಗೆ 'ಬಾರ್‌ ಅಂಡ್‌ ಬೆಂಚ್' ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ