ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ ನರೇಂದರ್ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವುದೂ ಸೇರಿದಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದ್ದ 16 ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಕಾನೂನು ಇಲಾಖೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಈ ಕುರಿತ ಮಾಹಿತಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನ್ಯಾ. ಎಸ್ ಪಿ ಕೇಸರ್ವಾನಿ – ಅಲಾಹಾಬಾದ್‌ನಿಂದ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆ.
ನ್ಯಾ. ರಾಜ್ ಮೋಹನ್ ಸಿಂಗ್ - ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ಮಧ್ಯಪ್ರದೇಶ ಹೈಕೋರ್ಟ್‌ಗೆ.
ನ್ಯಾ. ಜಿ ನರೇಂದರ್ - ಕರ್ನಾಟಕ ಹೈಕೋರ್ಟ್‌ನಿಂದ ಆಂಧ್ರ ಪ್ರದೇಶ ಹೈಕೋರ್ಟ್‌ಗೆ.
ನ್ಯಾ. ಸುಧೀರ್ ಸಿಂಗ್ - ಪಟ್ನಾ ಹೈಕೋರ್ಟ್‌ನಿಂದ ಪಂಜಾಬ್ & ಹರಿಯಾಣ ಹೈಕೋರ್ಟ್‌ಗೆ.
ನ್ಯಾ. ಎಂ ವಿ ಮುರಳೀಧರನ್ - ಮಣಿಪುರ ಹೈಕೋರ್ಟ್‌ನಿಂದ ಕಲ್ಕತ್ತಾ ಹೈಕೋರ್ಟ್‌ಗೆ.
ನ್ಯಾ. ಮಧುರೇಶ್ ಪ್ರಸಾದ್ - ಪಟ್ನಾ ಹೈಕೋರ್ಟ್‌ನಿಂದ ಕಲ್ಕತಾ ಹೈಕೋರ್ಟ್‌ಗೆ.
ನ್ಯಾ. ಅರವಿಂದ್ ಸಿಂಗ್ ಸಾಂಗ್ವಾನ್ - ಪಂಜಾಬ್ & ಹರಿಯಾಣ ಹೈಕೋರ್ಟ್‌ನಿಂದ ಅಲಾಹಾಬಾದ್ ಹೈಕೋರ್ಟ್‌ಗೆ.
ನ್ಯಾ. ಅವನೀಶ್ ಝಿಂಗನ್ - ಪಂಜಾಬ್ & ಹರಿಯಾಣ ಹೈಕೋರ್ಟ್‌ನಿಂದ ರಾಜಸ್ಥಾನ ಹೈಕೋರ್ಟ್‌ಗೆ.
ನ್ಯಾ. ಅರುಣ್ ಮೊಂಗಾ – ಪಂಜಾಬ್ & ಹರಿಯಾಣ ಹೈಕೋರ್ಟ್‌ನಿಂದ ರಾಜಸ್ಥಾನ ಹೈಕೋರ್ಟ್‌ಗೆ.
ನ್ಯಾ. ರಾಜೇಂದ್ರ ಕುಮಾರ್-IV – ಅಲಾಹಾಬಾದ್ ಹೈಕೋರ್ಟ್‌ನಿಂದ ಮಧ್ಯಪ್ರದೇಶ ಹೈಕೋರ್ಟ್‌ಗೆ.
ನ್ಯಾ. ನಾಣಿ ತಗಿಯಾ – ಗುವಾಹಟಿ ಹೈಕೋರ್ಟ್‌ನಿಂದ ಪಟ್ನಾ ಹೈಕೋರ್ಟ್.
ನ್ಯಾ. ಸಿ ಮಾನವೇಂದ್ರನಾಥ್ ರಾಯ್ - ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಗುಜರಾತ್ ಹೈಕೋರ್ಟ್‌ಗೆ.
ನ್ಯಾ. ಮುನ್ನೂರಿ ಲಕ್ಷ್ಮಣ್ - ತೆಲಂಗಾಣ ಹೈಕೋರ್ಟ್‌ನಿಂದ ರಾಜಸ್ಥಾನ ಹೈಕೋರ್ಟ್.
ನ್ಯಾ. ಜಿ ಅನುಪಮಾ ಚಕ್ರವರ್ತಿ – ತೆಲಂಗಾಣ ಹೈಕೋರ್ಟ್‌ನಿಂದ ಪಟ್ನಾ ಹೈಕೋರ್ಟ್.
ಹೆಚ್ಚುವರಿ ನ್ಯಾ. ಲಪಿತಾ ಬ್ಯಾನರ್ಜಿ – ಕಲ್ಕತ್ತಾ ಹೈಕೋರ್ಟ್‌ನಿಂದ ಪಂಜಾಬ್ & ಹರಿಯಾಣ ಹೈಕೋರ್ಟ್.
ಹೆಚ್ಚುವರಿ ನ್ಯಾ. ದುಪ್ಪಾಲ ವೆಂಕಟ ರಮಣ – ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಮಧ್ಯಪ್ರದೇಶ ಹೈಕೋರ್ಟ್.