ಅಧಿಕಾರಿ ವರ್ಗವು ನ್ಯಾಯಾಧಿಕರಣದ ನೇಮಕಾತಿಗಳನ್ನು ಲಘುವಾಗಿ ಪರಿಗಣಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದ ಬೆನ್ನಿಗೇ ಕೇಂದ್ರ ಸರ್ಕಾರವು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧಿಕರಣಗಳಿಗೆ (ಡಿಆರ್‌ಎಟಿ) ಮುಖ್ಯಸ್ಥರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಹಣಕಾಸು ಸೇವೆಗಳ ಇಲಾಖೆಯ ಪ್ರಸ್ತಾವಕ್ಕೆ ಸಂಪುಟದ ನೇಮಕಾತಿ ಸಮಿತಿಯು ಒಪ್ಪಿಗೆ ಸೂಚಿಸಿದೆ. ಡಿಆರ್‌ಎಟಿಗಳಿಗೆ ಮುಖ್ಯಸ್ಥರ ನೇಮಕಾತಿ ಇಂತಿದೆ.
ಡಿಆರ್‌ಎಟಿ ಅಲಾಹಾಬಾದ್: ನ್ಯಾಯಮೂರ್ತಿ ರಾಜೇಶ್ ದಯಾಳ್ ಖರೆ, ಅಲಾಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ.
ಡಿಆರ್‌ಎಟಿ ಚೆನ್ನೈ: ನ್ಯಾಯಮೂರ್ತಿ ಎಸ್ ರವಿ ಕುಮಾರ್, ಆಂಧ್ರಪ್ರದೇಶ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಡಿಆರ್‌ಎಟಿ ಮುಂಬೈ ಮಾಜಿ ಮುಖ್ಯಸ್ಥ.
ಡಿಆರ್‌ಎಟಿ ಮುಂಬೈ: ನ್ಯಾಯಮೂರ್ತಿ ಅಶೋಕ್ ಮೆನನ್, ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ.
ಡಿಆರ್‌ಎಟಿ ದೆಹಲಿ: ನ್ಯಾಯಮೂರ್ತಿ ಬ್ರಿಜೇಶ್ ಸೇಥಿ, ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ.
ಡಿಆರ್‌ಎಟಿ ಕೋಲ್ಕತ್ತಾ: ನ್ಯಾಯಮೂರ್ತಿ ಅನಿಲ್ ಕುಮಾರ್ ಶ್ರೀವಾಸ್ತವ, ಅಲಾಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ.
ನಾಲ್ಕು ವರ್ಷಗಳಿಗೆ ನೇಮಕಾತಿ ಮಾಡಲಾಗಿದ್ದು, ಮುಖ್ಯಸ್ಥರು ಈ ಅವಧಿಯಲ್ಲಿ ಎಪ್ಪತ್ತು ವರ್ಷ ವಯೋಮಿತಿಯವರೆಗೆ ಸೇವೆಯಲ್ಲಿ ಮುಂದುವರಿಯಲಿದ್ದಾರೆ. ಮುಖ್ಯಸ್ಥರು ಪ್ರತಿ ತಿಂಗಳು ₹2.5 ಲಕ್ಷ ಸಂಭಾವನೆಗೆ ಅರ್ಹರಾಗಿರುತ್ತಾರೆ.