Attorney General R Venkataramani  
ಸುದ್ದಿಗಳು

ಅಡ್ವೊಕೇಟ್‌ ಜನರಲ್‌ ವೆಂಕಟರಮಣಿ ಅವರ ಅಧಿಕಾರಾವಧಿಯನ್ನು ಎರಡು ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ

ವೆಂಕಟರಮಣಿ ಅವರು 2022ರಲ್ಲಿ ಅಂದಿನ ಎಜಿಯಾಗಿದ್ದ ಕೆಕೆ ವೇಣುಗೋಪಾಲ್ ಅವರಿಂದ ತೆರವಾದ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು.

Bar & Bench

ಅಟಾರ್ನಿ ಜನರಲ್‌ (ಎಜಿ) ಆರ್‌ ವೆಂಕಟರಮಣಿ ಅವರ ಅಧಿಕಾರಾವಧಿಯನ್ನು ಮುಂದಿನ ಎರಡು ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವೆಂಕಟರಮಣಿ ಅವರು 2022 ರಲ್ಲಿ ಎಜಿ ಕೆಕೆ ವೇಣುಗೋಪಾಲ್ ಅವರಿಂದ ತೆರವಾದ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು.

ವೆಂಕಟರಮಣಿ ಅವರ ಮೂರು ವರ್ಷಗಳ ಅಧಿಕಾರಾವಧಿ ಸೆಪ್ಟೆಂಬರ್ 30 ರಂದು ಕೊನೆಗೊಳ್ಳಬೇಕಿತ್ತು. ಇದೀಗ ಅವರ ಅಧಿಕಾರಾವಧಿಯನ್ನು ಮುಂದಿನ ಎರಡು ವರ್ಷಗಳ ಕಾಲ ವಿಸ್ತರಿಸಲಾಗಿದೆ. ಈ ಕುರಿತು ವೆಂಕಟರಮಣಿ ಅವರು ಬಾರ್ & ಬೆಂಚ್‌ಗೆ ದೃಢಪಡಿಸಿದರು.

ವೆಂಕಟರಮಣಿ ಅವರು ಏಪ್ರಿಲ್ 13, 1950 ರಂದು ಪಾಂಡಿಚೆರಿಯಲ್ಲಿ ಜನಿಸಿದರು. ಜುಲೈ 1977 ರಲ್ಲಿ ತಮಿಳುನಾಡಿನ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೊಂದಾಯಿಸಿಕೊಂಡರು.

ವೆಂಕಟರಮಣಿ ಅವರು1979ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವೃತ್ತಿನಿರತರಾದರು. 1997ರಲ್ಲಿ ಅವರನ್ನು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರನ್ನಾಗಿ ಪದಾಂಕಿತಗೊಂಡರು.

ವೆಂಕಟರಮಣಿ ಅವರು 2010 ಮತ್ತು 2013ರಲ್ಲಿ ಭಾರತದ ಕಾನೂನು ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಪ್ರತಿನಿಧಿಸಿದ್ದಾರೆ.

ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ವಿಧಿ 76(1)ರ ಅಡಿಯಲ್ಲಿ ಎಜಿಯನ್ನು ನೇಮಿಸುತ್ತಾರೆ.