ಉತ್ತರಾಖಂಡ ರಾಜ್ಯದ ಚಾರ್‌ಧಾಮ್ ಹೆದ್ದಾರಿ ಯೋಜನೆಯ ಸಮಗ್ರ ಹಾಗೂ ಸ್ವತಂತ್ರ ಪರಿಣಾಮವನ್ನು ಪರಿಶೀಲಿಸುವ ದೃಷ್ಟಿಯಿಂದ ನಿಯಮಿಸಲಾಗಿರುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನೇಮಿಸಿದೆ (ಸಿಟಿಜನ್ಸ್ ಆಫ್ ಗ್ರೀನ್ ಡೂನ್ ವರ್ಸಸ್ ಭಾರತ ಸರ್ಕಾರ).
ಈ ಮುಂಚೆ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ರವಿ ಚೋಪ್ರಾ ಅವರ ರಾಜೀನಾಮೆಯನ್ನು ನ್ಯಾ. ಡಿ ವೈ ಚಂದ್ರಚೂಡ್ ಹಾಗೂ ನ್ಯಾ. ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಒಪ್ಪಿಕೊಂಡಿದೆ. ನ್ಯಾ. ಸಿಕ್ರಿ ಅವರು ಇದಾಗಲೇ ಯೋಜನೆಯ ಪರಿಸರ ಪರಿಣಾಮಗಳನ್ನು ಪರಿಶೀಲಿಸುವ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದು ಅವರು ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಬಹುದಾಗಿದೆ ಎಂದು ಎಜಿ ಕೆ ಕೆ ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಬಾರ್ ಅಂಡ್ ಬೆಂಚ್ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.