CJI DY Chandrachud 
ಸುದ್ದಿಗಳು

ಸಂವಿಧಾನ ಮೂಲ ರಚನೆ ಸಿದ್ಧಾಂತದ ಬಗ್ಗೆ ಮಾತನಾಡಲು ನಿರಾಕರಿಸಿದ ಸಿಜೆಐ; ತೀರ್ಪಿನ ಮೂಲಕ ಮಾತನಾಡುವ ಇಂಗಿತ

ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯುವ ಹಂತದಲ್ಲಿರುವ ಹೈಕೋರ್ಟ್‌ ನ್ಯಾಯಮೂರ್ತಿಗಳು ಬರೆದಿರುವ ತೀರ್ಪುಗಳ ಮೌಲ್ಯಮಾಪನ ಮಾಡಲು ಕೊಲಿಜಿಯಂಗೆ ನೆರವಾಗಲು ಸಂಶೋಧನೆ ಮತ್ತು ಯೋಜನಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದ ಸಿಜೆಐ.

Bar & Bench

ಸಂವಿಧಾನದ ಮೂಲ ರಚನೆ ಸಿದ್ಧಾಂತದ ಬಗ್ಗೆ ಮಾತನಾಡುವುದರಿಂದ ಹಿಂದೆ ಸರಿದಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಸಾರ್ವಜನಿಕ ವೇದಿಕೆಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಬದಲಾಗಿ ತನ್ನ ತೀರ್ಪಿನ ಮೂಲಕ ಮಾತನಾಡುವೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಖ್ಯಾತ ನ್ಯಾಯವಾದಿ ರಾಮ್‌ ಜೇಠ್ಮಲಾನಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಜೆಐ ಚಂದ್ರಚೂಡ್‌ ಅವರು ʼಮೂಲ ರಚನೆ ಸಿದ್ಧಾಂತವು ದೇಶಕ್ಕೆ ಅನುಕೂಲಕಾರಿಯೇʼ ಎಂಬ ವಿಷಯದ ಕುರಿತು ಪ್ರಧಾನ ಭಾಷಣ ಮಾಡಿದರು.

“ಮೂಲರಚನೆ ಸಿದ್ಧಾಂತದ ಬಗ್ಗೆ ನಾನು ನನ್ನ ತೀರ್ಪಿನ ಮೂಲಕ ಮಾತುನಾಡುತ್ತೇನೆ. ಇಲ್ಲಲ್ಲ” ಎಂದು ಸಿಜೆಐ ಹೇಳಿದರು.

ಹರಿಯಾಣ ನ್ಯಾಯಾಂಗ ಸೇವೆ ಅಧಿಕಾರಿಯ ನೇತೃತ್ವದಲ್ಲಿ ಕೊಲಿಜಿಯಂಗೆ ಸಹಕಾರಿಯಾಗಲು ಸಂಶೋಧನೆ ಮತ್ತು ಯೋಜನಾ ಕೇಂದ್ರ ತೆರೆಯಲಾಗಿದೆ. ಇದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯುವ ಹಂತದಲ್ಲಿರುವ ಹೈಕೋರ್ಟ್‌ ನ್ಯಾಯಮೂರ್ತಿಗಳು ಹೊರಡಿಸಿರುವ ತೀರ್ಪುಗಳ ಮೌಲ್ಯಮಾಪನ ನಡೆಸಲಿದೆ ಎಂದು ಅವರು ಮಾಹಿತಿ ನೀಡಿದರು.