ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಸರ್ಕಾರ (ವ್ಯಾಪಾರ ವಹಿವಾಟು – ಟ್ರಾನ್ಸಾಕ್ಷನ್ ಆಫ್ ಬ್ಯುಸಿನೆಸ್) ನಿಯಮಗಳು 1977ರ ನಿಯಮ 5ರ ಅಡಿ ಕೆಳಕಂಡಂತೆ ಖಾತೆಗಳ ಹಂಚಿಕೆಯನ್ನು ಸಚಿವರಿಗೆ ಮಾಡಿದ್ದು, ಈ ಕುರಿತಾಗಿ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು, ಸಂಪುಟ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಂಚಿಕೆಯಾಗದ ಖಾತೆಗಳ ಹೊಣೆಯನ್ನು ಹೊತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬೃಹತ್ ಮತ್ತು ಮಧ್ಯಮ ನೀರಾವರಿ, ಬಿಬಿಎಂಪಿ, ಬಿಡಿಎ, ಬಿಡಬ್ಲುಎಸ್‌ಎಸ್‌ಬಿ, ಬಿಎಂಆರ್‌ಡಿಎ, ಬಿಎಂಆರ್‌ಸಿಎಲ್ ಒಳಗೊಂಡಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆ ಹೊತ್ತಿದ್ದಾರೆ.
ಡಾ. ಜಿ ಪರಮೇಶ್ವರ ಅವರು ಗೃಹ (ಗುಪ್ತಚರ ಹೊರತುಪಡಿಸಿ) ಖಾತೆಯನ್ನು ನಿಭಾಯಿಸಲಿದ್ದಾರೆ. ಎಚ್ ಕೆ ಪಾಟೀಲ್ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ, ಪ್ರವಾಸೋದ್ಯಮ ಖಾತೆಗಳನ್ನು ನೀಡಲಾಗಿದೆ.
ವಿವಿಧ ಸಚಿವರುಗಳಿಗೆ ಹಂಚಿಕೆ ಮಾಡಲಾಗಿರುವ ಖಾತೆಗಳ ವಿವರ ಈ ರೀತಿ ಇದೆ:
ಕೆ ಎಚ್ ಮುನಿಯಪ್ಪ: ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಖಾತೆ
ರಾಮಲಿಂಗಾ ರೆಡ್ಡಿ: ಸಾರಿಗೆ ಮತ್ತು ಮುಜರಾಯಿ
ಎಂ ಬಿ ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಕೆ ಜೆ ಜಾರ್ಜ್: ಇಂಧನ
ದಿನೇಶ್ ಗುಂಡೂರಾವ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಡಾ. ಎಚ್ ಸಿ ಮಹದೇವಪ್ಪ: ಸಮಾಜ ಕಲ್ಯಾಣ,
ಸತೀಶ್ ಜಾರಕಿಹೊಳಿ: ಲೋಕೋಪಯೋಗಿ
ಕೃಷ್ಣ ಭೈರೇಗೌಡ: ಕಂದಾಯ
ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್
ಶಿವಾನಂದ ಪಾಟೀಲ್: ಜವಳಿ, ಸಕ್ಕರೆ ಅಭಿವೃದ್ಧಿ ಮತ್ತು ಸಹಕಾರ ಇಲಾಖೆಯಿಂದ ಸಕ್ಕರೆ ಕೃಷಿ ಮಾರುಕಟ್ಟೆ ನಿರ್ದೇಶನಾಲಯ
ಬಿ ಝಡ್ ಜಮೀರ್ ಅಹಮದ್ ಖಾನ್: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ
ಶರಣಬಸಪ್ಪ ದರ್ಶನಾಪುರ: ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆ
ಈಶ್ವರ್ ಖಂಡ್ರೆ: ಅರಣ್ಯ, ಪರಿಸರ ವಿಜ್ಞಾನ
ಎನ್ ಚೆಲುವರಾಯಸ್ವಾಮಿ: ಕೃಷಿ
ಎಸ್ ಎಸ್ ಮಲ್ಲಿಕಾರ್ಜುನ: ಗಣಿ ಮತ್ತು ಭೂವಿಜ್ಞಾನ ತೋಟಗಾರಿಕೆ
ರಹೀಂ ಖಾನ್: ಪೌರಾಡಳಿತ, ಹಜ್
ಸಂತೋಷ್ ಎಸ್. ಲಾಡ್: ಕಾರ್ಮಿಕ ಸಚಿವಾಲಯ
ಡಾ. ಶರಣಪ್ರಕಾಶ್ ಪಾಟೀಲ್: ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ
ಆರ್ ಬಿ ತಿಮ್ಮಾಪುರ: ಅಬಕಾರಿ
ಕೆ ವೆಂಕಟೇಶ್: ಪಶು ಸಂಗೋಪನೆ ಮತ್ತು ರೇಷ್ಮೆ
ಶಿವರಾಜ್ ತಂಗಡಗಿ: ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
ಡಿ ಸುಧಾಕರ್: ಯೋಜನೆ ಮತ್ತು ಸಾಂಖ್ಯಿಕ
ಬಿ ನಾಗೇಂದ್ರ: ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
ಕೆ ಎನ್ ರಾಜಣ್ಣ: ಸಹಕಾರ
ಬಿ ಎಸ್ ಸುರೇಶ್: ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಮಂಕಾಳ್ ವೈದ್ಯ: ಮೀನುಗಾರಿಕೆ, ಬಂಧರು, ಒಳಸಾರಿಗೆ
ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಡಾ. ಎಂ ಸಿ ಸುಧಾಕರ್: ಉನ್ನತ ಶಿಕ್ಷಣ
ಎನ್ ಎಸ್ ಬೋಸರಾಜು ಅವರಿಗೆ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ