ಸುದ್ದಿಗಳು

ಐಜಿಎಸ್‌ಟಿ ಕಾಯಿದೆಯ ಸೆಕ್ಷನ್ 13 (8) (ಬಿ)ಗೆ ಮಾನ್ಯತೆ: ಭಿನ್ನ ನಿಲುವು ಪ್ರಕಟಿಸಿದ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ

Bar & Bench

ಸಮಗ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆಯ (ಐಜಿಎಸ್‌ಟಿ) ಸೆಕ್ಷನ್ 13 (8) (ಬಿ)ಯ ಸಾಂವಿಧಾನಿಕತೆ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠ ಭಿನ್ನ ತೀರ್ಪು ಪ್ರಕಟಿಸಿತು. (ಧರ್ಮೇಂದ್ರ ಎಂ ಜೈನ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ)

ಸೆಕ್ಷನ್‌ ಅಸಂವಿಧಾನಿಕ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತಿರಸ್ಕರಿಸಿದರೆ, ನ್ಯಾ.ಅಭಯ್ ಅಹುಜಾ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಕಾರಣವನ್ನು ಅವರು ಇನ್ನೂ ನೀಡಿಲ್ಲ. ಜೂನ್ 16 ರಂದು ಈ ಬಗ್ಗೆ ಅವರು ತಿಳಿಸಲಿದ್ದಾರೆ.

ಸೆಕ್ಷನ್ 13 (8) (ಬಿ) ಅಸಾಂವಿಧಾನಿಕವಾಗಿರುವುದಲ್ಲದೆ ಐಜಿಎಸ್‌ಟಿ ಕಾಯಿದೆಯ ಅಧಿಕಾರ ವ್ಯಾಪ್ತಿಯನ್ನು ಮೀರುತ್ತದೆ. ಸೆಕ್ಷನ್ 13 (8) (ಬಿ) ಯಿಂದ ನೀಡಲಾಗಿರುವ ಪ್ರಾದೇಶಾತೀತ ಪರಿಣಾಮದ ಬಗೆಯು, ಜಿಎಸ್‌ಟಿ ವ್ಯವಸ್ಥೆಯಿಂದ ಪರಿಚಯವಾಗಿರುವ ದೇಶದ ತೆರಿಗೆ ವಿಧಿಸುವಿಕೆಯೊಂದಿಗೆ ನಿಜವಾದ ಸಂಪರ್ಕ ಅಥವಾ ಸಂಬಂಧ ಹೊಂದಿಲ್ಲ ಎಂದು ನ್ಯಾ. ಭುಯಾನ್‌ ಅಭಿಪ್ರಾಯಪಟ್ಟರು. ಇದು ಜಿಎಸ್‌ಟಿಯ ಮೂಲಭೂತ ತತ್ವಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ. ಅಂದರೆ ಮೂಲಾಧಾರಿತ ತೆರಿಗೆಯ ತತ್ವಕ್ಕೆ ವ್ಯತಿರಿಕ್ತವಾಗಿ ಇದು ಗಮ್ಯಸ್ಥಾನ ಆಧಾರಿತ ಬಳಕೆ ತೆರಿಗೆಯಾಗಿದೆ ಎಂದು ಅವರು ಹೇಳಿದರು.

ಭುಯಾನ್‌ ತಮ್ಮ ತೀರ್ಪು ಉಚ್ಚರಿಸಿದ ಬಳಿಕ ನ್ಯಾ. ಅಹುಜಾ ತಮ್ಮ ಭಿನ್ನ ನಿಲುವು ದಾಖಲಿಸಿದರು. ನ್ಯಾಯಮೂರ್ತಿ ಭುಯಾನ್‌ ಅವರ ನಿಲುವನ್ನು ಹಂಚಿಕೊಳ್ಳಲು ನನ್ನಿಂದ ಆಗದ ಕಾರಣ ನನ್ನ ಅಭಿಪ್ರಾಯವನ್ನು ಪ್ರತ್ಯೇಕವಾಗಿ ದಾಖಲಿಸುತ್ತೇನೆ ಎಂದು ಅವರು ತಿಳಿಸಿದರು. ಜೂನ್ 16 ರಂದು ಅವರು ತಮ್ಮ ನಿಲುವು ವ್ಯಕ್ತಪಡಿಸಲಿದ್ದಾರೆ.

ಭುಯಾನ್‌ ತಮ್ಮ ತೀರ್ಪು ಉಚ್ಚರಿಸಿದ ಬಳಿಕ ನ್ಯಾ. ಅಹುಜಾ ತಮ್ಮ ಭಿನ್ನ ನಿಲುವು ದಾಖಲಿಸಿದರು. ನ್ಯಾಯಮೂರ್ತಿ ಭುಯಾನ್‌ ಅವರ ನಿಲುವನ್ನು ಹಂಚಿಕೊಳ್ಳಲು ನನ್ನಿಂದ ಆಗದ ಕಾರಣ ನನ್ನ ಅಭಿಪ್ರಾಯವನ್ನು ಪ್ರತ್ಯೇಕವಾಗಿ ದಾಖಲಿಸುತ್ತೇನೆ ಎಂದು ಅವರು ತಿಳಿಸಿದರು. ಜೂನ್ 16 ರಂದು ಅವರು ತಮ್ಮ ನಿಲುವು ವ್ಯಕ್ತಪಡಿಸಲಿದ್ದಾರೆ.

ವಿದೇಶದ ಗ್ರಾಹಕರಿಗೆ ಮಾರುಕಟ್ಟೆ ಮತ್ತು ಪ್ರಚಾರ ಸೇವೆ ಒದಗಿಸುವ ಉದ್ಯಮ ನಡೆಸುತ್ತಿರುವ ಧರ್ಮೇಂದ್ರ ಎಂ ಜೈನ್‌ ಅವರು ಕಾಯಿದೆಯ ಈ ನಿಬಂಧನೆಯನ್ನು ಪ್ರಶ್ನಿಸಿದ್ದರು. ಸೇವೆಯನ್ನು ಭಾರತದ ಹೊರಗೆ ನೀಡಿದ್ದರೆ ಆ ಸೇವೆಗೆ ತೆರಿಗೆ ವಿಧಿಸುವ ಅಧಿಕಾರ ದೇಶದ ಶಾಸಕಾಂಗಕ್ಕೆ ಇಲ್ಲ. ಸೇವೆಯ ರಫ್ತಿಗೆ ತೆರಿಗೆ ವಿಧಿಸುವುದು ಸಂವಿಧಾನದ 269 ಎ ವಿಧಿಯ ಉಲ್ಲಂಘನೆಯಾಗುತ್ತದೆ ಇತ್ಯಾದಿ ಅಂಶಗಳನ್ನು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.