Alcohol
Alcohol 
ಸುದ್ದಿಗಳು

ಬೆಳಗಿನ ಜಾವದವರೆಗೆ ಬಾರ್: ಪೊಲೀಸರನ್ನು ಸಂಪರ್ಕಿಸುವಂತೆ ʼಆಪ್‌ʼ ಸರ್ಕಾರಕ್ಕೆ ಸೂಚಿಸಿದ ದೆಹಲಿ ಹೈಕೋರ್ಟ್

Bar & Bench

ಸಾರ್ವಜನಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಬಾರ್‌ಗಳನ್ನು ತೆರೆಯುವ ವಿಚಾರವಾಗಿ ದೆಹಲಿ ಪೊಲೀಸರ ಅಭಿಪ್ರಾಯ ಅಗತ್ಯ ಎಂದು ದೆಹಲಿ ಹೈಕೋರ್ಟ್‌ ದೆಹಲಿ ಸರ್ಕಾರಕ್ಕೆ ಇತ್ತೀಚೆಗೆ ಹೇಳಿದೆ [ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ ವರ್ಸಸ್ ಕಮಿಷನರ್ ಆಫ್ ಪೋಲೀಸ್ ಮತ್ತಿತರರ ನಡುವಣ ಪ್ರಕರಣ].

ಬಾರ್‌ಗಳಿಂದ ಸಾರ್ವಜನಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದರಿಂದ, ಈ ಕುರಿತು ಪರಾಮರ್ಶಿಸಲು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳ ಜಂಟಿ ಸಮಾಲೋಚನಾ ತಂಡ ರಚಿಸುವಂತೆ ನ್ಯಾ ಯಶವಂತ್‌ ವರ್ಮಾ ನಿರ್ದೇಶಿಸಿದರು.

ಮದ್ಯ ಮಾರಾಟದ ಸಮಯ ನಿಗದಿಪಡಿಸಲು ಅಬಕಾರಿ ಇಲಾಖೆ ಆಯುಕ್ತರಿಗೆ ಅಬಕಾರಿ ಕಾಯಿದೆ ಮತ್ತು 2010ರ ನಿಯಮಾವಳಿಗಳು ಅಧಿಕಾರ ನೀಡಿದರೂ ಹೋಟೆಲ್‌ಗಳು ಮತ್ತು ಸಾರ್ವಜನಿಕ ಮನರಂಜನಾ ಸ್ಥಳಗಳ ಕಾರ್ಯ ನಿರ್ವಹಿಸುವ ಅವಧಿ ನಿರ್ಧರಿಸಲು ದೆಹಲಿ ಪೊಲೀಸರಿಗೆ ಇರುವ ಅಧಿಕಾರದ ವ್ಯಾಪ್ತಿಯಲ್ಲಿ ಅರ್ಥೈಸಿಕೊಂಡು ವ್ಯಾಖ್ಯಾನಿಸಬೇಕು ಎಂದು ನ್ಯಾಯಾಲಯ ತಿಳಿಸಿತು.

ಅಂತೆಯೇ ಜಂಟಿ ಸಮಾಲೋಚನಾ ತಂಡ ಎರಡು ವಾರದೊಳಗೆ ವರದಿ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದ್ದು ಆಗಸ್ಟ್‌ 2ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.