A1
ಸುದ್ದಿಗಳು

[ಕೈದಿ ಬಿಡುಗಡೆ] ನ್ಯಾಯಾಲಯ ಆದೇಶ ʼಫಾಸ್ಟರ್ʼ ಇಲ್ಲವೇ ಭೌತಿಕವಾಗಿ ತಲುಪಬೇಕೆ ವಿನಾ ಫೋನ್ ಮೂಲಕ ಅಲ್ಲ: ಕಾಶ್ಮೀರ ಸರ್ಕಾರ

Bar & Bench

ನ್ಯಾಯಾಲಯ ಹೊರಡಿಸುವ ಕೈದಿಗಳ ಬಿಡುಗಡೆ ಆದೇಶವನ್ನು ಭೌತಿಕವಾಗಿ ಇಲ್ಲವೇ ಸುಪ್ರೀಂಕೋರ್ಟ್‌ ಬಿಡುಗಡೆ ಮಾಡಿರುವ ಸೆಕ್ಯೂರ್ಡ್ ಟ್ರಾನ್ಸ್‌ಮಿಷನ್ ಆಫ್ ಎಲೆಕ್ಟ್ರಾನಿಕ್ ರೆಕಾರ್ಡ್ಸ್ (ಫಾಸ್ಟರ್) ತಂತ್ರಾಂಶದ ಮೂಲಕವೇ ತಲುಪಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಇತ್ತೀಚೆಗೆ ನಿರ್ದೇಶಿಸಿದೆ.

ಟೆಲಿಫೋನ್ ಅಥವಾ ಬೇರಾವುದೇ ವೈರ್‌ಲೆಸ್ ಸಂದೇಶ ವ್ಯವಸ್ಥೆಯ ಮೂಲಕ ಸಂವಹನ ನಡೆಸಿದರೆ ಅದು ಸ್ವೀಕಾರಾರ್ಹವಲ್ಲ ಎಂದು ರಾಜ್ಯದ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ‌

ಜಮ್ಮು ಮತ್ತು ಕಾಶ್ಮೀರ ಮರು-ಸಂಘಟನೆ ಆದೇಶ, 2019ರ ಷರತ್ತು 14 ಸಹವಾಚನ ಕಾರಾಗೃಹಗಳಕಾಯಿದೆ-1894 ರಸೆಕ್ಷನ್ 59ರ ಮೂಲಕ ಅಧಿಕಾರ ಚಲಾಯಿಸಿ ಸರ್ಕಾರ ಆ ಕುರಿತು ಅಧಿಸೂಚನೆ ಹೊರಡಿಸಿದೆ