<div class="paragraphs"><p>Supreme Court</p></div>

Supreme Court

 
ಸುದ್ದಿಗಳು

ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳು ಆದೇಶ ನೀಡುವಂತಿಲ್ಲ: ಸುಪ್ರೀಂ ಕೋರ್ಟ್

Bar & Bench

ಯಾವುದೇ ನಾಗರಿಕ ವರ್ಗಕ್ಕೆ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯಗಳು ಆದೇಶ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಪುನರುಚ್ಚರಿಸಿದೆ [ಪಂಜಾಬ್‌ ಸರ್ಕಾರ ಮತ್ತು ಅಂಶಿಕಾ ಗೋಯೆಲ್‌ ನಡುವಣ ಪ್ರಕರಣ] .

ಮೀಸಲಾತಿಗೆ ಅನುಮತಿ ನೀಡುವ ಸಂವಿಧಾನದ 15 ಮತ್ತು 16 ನೇ ವಿಧಿಗಳು ಮೀಸಲಾತಿ ಒದಗಿಸುವುದು ರಾಜ್ಯದ ಅಧಿಕಾರ ಎಂದು ಈ ಹಿಂದಿನ ಹಲವು ತೀರ್ಪುಗಳಲ್ಲಿ ದೃಢಪಡಿಸಿವೆ ಎಂದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಇಂತಹ ನೀತಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವುದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿತು.

ಈ ಹಿನ್ನೆಲೆಯಲ್ಲಿ ಪಂಜಾಬ್‌ನ ಸರ್ಕಾರಿ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶೇ.3ರಷ್ಟು ಕ್ರೀಡಾ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

ತೀರ್ಪಿನ ವಿವರ:

- ಸಂವಿಧಾನದ 15 ಮತ್ತು 16 ನೇ ವಿಧಿಗಳು ರಾಜ್ಯಕ್ಕೆ ಮೀಸಲಾತಿ ಒದಗಿಸಲು ಅವಕಾಶ ನೀಡುತ್ತವೆ;

- ಮೀಸಲಾತಿ ಒದಗಿಸುವ ನೀತಿ ರೂಪಿಸುವುದು ರಾಜ್ಯಕ್ಕೆ ಬಿಟ್ಟ ವಿಚಾರ.

- ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳು ಆದೇಶಿಸುವಂತಿಲ್ಲ.

- ಪಂಜಾಬ್‌ನಸರ್ಕಾರಿವೈದ್ಯಕೀಯ/ದಂತವೈದ್ಯಕೀಯ ಕಾಲೇಜುಗಳಲ್ಲಿ ಶೇ.3ರಷ್ಟು ಕ್ರೀಡಾ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿದ್ದ ನಿರ್ದೇಶನ ತಪ್ಪು.