ಸುದ್ದಿಗಳು

ಭಾರತ-ಪಾಕ್‌ ಗಡಿ ಸಮೀಪದ ಅಮೃತಸರ ಮತ್ತು ಅಜ್ನಾಲಾ ನ್ಯಾಯಾಲಯಗಳನ್ನು ಐದು ದಿನ ಬಂದ್‌

ನ್ಯಾಯಾಲಯಗಳಲ್ಲಿ ಜನಸಂದಣಿ ನಿರ್ಬಂಧಿಸುವ ಉದ್ದೇಶದಿಂದ ನಿರ್ಧಾರ ಕೈಗೊಳ್ಳಲಾಗಿದೆ.

Bar & Bench

ಅಮೃತಸರದ ಜಿಲ್ಲಾ ನ್ಯಾಯಾಲಯ ಮತ್ತು ಗಡಿ ಪಟ್ಟಣವಾಗಿರುವ ಅಜ್ನಾಲಾದಲ್ಲಿರುವ ನ್ಯಾಯಾಲಯಕ್ಕೆ ಮೇ 9 ರಿಂದ 14ರವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ನ್ಯಾಯಾಧೀಶರು ಮತ್ತು ಸಿಬ್ಬಂದಿಯ ಹಾಜರಾತಿಯನ್ನೂ ಸೀಮಿತಗೊಳಿಸಲಾಗಿದೆ.

“ಅಮೃತಸರದ ಜಿಲ್ಲಾ ನ್ಯಾಯಾಲಯ ಮತ್ತು ಅಜ್ನಾಲಾದ ಉಪ ವಿಭಾಗೀಯ ನ್ಯಾಯಾಲಯವನ್ನು ತಾತ್ಕಾಲಿಕವಾಗಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದು, 09.05.2025 ರಿಂದ 14.05.2025ರವರೆಗೆ ಜನ ಸಂದಣಿಗೆ ನಿರ್ಬಂಧ ವಿಧಿಸಲಾಗಿದೆ” ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಹೇಳಿದೆ.

“ಈ ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಶೇ.100 ಹಾಜರಾತಿಯನ್ನು ಶೇ.50ಕ್ಕೆ ಮಿತಿಗೊಳಿಸಲಾಗಿದ್ದು, ಸಿಬ್ಬಂದಿಯು ಸರದಿಯ ಪ್ರಕಾರ ಕರ್ತವ್ಯಕ್ಕೆ ಹಾಜರಾಗಬೇಕು” ಎಂದು ಆದೇಶಿಸಿದೆ.