ಸುದ್ದಿಗಳು

ಕೋವಿಡ್ ಹಿನ್ನೆಲೆಯಲ್ಲಿ ಹಾಲುಣಿಸುವ ತಾಯಂದಿರಿಗೆ ವರ್ಷದವರೆಗೆ ವರ್ಕ್ ಫ್ರಂ ಹೋಮ್ ಸೌಲಭ್ಯ: ರಾಜ್ಯಗಳಿಗೆ ಕೇಂದ್ರ ಪತ್ರ

Bar & Bench

ಕೋವಿಡ್‌ ಸೋಂಕಿಗೆ ತುತ್ತಾಗುವ ಭೀತಿ ಇರುವುದರಿಂದ ಹಾಲುಣಿಸುವ ತಾಯಂದಿರಿಗೆ ಮಗು ಹುಟ್ಟಿದ ದಿನದಿಂದ ಕನಿಷ್ಠ ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು ಉದ್ಯೋಗದಾತರಿಗೆ ಸಲಹೆ ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ (ಯುಟಿ) ಪತ್ರ ಬರೆದಿದೆ.

ಈ ನಿಟ್ಟಿನಲ್ಲಿ ಹಾಲುಣಿಸುವ ತಾಯಂದಿರಿಗೆ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡುವ 1961ರ ಹೆರಿಗೆ ಸೌಲಭ್ಯ ಕಾಯಿದೆ ಸೆಕ್ಷನ್ 5 (5)ರ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ ಎಂದು ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ವಿಭಾ ಭಲ್ಲಾ ತಿಳಿಸಿದ್ದಾರೆ.

“ಕೋವಿಡ್‌ ಸಂದರ್ಭದಲ್ಲಿ ಹಾಲುಣಿಸುವ ತಾಯಂದಿರು ಹೆಚ್ಚು ದುರ್ಬಲರಾಗುವ ಸಾಧ್ಯತೆಗಳಿದ್ದು ಈ ವರ್ಗ ಕೊರೊನಾ ಸೋಂಕಿಗೆ ತುತ್ತಾಗದಂತೆ ರಕ್ಷಿಸುವ ಅಗತ್ಯವಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದರಿಂದ ತಾಯಿ ಹಾಗೂ ಮಗುವಿಗೆ ಸೋಂಕಿನಿಂದ ರಕ್ಷಣೆ ನೀಡಿದಂತಾಗುತ್ತದೆ ಎಂದು ಕೂಡ ವಿವರಿಸಲಾಗಿದೆ.

ಪತ್ರವನ್ನು ಇಲ್ಲಿ ಓದಿ:

Maternity_Benefit_Act_1961_Section_5_5_.pdf
Preview