Karnataka High Court and Covid
Karnataka High Court and Covid 
ಸುದ್ದಿಗಳು

[ಕೋವಿಡ್‌ ಹೆಚ್ಚಳ] ಸಾಧ್ಯವಾದಷ್ಟೂ ವಿಡಿಯೋ ಕಾನ್ಫರೆನ್ಸ್‌ ವಿಧಾನದಲ್ಲಿ ಪಾಲ್ಗೊಳ್ಳುವಂತೆ ವಕೀಲರಿಗೆ ಹೈಕೋರ್ಟ್‌ ಮನವಿ

Bar & Bench

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ವಿಧಾನದ ಮೂಲಕ ಪ್ರಕರಣಗಳ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ವಕೀಲರಿಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿ ಹೈಕೋರ್ಟ್‌ ಗುರುವಾರ ಮನವಿ ಮಾಡಿದೆ.

“ನಗರದಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲರು ಸಾಧ್ಯವಾದಷ್ಟೂ ಭೌತಿಕವಾಗಿ ನ್ಯಾಯಾಲಯಕ್ಕೆ ಬರುವುದನ್ನು ಕಡಿತಗೊಳಿಸಿ, ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಲಾಪದಲ್ಲಿ ಭಾಗವಹಿಸುವುದರತ್ತ ಗಮನಹರಿಸಬೇಕು ಎಂದು ಸಂಘದ ಸದಸ್ಯರಲ್ಲಿ ಮನವಿ ಮಾಡುತ್ತೇನೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಹೇಳಿದ್ದಾರೆ.

ವರ್ಚುವಲ್‌ ವಿಧಾನದ ಮೂಲಕವೇ ಕಲಾಪದಲ್ಲಿ ಭಾಗವಹಿಸುವಂತೆ ಸಿಜೆ ಓಕಾ ಅವರು ಎಲ್ಲಾ ವಕೀಲರಲ್ಲಿ ಮನವಿ ಮಾಡಿದ್ದಾರೆ. “ಸದ್ಯ ಕೋವಿಡ್‌ ಪರಿಸ್ಥಿತಿಯು ಹಿಂದಿನ ವರ್ಷದ ಜೂನ್‌ ಮತ್ತು ಜುಲೈನಲ್ಲಿನ ಸ್ಥಿತಿಗೆ ತೆರೆಳಿದೆ” ಎಂದು ಅವರು ಹೇಳಿದ್ದಾರೆ. ಕಕ್ಷಿದಾರರು ಈ ದಿನಗಳಲ್ಲಿ ಅಫಿಡವಿಟ್‌ಗಳು ಮತ್ತು ಮೆಮೊಗಳನ್ನು ಅಗಾಧ ಪ್ರಮಾಣದಲ್ಲಿ ಸಲ್ಲಿಸಿದ್ದಾರೆ ಎಂದು ಸಿಜೆ ಹೇಳಿದ್ದಾರೆ.

ಸದ್ಯಕ್ಕೆ ಹೈಕೋರ್ಟ್‌ ಹೈಬ್ರಿಡ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಕೀಲರು ವರ್ಚುವಲ್‌ ಅಥವಾ ಭೌತಿಕವಾಗಿ ಕಲಾಪದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.